www.karnatakatv.net : ದೇವನಹಳ್ಳಿ : ಪ್ರಸಾದ ತೆಗೆದುಕೊಳ್ಳಲು ದಲಿತ ಬಾಲಕ ದೇವಸ್ಥಾನಕ್ಕೆ ಹೋದಾಗ, ಸರ್ವಣಿಯ ಯುವಕ ಬಾಲಕನ ಮೇಲೆ ಹಲ್ಲೆ ನಡೆಸಿದ, ಹಲ್ಲೆ ವಿಚಾರಕ್ಕೆ ಸರ್ವಣಿಯ ಯುವಕನನ್ನ ಪ್ರಶ್ನೆ ಮಾಡಿದಕ್ಕೆ ದಲಿತ ಕುಟುಂಬದ ಮೇಲೆ ಮರಾಣಾಂತಿಕ ಹಲ್ಲೆ ಮತ್ತು ಬಾಲಕನ ತಾಯಿಯ ಗುಪ್ತಾಂಗದ ಮೇಲು ಹಲ್ಲೆ ನಡೆಸಿದ್ದಾರೆ, ವಿಶ್ವನಾಥಪುರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ರಕ್ಷಣೆ ನೀಡುವಂತೆ ದಲಿತ ಕುಟುಂಬ ಕಣ್ಣೀರು ಹಾಕಿದೆ.
ದೇವನಹಳ್ಳಿ ತಾಲೂಕು ರಾಮನಾಥಪುರ ಗ್ರಾಮದ ಮುನಿಆಂಜಿನಪ್ಪ ಕುಟುಂಬದ ಮೇಲೆ ಸರ್ವಣಿಯರ ಕುಟುಂಬದಿಂದ ಹಲ್ಲೆ ನಡೆಸಿದ್ದು, ಹಲ್ಲೆಯಿಂದ ಜರ್ಜರಿತರಾಗಿರುವ ಕುಟುಂಬ ಗ್ರಾಮದಲ್ಲಿ ನಮಗೆ ರಕ್ಷಣೆ ಬೇಕೆಂದು ಕಣ್ಣೀರು ಹಾಕುತ್ತಿದೆ, ದಲಿತರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಿಶೋರ್, ಮಂಜುನಾಥ್, ವೆಂಕಟೇಗೌಡ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಘಟನೆಯ ನಂತರ ಆರೋಪಿಗಳು ಪರಾರಿಯಾಗಿದ್ದಾರೆ.
ಸರ್ಕಾರಿ ಶಾಲೆ ಶಿಕ್ಷಕ ಮುನಿಆಂಜಿನಪ್ಪ ಮತ್ತು ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡುವ ಅರುಣಾ.ಕೆ.ಎಂ. ದಂಪತಿಗೆ ಇಬ್ಬರು ಮಕ್ಕಳು, ದಿನಾಂಕ 14-08-21ರಂದು ಶ್ರಾವಣ ಶನಿವಾರ ಹಿನ್ನಲೆ ಗ್ರಾಮದ ರಾಮನಾಥಪುರ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಇದ್ದು, ಇವರ ಕಿರಿಯ ಮಗ ಪ್ರಸಾದ ತೆಗೆದು ಕೊಳ್ಳಲು ದೇವಸ್ಥಾನಕ್ಕೆ ಹೋಗಿದ್ದಾನೆ ಸ್ನೇಹಿತರೊಂದಿಗೆ ಅಲ್ಲಿಯೇ ಆಟವಾಡುತ್ತಿದ್ದ, ಸರ್ವಣಿಯ ಜಾತಿಗೆ ಸೇರಿದ ಕಿಶೋರ್ ಎಂಬ ಯುವಕ ಬಾಲಕನನ್ನ ನೂಕಿ ಹಲ್ಲೆ ನಡೆಸಿದ, ಕಾಲಿಗೆ ಗಾಯವಾಗಿದ್ದರಿಂದ ಬಾಲಕನಿಗೆ ರಾತ್ರಿ ಜ್ವರ ಬಂದಿದೆ, ಬಾಲಕನ ತಾಯಿ ಅರುಣಾ ದಿನಾಂಕ 16-09-21 ರ ಮಧ್ಯಾಹ್ನ 4-15ರ ಸಮಯದಲ್ಲಿ ಡೇರಿಗೆ ಹಾಲು ಹಾಕಲು ಹೋದಾಗ ಎದುರಿಗೆ ಕಿಶೋರ್ ಸಿಕ್ಕಿದ್ದಾನೆ, ತನ್ನ ಮಗನಿಗೆ ಹಲ್ಲೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಅರುಣಾ ಕಿಶೋರ್ ನನ್ನ ಪ್ರಶ್ನೆ ಮಾಡಿದ್ದಾರೆ, ಇದರಿಂದ ಕೇರಳಿದ ಕಿಶೋರ್ ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದದಿಂದ ಬೈದಿದ್ದಾನೆ, ಅರಣಾರವರ ಪತಿ ಮುನಿಆಂಜಿನಪ್ಪ ಸಹ ಅಲ್ಲಿಗೆ ಬಂದಿದ್ದಾರೆ. ತನ್ನ ಸಂಬಂಧಿಕರಿಗೆ ಪೋನ್ ಮಾಡಿದ ಕಿಶೋರ್ ಸ್ಥಳಕ್ಕೆ ಮಂಜುನಾಥ್ ಮತ್ತು ವೆಂಕಟೇಗೌಡನನ್ನ ಕರಸಿಕೊಂಡಿದ್ದ. ಸರ್ವಣಿಯ ಜಾತಿಗೆ ಸೇರಿದ ಮೂವರು ಮುನಿಆಂಜಿನಪ್ಪ ಮತ್ತು ಅರುಣಾರವರ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ, ಅರುಣಾರವರ ಗುಪ್ತಾಂಗದ ಮೇಲು ಹಲ್ಲೆ ನಡೆಸಿದ್ದಾರೆ, ಠಾಣೆಗೆ ದೂರು ನೀಡುತ್ತಾರೆಂದು ಗ್ರಾಮದಿಂದ ಹೊರಗೆ ಹೋಗದಂತೆ ಬೆದರಿಕೆ ಹಾಕಿದ್ದಾರೆಂದು ದಲಿತ ಕುಟುಂಬ ಕಣ್ಣೀರು ಹಾಕಿ ತಮಗೆ ರಕ್ಷಣೆ ಕೊಡಬೇಕೆಂದು ಮನವಿ ಮಾಡಿದ್ದಾರೆ.
