karnataka tv Political News | ಮಾಜಿ ಸಚಿವ ಎ ಮಂಜುಗೆ ಬಹುತೇಕ ಅರಕಲಗೂಡು ಕ್ಷೇತ್ರದ ಜೆಡಿಎಸ್ ಟಿಕೆಟ್ ಕನ್ಫರ್ಮ್ ಆಗಿದೆ. 30 ವರ್ಷ ಜೆಡಿಎಸ್ ವಿರೋಧಿ ರಾಜಕಾರಣ ಮಾಡಿದ ಎ ಮಂಜುಗೆ ಜೆಡಿಎಸ್ ಟಿಕೆಟ್ ಘೋಷಣೆ ಹಿಂದೆ ಬೇರೆಯದ್ದೇ ಲೆಕ್ಕಾಚಾರ ಇದೆ ಎಂದು ಅರಕಲಗೂಡಿನ ಹಾಲಿ ಜೆಡಿಎಸ್ ಶಾಸಕ ಎ.ಟಿ ರಾಮಸ್ವಾಮಿ ಆರೋಪಿಸಿದ್ದಾರೆ. ಸಂಸದ ಪ್ರಜ್ವಲ್ ರೇವಣ್ಣ ಚುನಾವಣಾ ಆರೋಗಕ್ಕೆ ತಪ್ಪು ಮಾಹಿತಿ ಕೊಟ್ಟ ಪ್ರಕರಣ ಇದೀಗ ಶಿಕ್ಷೆ ಪ್ರಕಟ ಆಗುವ ಹಂತಕ್ಕೆ ಬಂದಿತ್ತು. ಅದರಲ್ಲಿ ಪ್ರಜ್ವಲ್ ರೇವಣ್ಣ ಸಂಸದ ಸ್ಥಾನದಿಂದ ಅನರ್ಹ ಆಗುವ ಸಂಭವವಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಎ ಮಂಜು ಪ್ರಜ್ವಲ್ ವಿರುದ್ಧ ಸ್ಪರ್ಧಿಸಿ ಸೋತಿದ್ರು ನಂತರ ಕೋರ್ಟ್ ಕಟಕಟೆ ಹತ್ತಿದ್ರು.. ಈಗ ಜೆಡಿಎಸ್ ಟಿಕೆಟ್ ಎ ಮಂಜುಗೆ ಕೊಡುವುದರಿಂದ ಆ ಪ್ರಕರಣದಿಂದ ಬಚಾವಾಗಲು ರೇವಣ್ಣ ತಂತ್ರ ಮಾಡಿದ್ದಾರೆ ಎಂದು ಎ.ಟಿ ರಾಮಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಹಾಳಿ ಜೆಡಿಎಸ್ ಶಾಸಕರಾಗಿದ್ರು ಎ.ಟಿ ರಾಮಸ್ವಾಮಿ ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ರು. ಜೊತೆಗೆ ಕಾಂಗ್ರೆಸ್ ಸೇರಲು ಮಾತಉಕತೆಗೆ ಮುಂದಾಗಿದ್ರು. ಈ ಗ್ಯಾಪಲ್ಲಿ ಕಾಂಗ್ರೆಸ್ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆಯಾದ ಹಿನ್ನೆಲೆ ಎ ಮಂಜು 30 ವರ್ಷದ ರಾಜಕೀಯವಾಗಿ ವಿರೋಧ ಮಾಡಿದ ಜೆಡಿಎಸ್ ಬಾಗಿಲು ಬಡಿದು ಟಿಕೆಟ್ ಪಡೆಯುವಲ್ಲಿ ಬಹುತೇಕ ಸಕ್ಸಸ್ ಆಗಿದ್ದಾರೆ. ಇದು ಎಟಿ ರಾಮಸ್ವಾಮಿಯವರಿಗೆ ನುಂಗಲಾರದ ತುತ್ತಾಗಿದೆ. ಅತ್ತ ಕಾಂಗ್ರೆಸ್ ನಾಯಕರು ಕೂಡ ಸ್ಪಂಧಿಸದೆ ಇರೋದು ಎಟಿ ರಾಮಸ್ವಾಂಇ ಅತಂತ್ರವಾಗುವಂತೆ ಮಾಡಿದೆ. ಇದೀಗ ಎಟಿ ರಾಮಸ್ವಾಮಿ ಬಿಜೆಪಿ ನಾಐಕರ ಜೊತೆ ಚರ್ಚೆ ಮಾಡಿದ್ದಾರೆ ಎನ್ನಲಾಗ್ತಿದ್ದು ಮುಂದೆ ಏನಾಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ
ಪೊಲಿಟಿಕಲ್ ಬ್ಯೂರೋ, ಕರ್ನಾಟಕ ಟಿವಿ
ಈ ಬಜೆಟ್ ಬೊಮ್ಮಾಯಿ ಚುನಾವಣಾ ಗಿಮಿಕ್ : ಪೃಥ್ವಿ ರೆಡ್ಡಿ | Karnataka tv
ಈ ಬಜೆಟ್ ಬೊಮ್ಮಾಯಿ ಚುನಾವಣಾ ಗಿಮಿಕ್ : ಪೃಥ್ವಿ ರೆಡ್ಡಿ | Karnataka tv