Saturday, April 19, 2025

Latest Posts

DK Shivakmar: ಅಥಣಿಯ ಪಶು ವೈದ್ಯಕೀಯ ವಿದ್ಯಾಲಯ ಕಾಮಗಾರಿ ಉದ್ಘಾಟನಾ ಕಾರ್ಯಕ್ರಮ

- Advertisement -

ಬೆಳಗಾವಿ: ಕಾಂಗ್ರೆಸ್‌ ಬಾವಿಯಲ್ಲಿನ ನೀರು ತೆಗೆದುಕೊಂಡು ಈ ರಾಜ್ಯದ ಕೊಳೆ ತೆಗೆಯಬೇಕು ಎಂದು ಶಪಥಮಾಡಿ ಯಶಸ್ವಿಯಾದೆವು, ಇಲ್ಲಿಂದ ಪ್ರಾರಂಭವಾದ ಕೊಳೆ ತೆಗೆಯುವ ಕೆಲಸ ಇಡೀ ರಾಜ್ಯವನ್ನು ಶುದ್ದಮಾಡಿತು. ಡಬಲ್‌ ಎಂಜಿನ್‌ ಸರ್ಕಾರ ಇದ್ದರೂ ಸಹ ನಾವು ಗ್ಯಾರಂಟಿ ಯೋಜನೆ ಮಾಡೋಕೆ ಆಗಲಿಲ್ಲವಲ್ಲ ಎಂದು ಈ ಬಿಜೆಪಿಯವರು ಈಗ ಕೈ ಹೊಸಕಿಕೊಳ್ಳುತ್ತಿದ್ದಾರೆ.

ಇಡೀ ಅಥಣಿ ಕ್ಷೇತ್ರ ನೀರಾವರಿ ಸೌಲಭ್ಯ ಪಡೆದುಕೊಂಡು ಸಮೃದ್ಧವಾಗಬೇಕು ಎಂಬುದು ಲಕ್ಷ್ಮಣ ಸವದಿ ಅವರ ಬಹುದಿನಗಳ ಕನಸು. ಇದನ್ನು ಸರ್ಕಾರ ಆದಷ್ಟು ಬೇಗ ಈಡೇರಿಸುವುದು.

ಲಕ್ಷ್ಮಣ ಸವಧಿ ಅವರು ಸೂಕ್ತ ಸಮಯದಲ್ಲಿ, ಸೂಕ್ತ ನಿರ್ಧಾರವನ್ನು ತೆಗೆದುಕೊಂಡು ಸ್ವಾಭಿಮಾನಕ್ಕೆ ಪೆಟ್ಟು ಕೊಟ್ಟಂತಹ ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ. ಸವಧಿ ಅವರು ಕ್ಷೇತ್ರದ ಅಭಿವೃದ್ದಿಯ ವಿಚಾರದಲ್ಲಿ ಸಾಕಷ್ಟು ಮುಂದಾಲೋಚನೆ ಇರುವಂತಹ ವ್ಯಕ್ತಿ. ಕ್ಷೇತ್ರದ ಪ್ರತಿಯೊಬ್ಬರು ಚಿನ್ನದ ತಟ್ಟೆಯಲ್ಲಿ ಊಟ ಮಾಡಬೇಕು ಎನ್ನುವ ಆಶಯ ಹೊಂದಿರುವವರು.

ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ಈ ರಾಜ್ಯಕ್ಕೆ ಹೊಸ ರೂಪವನ್ನು ನೀಡುವುದ್ದಕ್ಕೆ ಯೋಜನೆ ರೂಪಿಸಿದ್ದೇವೆ. ಬೆಳಗಾವಿ ಗಡಿ ಭಾಗದಲ್ಲಿ ಇಂತಹ ಸುಸಜ್ಜಿತವಾದಂತಹ ಪಶು ವೈದ್ಯಕೀಯ ಆಸ್ಪತ್ರೆ ನಿರ್ಮಾಣ ಮಾಡಿರುವುದು ಉತ್ತಮ ಬೆಳವಣಿಗೆ.

ಕ್ಷೇತ್ರದ ಬೆಳವಣಿಗೆ ಜೊತೆಗೆ ಉದ್ಯೋಗ ಸೃಷ್ಟಿಯಾಗುತ್ತದೆ ಈ ಜಿಲ್ಲೆಯಿಂದಲೇ ಹೊಸ ಬದಲಾವಣೆಯನ್ನು ಪ್ರಾರಂಭ ಮಾಡುತ್ತೇವೆ.

ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಖಚಿತ. ಇದರ ಮದ್ಯೆ ನಾವೇನು ಒಳ್ಳೆಯ ಕೆಲಸ ಮಾಡುತ್ತೇವೆ ಎನ್ನುವುದು ಮುಖ್ಯವಾದ ವಿಚಾರ. ಅಂತಹ ಅಭಿವೃದ್ದಿ ಪರವಾದ ದೂರದೃಷ್ಟಿಯನ್ನು ಹೊಂದಿರುವಂತಹ ನಾಯಕ ಲಕ್ಷ್ಮಣ ಸವದಿ.

ಮರಕ್ಕೆ ಬೇರು ಎಷ್ಟು ಮುಖ್ಯವೂ, ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ, ನಮ್ಮ ಕಾಂಗ್ರೆಸ್‌ ಪಕ್ಷದ ಮೇಲೆ ನಂಬಿಕೆಯನ್ನು ಇಟ್ಟು, ಭವಿಷ್ಯದ ಮೇಲೆ ನಂಬಿಕೆ ಇಟ್ಟು ಬಂದಿದ್ದಾರೆ. ಈ ದೇಶವನ್ನು ಕಾಪಾಡುವ ಏಕೈಕ ಪಕ್ಷ ಕಾಂಗ್ರೆಸ್‌.

CM Siddaramaiah: ಗ್ಯಾರಂಟಿ ಜಾರಿಯಿಂದ ರಾಜ್ಯದ ಜಿಡಿಪಿ ಹೆಚ್ಚಳ:

Basavaraj Bommai: ರಾಹುಲ್ ಗಾಂಧಿ ಎಟಿಎಂ ಕಾಂಗ್ರೆಸ್ ಸರ್ಕಾರದ ಮುಲಾಜಿನಲ್ಲಿದ್ದಾರೆ..!

- Advertisement -

Latest Posts

Don't Miss