ಹೊಲಕ್ಕೆ ಹೋಗುವ ದಾರಿ ಒತ್ತುವರಿ, ಪ್ರಶ್ನೆ ಮಾಡಿದಕ್ಕೆ ಹಲ್ಲೆ.
ಮುನಿಆಂಜಿನಪ್ಪ ಹೊಲಕ್ಕೆ ಹೋಗುವ ದಾರಿಯನ್ನ ಒತ್ತುವರಿ ಮಾಡಿಕೊಂಡಿದ್ದರು, ಇದರಿಂದ ಹೊಲಕ್ಕೆ ಗೊಬ್ಬರ ಸಾಗಿಸಲು ಕಷ್ಟವಾಗಿತ್ತು, ದಾರಿ ಒತ್ತುವರಿ ಮಾಡಿದವರನ್ನ ಮುನಿಆಂಜಿನಪ್ಪ ಪ್ರಶ್ನೆ ಮಾಡಿದಕ್ಕೆ ದ್ವೇಷ ಸಾಧಿಸಿದ ಸವರ್ಣಿಯ ಕುಟುಂಬ ದಲಿತ ಕುಟುಂಬದ ಮೇಲೆ ಹಲ್ಲೆ ಮಾಡಿದೆ. ಗ್ರಾಮದಲ್ಲಿರುವ ಆಂಜನೇಯ ದೇವಸ್ಥಾನಕ್ಕೆ ಇಲ್ಲಿಯವರೆಗೂ ಪ್ರವೇಶ ನೀಡಿಲ್ಲ, ಬಹಳ ಹಿಂದಿನಿಂದಲೂ ಗ್ರಾಮದಲ್ಲಿ ದಲಿತರ ಮೇಲೆ ದಬ್ಬಾಳಿಕೆ ದೌರ್ಜನ್ಯ ನಡೆಯುತ್ತಿದೆ, ಆದರೆ ದಲಿತರು ಭಯದಿಂದ ಸಹಿಕೊಂಡು ಬಂದಿದ್ದಾರೆ.
ಆರೋಪಿಗಳು ಪರಾರಿ, ಶೀಘ್ರವೇ ಆರೋಪಿಗಳನ್ನ ಬಂಧಿಸುವಂತೆ ದಲಿತ ಸಂಘಟನೆಗಳ ಒತ್ತಾಯ.
ಘಟನೆ ನಂತರ ಆರೋಪಿಗಳಾದ ಕಿಶೋರ್, ಮಂಜುನಾಥ್, ವೆಂಕಟೇಗೌಡ ಪರಾರಿಯಾಗಿದ್ದಾರೆ, ಘಟನೆ ನಡೆದು 4 ದಿನವಾದರು ಆರೋಪಿಗಳನ್ನ ಬಂಧಿಸದೆ ಇರುವುದು ದಲಿತರ ಸಂಘಟನೆಗಳ ಅಕ್ರೋಶಕ್ಕೆ ಕಾರಣವಾಗಿದೆ, ಕೂಡಲೇ ಆರೋಪಿಗಳನ್ನ ಬಂಧಿಸುವಂತೆ ಒತ್ತಾಯ ಮಾಡಿದ್ದಾರೆ, ಮುನಿಆಂಜಿನಪ್ಪ ಮನೆಗೆ ಭೇಟಿ ನೀಡಿದ ದಲಿತ ಮುಖಂಡರು ಧೈರ್ಯ ತುಂಬಿದರು.
ಕರ್ನಾಟಕ ಟಿವಿ ದೇವನಹಳ್ಳಿ




