Friday, November 22, 2024

Latest Posts

ಜ್ಯೋತಿಷ್ಯದ ಪ್ರಕಾರ ಮಂಗಳವಾರ ಜನಿಸಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಗೊತ್ತಾ …?

- Advertisement -

Astrology:

ಮಂಗಳವಾರ ಆಂಜನೇಯನಿಗೆ ಸಮರ್ಪಿತವಾದ ದಿನವಾಗಿದೆ. ಈ ದಿನ ಹುಟ್ಟಿದವರ ಗುಣ, ಸ್ವಭಾವದ  ಸಂಗತಿಗಳ ಮಾಹಿತಿ ವಿವರಣೆ ಹೀಗಿದೆ. ಮಂಗಳವಾರ ತುಂಬಾ ಶುಭವಾದ ವಾರ. ಇದು ಶಕ್ತಿ ದೇವತೆಗಳಿಗೆ ಅತ್ಯಂತ ಪ್ರಿಯವಾದ ವಾರವಾಗಿರುತ್ತದೆ. ಇವರು ಹೆಚ್ಚು ದುರ್ಗಾದೇವಿಯನ್ನು ಆರಾಧನೆ ಮಾಡಿದರೆ ಒಳ್ಳೆಯದಾಗುತ್ತದೆ. ಮಂಗಳವಾರ ಹುಟ್ಟಿದವರಿಗೆ ಮಂಗಳ ಗ್ರಹದ ಪ್ರಭಾವ ಇರುತ್ತದೆ. ಅತಿಯಾದ ಕೋಪವನ್ನು ಹೊಂದಿರುತ್ತಾರೆ, ಮತ್ತು ಸಣ್ಣ ವಿಷಯಕ್ಕೂ ಇವರು ಜಗಳ ಮಾಡುತ್ತಾರೆ.ಇವರು ಧೈರ್ಯಶಾಲಿ ವ್ಯಕ್ತಿತ್ವವನ್ನು ಹೊಂದಿರುತ್ತಾರೆ.ಇವರಿಗೆ ಸವಾಲುಗಳನ್ನು ಎದುರಿಸುವುದೆಂದರೆ ಬಹಳ ಇಷ್ಟ ಹಾಗೂ ಯಾವುದೇ ವಿಷಯದಲ್ಲಿ ಬೇಗನೆ ಬಿಟ್ಟುಕೊಡುವುದಿಲ್ಲ.ಹಾಗೂ ಯಾವುದೇ ತಪ್ಪನ್ನು ಸ್ವೀಕರಿಸುವುದಿಲ್ಲ , ಇವರು ದುಬಾರಿ ,ಶಾಪಿಂಗ್ ಮಾಡಲು ಇಷ್ಟಪಡುತ್ತಾರೆ. ಇವರಿಗೆ ಅಡುಗೆ ಮಾಡುವುದರಲ್ಲಿ ಆಸಕ್ತಿ ಇರುವುದಿಲ್ಲ. ಅಡುಗೆ ಮಾಡುವುದೆಂದರೆ ಹೆಚ್ಚು ದುಃಖವನ್ನು ಅನುಭವಿಸುತ್ತಾರೆ.

ಮಂಗಳವಾರ ಜನಿಸಿದವರ ಉತ್ತಮ ಲಕ್ಷಣವೆಂದರೆ ಇವರು ಉತ್ತಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಈ ವ್ಯಕ್ತಿಗಳು ದೊಡ್ಡ ಸಮಸ್ಯೆಗಳನ್ನು ಅತಿಬೇಗ ಪರಿಹರಿಸುತ್ತಾರೆ. ಇವರ ವ್ಯಕ್ತಿತ್ವವು ತುಂಬಾ ಆಕರ್ಷಕವಾಗಿರುತ್ತದೆ, ಮತ್ತು ಸದಾ ನ್ಯಾಯದ ಕಡೆ ಇರುತ್ತದೆ. ಈ ಮೂಲಕ ಇತರರನ್ನು ಸುಲಭವಾಗಿ ಸೆಳೆದುಕೊಳ್ಳುವ ಗುಣವನ್ನು ಹೊಂದಿರುತ್ತಾರೆ.ಹಾಗೂ ಸದಾ ಹೊಸತನ್ನು ಕಲಿಯಲು ಇಷ್ಟಪಡುತ್ತಾರೆ. ತಾಂತ್ರಿಕ ಕೆಲಸ ಮತ್ತು ದೈಹಿಕ ಕೆಲಸದಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯುತ್ತಾರೆ.

