Devotional :
ವೈದ್ಯ ದೇವತೆಗಳು ಅಥವಾ ಅಶ್ವಿನೀದೇವತೆಗಳು, ಈ ಹೆಸರನ್ನು ನೀವೂ ಸಾಮಾನ್ಯವಾಗಿ ಕೇಳೆ ಇರುತ್ತೀರಿ. ಆದರೆ ಇವರ ಬಗ್ಗೆ ನಿಮಗೆ ಸರಿಯಾಗಿ ತಿಳಿದಿಲ್ಲ ಎನ್ನಬಹುದು. ಹಾಗಾದರೆ ಈ ಅಶ್ವಿನೀ ದೇವತೆಗಳು ಯಾರು ಎಂದು ತಿಳಿದು ಕೊಳ್ಳೋಣ.
ಅಶ್ವಿನೀ ದೇವತೆಗಳು ಎಲ್ಲರೂ ಸೂರ್ಯನ ಪುತ್ರರೆ ,ಕೇಳಿದರೇ ಆಶ್ಚರ್ಯವಾಗುತ್ತದೆ ಆದರೆ ಇದೆಸತ್ಯ. ಸೂರ್ಯನ ಹೆಂಡತಿ ಹೆಸರು ಸಂಜ್ಞಾದೇವಿ, ಆಕೆಯು ಸೂರ್ಯನ ತೇಜಸ್ಸನ್ನು ತಡೆದುಕೊಳ್ಳಲು ಆಗದೆ, ಅಶ್ವರೂಪತಾಳಿ ಕುರುದೇಶಕ್ಕೆ ಹೋಗಿ ಅಲ್ಲಿಯೇ ವಾಸವಾಗುತ್ತಾಳೆ. ಹೆಂಡತಿಯನ್ನು ಬಿಟ್ಟುಇರಲಾರದೆ ಸೂರ್ಯನು ಸಹ ಅಶ್ವರೂಪತಾಳಿ ಹೆಂಡತಿಯ ಹತ್ತಿರಕ್ಕೆ ಹೋಗುತ್ತಾನೆ. ಹಾಗೆ ಅವರಿಬ್ಬರಿಗೂ ಹುಟ್ಟಿದ ಸಂತಾನವೆ ಅಶ್ವನೀದೇವತೆಗಳು, ಇದೆಲ್ಲ ವಿಷ್ಣುಪುರಾಣದಲ್ಲಿ ನಾವೂ ನೋಡಬಹುದು. ಆದರೆ ಈ ಅಶ್ವಿನಿ ದೇವತೆಗಳು ಯಾರು ಎಂದರೆ, ದೇವತೆಗಳಿಗೆ ವೈದ್ಯರು ಎಂದು ಪುರಾಣಗಳು ಹೇಳುತ್ತವೆ. ಯುದ್ಧಗಳಲ್ಲಿ ಗಾಯಗೊಂಡಿರುವ ದೇವತೆಗಳಿಗೆ ಇವರು ಚಿಕಿತ್ಸೆ ಮಾಡುವವರು ಆದುದರಿಂದ ಅವರು ದೇವತಗಳಿಗೆ ವೈದ್ಯರು ಎಂದು ಪುರಾಣ ಕಥೆಗಳು ಹೇಳುತ್ತದೆ.
ಆದರೆ ಈ ಅಶ್ವಿನಿ ದೇವತೆಗಳ ವಿಷಯದಲ್ಲಿ ಒಂದು ಆಸಕ್ತಿದಾಯಕ ಕಥೆ ಇದೆ, ಅದೇ ಸುಕನ್ಯಳನ್ನು ಪರೀಕ್ಷಿಸುವುದು…
ಶರ್ವತಿ ಎನ್ನುವ ಒಬ್ಬ ರಾಜಾನಿದ್ದನು ಅವನಿಗೆ ಬಹಳ ವರ್ಷಗಳಾದರೂ ಮಕ್ಕಳು ಹುಟ್ಟಲಿಲ್ಲ, ಮಕ್ಕಳು ಹುಟ್ಟದ ಕಾರಣ ಅವರು 4000 ಮಂದಿಯನ್ನು ಮದುವೆ ಮಾಡಿಕೊಂಡಿದ್ದರು, ಆದರೂ ಅವರಿಗೆ ಮಕ್ಕಳಾಗಲಿಲ್ಲ.