ಈ ವ್ಯಕ್ತಿಗಳು ತಮ್ಮ ಕೆಲಸದ ಬಗ್ಗೆ ತುಂಬಾ ಪ್ರಾಮಾಣಿಕವಾಗಿರುತ್ತಾರೆ .ಹಾಗೂ ಇವರು ಪರಿಪೂರ್ಣ ಹೃದಯ ಮತ್ತು ಶುದ್ಧ ಆಲೋಚನೆಗಳನ್ನ ಹೊಂದಿರುತ್ತಾರೆ. ಇವರು ಎಲ್ಲದರಲ್ಲೂ ದೌರ್ಬಲ್ಯಗಳನ್ನು ಹುಡುಕಲು ಪ್ರಯತ್ನಿಸುತ್ತಾರೆ,ಮತ್ತು ಕೆಲವೊಮ್ಮೆ ಹಿಂಸಾತ್ಮಕರಾಗುತ್ತಾರೆ. ಈ ವ್ಯಕ್ತಿಗಳು ಸಣ್ಣ ವಿಷಯಗಳ ಬಗ್ಗೆಯೂ ಹಾಸ್ಯವನ್ನು ಮಾಡಿದರೆ ಸಹಿಸುವುದಿಲ್ಲ.ಅವರ ಸಕಾರಾತ್ಮಕ ಗುಣವೆಂದರೆ ಅವರು ತಮ್ಮ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ತಮ್ಮ ಕ್ಷೇತ್ರದಲ್ಲಿ ಒಳ್ಳೆಯ ಹೆಸರನ್ನು ಗಳಿಸುತ್ತಾರೆ, ಸಂತೋಷ ಸಂಪತ್ತನ್ನು ಹೊಂದಿರುತ್ತಾರೆ, ಶತ್ರುಗಳ ಬಗ್ಗೆ ಅಸಹನೆಯನ್ನು ಬಹುಬೇಗ ಹೊರಹಾಕುತ್ತಾರೆ.

ಮಂಗಳವಾರ ಜನಿಸಿದವರು ಸ್ನಾಯುವಿನ ದೇಹವನ್ನು ಹೊಂದಿರುತ್ತಾರೇ. ದೈಹಿಕ ನೋಟದಿಂದಾಗಿ,ಇವರು ಪೋಲಿಸ್ ಅಥವಾ ಸೈನ್ಯದಲ್ಲಿ ನೇಮಕಗೊಳ್ಳುವ ಸಾಧ್ಯತೆಗಳು ಹೆಚ್ಚಾಗುತ್ತವೆ, ಪೊಲೀಸ್, ಸೈನ್ಯ, ಮೆಕ್ಯಾನಿಕ್, ಇಂಜಿನಿಯರ್, ಮಾರ್ಕೆಟಿಂಗ್ ಅಥವಾ ಮೆಷಿನರಿ ಇತ್ಯಾದಿಗಳಲ್ಲಿ ಹೆಚ್ಚು ಯಶಸ್ವಿಯಾಗುತ್ತಾರೆ ಹಾಗೂ ಉತ್ತಮ ಪ್ರೀತಿ ಮತ್ತು ವೈವಾಹಿಕ ಜೀವನವನ್ನು ಹೊಂದಿರುತ್ತಾರೆ. ಸುಂದರವಾದ ಜೀವನ ಸಂಗಾತಿಯನ್ನು ಪಡೆಯುತ್ತಾರೆ.