ಅವರ ಅದೃಷ್ಟದಿಂದ ಒಬ್ಬ ಹೆಣ್ಣಿನಿಂದ ಒಂದು ಹೆಣ್ಣು ಮಗು ಜನಿಸುತ್ತದೆ. ಆ ಮಗುವಿಗೆ ಸುಕನ್ಯ ಎಂದು ನಾಮಕಾರಣ ಮಾಡುತ್ತಾರೆ, ಹಾಗೂ ಅತಿ ಮುದ್ದಿನಿಂದ ಆ ಮಗುವನ್ನು ಬೆಳೆಸುತ್ತಾರೆ, ಬೆಳೆಯುತ್ತಾ ಇದ್ದಹಾಗೆ ಅತ್ಯಂತ ಸೌಂದರ್ಯವತಿಯಾಗಿ ಬೆಳೆಯುತ್ತಾಳೆ. ಶರ್ವತಿ ರಾಜನ ರಾಜ್ಯಕ್ಕೆ ಹತ್ತಿರದಲ್ಲಿ ಒಂದು ನಂದನ ವನವಿರುತ್ತದೆ. ಅಲ್ಲಿ ಚ್ಯವನ ಮಹರ್ಷಿ ತಪಸ್ಸು ಮಾಡಿಕೊಂಡು ಇರುತ್ತಿದ್ದರು. ಬಹಳ ವರ್ಷಗಳಿಂದ ಅಲ್ಲೆಯೇ ತಪಸ್ಸು ಮಾಡಿರುವುದರಿಂದ ಅವರ ಸುತ್ತಲೂ ಗಿಡಗಳು, ಹುತ್ತಗಳು ಬಹಳ ಎತ್ತರಕ್ಕೆ. ಬೆಳೆದಿರುತ್ತದೆ ದಿನಾಗಲೂ ರಾಣಿಯರು ತಮ್ಮ ಪುತ್ರಿ ಸುಕನ್ಯಳನ್ನು ಈ ಉದ್ಯಾನವನಕ್ಕೆ ಕರೆದುಕೊಂಡು ಹೋಗುತ್ತಿದ್ದರು, ಒಮ್ಮೆ ಸುಕನ್ಯ ಆಟವಾಡುತ್ತಾ ಅಲ್ಲೇ ತಿರುಗಾಡುತ್ತಾ ಆ ಹುತ್ತದ ಹತ್ತಿರ ಹೋಗುತ್ತಾಳೆ, ಅವಳಿಗೆ ಅಲ್ಲಿ ಹುತ್ತದ ಒಳಗೆ ಏನೋ ಒಂದು ಪ್ರಕಾಶಮಾನವಾಗಿ ಕಾಣಿಸುತ್ತದೆ ಆಗ ಅವಳು ಒಂದು ಕಡ್ಡಿಯನ್ನು ತೆಗೆದುಕೊಂಡು ಒಳಗಡೆಗೆ ಚುಚ್ಚುತ್ತಾಳೆ. ಆದರೆ ಹುತ್ತದಲ್ಲಿ ತಪಸ್ಸು ಮಾಡುತ್ತಿರುವ ಚ್ಯವನ ಮಹರ್ಷಿ ಕಣ್ಣುಗಳು ಪ್ರಕಾಶಮಾನವಾಗಿ ಕಾಣಿಸಿರುವುದು ಅವಳಿಗೆ ಗೊತ್ತಿರಲಿಲ್ಲ. ಸುಕನ್ಯಾ ಕಡ್ಡಿಯಲ್ಲಿ ಚುಚ್ಚಿದ ನಂತರ ,ಚ್ಯವನ ಮಹರ್ಷಿ ಕಣ್ಣಲ್ಲಿ ರಕ್ತ ಬಂದು ಅವನಿಗೆ ಕಣ್ಣು ಕುರಾಗುತ್ತದೆ. ಆದರೂ ಅವನು ಕೋಪ ಮಾಡಿಕೊಳ್ಳದೆ ಸುಕನ್ಯನು ಶಪಿಸುವುದಿಲ್ಲ .
ನಂತರ ರಾಜ ,ರಾಣಿ ಸುಕನ್ಯನನ್ನು ಕರೆದುಕೊಂಡು ಮನೆಗೆ ಹೋಗುತ್ತಾರೆ. ಅಂದಿನಿಂದ ರಾಜ್ಯದಲ್ಲಿ ಮಳೆ ಇಲ್ಲದೆ ,ಬೆಳೆಗಳು ನಾಶವಾಗಿ, ಜನರೆಲ್ಲರು ತೊಂದರೆ ಗೊಳಗಾಗುತ್ತಾರೆ. ಆಗ ಶರ್ವತಿ ರಾಜು ಇಷ್ಟು ದಿನ ತುಂಬಾ ಸಂತೋಷವಾಗಿರುವ ರಾಜ್ಯವು ಇಗ ಅಕ್ಶಸ್ಮಿಕವಾಗಿ ಏನಾಯಿತು ಎಂದು ದುಃಖಿಸುತ್ತಿರುತ್ತಾನೆ, ಆಗ ಸುಕನ್ಯ ಅಲ್ಲಿಗೆ ಬಂದು ತಾನು ಮಾಡಿದ ತಪ್ಪುನ್ನು ಹೇಳುತ್ತಾಳೆ. ಆಗ ರಾಜ, ಚ್ಯವನ ಮುನಿ ಬಳಿ ಹೋಗಿ ತನ್ನನ್ನು ಕ್ಷಮಿಸುವಂತೆ ಕೋರುತ್ತಾರೆ, ಕ್ಷಮಿಸುತೆನೆ ಆದರೆ ಸುಕನ್ಯಳನ್ನು ನನಗೆ ಕೊಟ್ಟು ವಿವಾಹ ಮಾಡಬೇಕು ಎಂದು ಕೋರುತ್ತಾನೆ. ರಾಜ ಮನೋವ್ಯಧ ಹೊಂದಿ ಸುಕನ್ಯ ತನ್ನ ತಂದೆಯನ್ನು ಅನುನಯಿಸಿ ,ಅವಳು ಚ್ಯವನ ಮುನಿಯನ್ನು ವಿವಾಹ ಮಾಡಿಕೊಂಡು ಅವನಿಗೆ ಸೇವೆ ಮಾಡುತ್ತಾ ಇರುತ್ತಾಳೆ. ಅಶ್ವನೀ ಕುಮಾರರು ಇದನ್ನು ಗಮನಿಸಿ ಅಲ್ಲಿಗೆ ಬಂದು ನಾವೂ ಚ್ಯವನ ಮುನಿಯ ಅಂಧತ್ವವನ್ನು ಹೋಗಲಾಡಿಸುತೇವೆ, ಆದರೆ ನಮ್ಮಲ್ಲಿ ನೀನು ಒಬ್ಬರನ್ನು ವಿವಾಹವಾಗು ಎಂದು ಕೇಳುತ್ತಾರೆ, ಆದರೆ ಸುಕನ್ಯ ಅದನ್ನು ನಿರಾಕರಿಸುತ್ತಾಳೆ ಅಶ್ವನೀ ಕುಮಾರರು ಚ್ಯವನುನಿ ಅಂಧತ್ವವನ್ನು ಹೋಗಲಾಡಿಸಿ, ನಾವೂ ಸಹ ಚ್ಯವನುನಿ ರೂಪವನ್ನು ತಾಳುತ್ತೆವೆ ಅದರಲ್ಲಿ ನಿನಗೆ ಇಷ್ಟ ಬಂದಿರುವರನ್ನು ವಿವಾಹವಾಗು ಎಂದು ಹೇಳುತ್ತಾರೆ. ನಂತರ ಚ್ಯವನುನಿ ಅಂಧತ್ವವನ್ನು ಹೋಗಲಾಡಿಸಿ ಅಶ್ವಿನಿ ಕುಮಾರರು ಸಹ ಚ್ಯವನ ಮುನಿರೂಪವನ್ನು ತಾಳುತ್ತಾರೆ. ಆದರೆ ಸುಕನ್ಯ ಆ ಮೂರೂ ಜನರಲ್ಲಿ ನಿಜವಾದ ಚ್ಯವನ ಮುನಿಯದ ತನ್ನ ಗಂಡನನ್ನೇ ಆಯ್ದು ಕೊಳ್ಳುತ್ತಾಳೆ. ಹೀಗೆ ಅವರು ಸುಕನ್ಯಾಳನ್ನು ಪರೀಕ್ಷಿಸುವುದರಿಂದ ಆಕೆಯ ಶ್ರೇಷ್ಠತನ ಎಲ್ಲರಿಗೂ ತಿಳಿಯುತ್ತದೆ .
ನಕುಲ ಸಹದೇವರ ಹುಟ್ಟಿನ ಹಿಂದೆ ಕೂಡ ಅಶ್ವಿನೀದೇವತೆಯ ಪಾತ್ರವಿದೆ ಎಂದು ಹೇಳಲಾಗಿದೆ. ವ್ಯಸರ ಮಂತ್ರ ಶಕ್ತಿಯಿಂದ ಕುಂತಿಗೆ, ಕರ್ಣ, ಧರ್ಮರಾಜು, ಭೀಮ, ಅರ್ಜುನ, ಜನಿಸುತ್ತಾರೆ . 5 ಮಂತ್ರವನ್ನು ಕಂತಿಯು ತನ್ನ ಸವತಿಗೆ ಉಪದೇಶಿಸಾಗ ಆ ಮಂತ್ರದ ಮಹಿಯಿಂದ ಅವಳು ಅಶ್ವಿನಿ ದೇವತಗಳನ್ನು ಧ್ಯಾನಿಸಿ ನಕುಲ ಸಹದೇವರಿಗೆ ಜನ್ಮ ನೀಡುತ್ತಾಳೆ ಎಂದು ಪುರಾಣ ಕಥೆಗಳು ಹೇಳುತ್ತದೆ .ಹೀಗೆ ದೇವಗಳಿಗೆ ವೈದ್ಯ ಮಾಡುವ ಅಶ್ವಿನೀ ದೇವತಾಳ ಪಾತ್ರ ಪುರಾಣಗಳಲ್ಲಿ ಹಲವು ಸಂದರ್ಬಗಳಲ್ಲಿ ಇದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಮ್ಮ ರೊಮ್ಯಾಂಟಿಕ್ ಲೈಫ್‌ಗಾಗಿ ಗುಟ್ಟು…!