ಮಂಗಳವಾರ ಜನಿಸಿದವರ ಪ್ರೀತಿಯ ಜೀವನ :
ಇವರು ಯಾರಾನ್ನಾದರೂ ಪ್ರೀತಿಸಲು ಪ್ರಾರಂಭಿಸಿದರೆ ಅವರಿಗೋಸ್ಕರ ಏನೂ ಬೇಕಾದರೂ ಮಾಡಲು ಸಿದ್ದರಿರುತ್ತಾರೆ ,ಸದಾ ಯಾವುದೋ ಆಲೋಚನೆಗಳಲ್ಲಿಯೇ ಮುಳುಗಿರುವುದರಿಂದ ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಲು ಕಷ್ಟವಾಗುತ್ತದೆ. ನಿಮ್ಮ ಪ್ರೀತಿಯನ್ನು ಕಂಡುಕೊಳ್ಳಲು ನಿಮ್ಮ ಸಂಗಾತಿಯ ಭಾವನಾತ್ಮಕ ಅಗತ್ಯಗಳನ್ನು ನೀವು ಪರಿಗಣಿಸುವುದು ಮುಖ್ಯ. ನೀವು ಯಾವಾಗಲೂ ಯಾವುದೇ ಮುಂದಾಲೋಚನೆ ಇಲ್ಲದೆ ಮಾತನಾಡುತ್ತೀರಿ ನೀವು ಮಾತನಾಡುವ ಮೊದಲು ಎರಡು ಅಥವಾ ಮೂರು ಬಾರಿ ಯೋಚಿಸಿ. ಈ ನಿಲುವು ನಿಮ್ಮ ಮತ್ತು ನಿಮ್ಮ ಪ್ರೀತಿಯ ಸಂಗಾತಿಯ ನಡುವೆ ಸಾಮರಸ್ಯ ಮತ್ತು ಉತ್ತಮ ತಿಳುವಳಿಕೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡಿಕೊಡುತ್ತದೆ. ಈ ದಿನ ಜನಿಸಿದವರು ದೈಹಿಕವಾಗಿ ಆರೋಗ್ಯವಾಗಿರುತ್ತಾರೆ. ಹಾಗೂ ತಮ್ಮ ಆರೋಗ್ಯದ ಬಗ್ಗೆ ಬಹಳ ಜಾಗೃತರಾಗಿರುತ್ತಾರೆ. ಇದರಿಂದಾಗಿ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಎದುರಾಗುತ್ತದೆ. ರಕ್ತ ಸಂಬಂಧಿತ ಹಾಗೂ ಕೆಲವು ರೀತಿಯ ಸೋಂಕು ತಗಲುವ ಸಾಧ್ಯತೆ ಇರುತ್ತದೆ.

ಅದೃಷ್ಟದ ಬಣ್ಣ – ಕೆಂಪು ಮತ್ತು ಮರೂನ್
ಅದೃಷ್ಟ ಸಂಖ್ಯೆ – 3,6,9
ಇವರು ಮಂಗಳವಾರ ದಾನಧರ್ಮಗಳನ್ನು ಮಾಡುವುದು ಬಹಳ ಉತ್ತಮ ಎಂದು ಹೇಳಲಾಗುತ್ತದೆ.

ನಿಮ್ಮ ಕೈಯಲ್ಲಿ ಈ ರೇಖೆ ಇದ್ಯಾ ಹಾಗಿದ್ರೆ ನೀವು ತುಂಬಾ ಲಕ್ಕಿ….!

ಶುಕ್ರನ ಸಂಚಾರದಿಂದ ಈ 5 ರಾಶಿಗಳಿಗೆ ದೀಪಾವಳಿಗೂ ಮುನ್ನ ಒಲಿಯಲಿದ್ದಾಳೆ ಲಕ್ಷ್ಮೀ….!

ದೀಪಾವಳಿಯ ದಿನ ಈ ಮೂರು ಕೆಲಸ ಮಾಡಿ ಸಂಪತ್ತು ಮತ್ತು ಸಮೃದ್ಧಿ ಖಂಡಿತ ವೃದ್ಧಿಯಾಗುತ್ತದೆ….!

 

- Advertisement -

Latest Posts

Don't Miss