Thursday, November 27, 2025

Latest Posts

Ati Amavase : ಆಟಿ ಅಮವಾಸ್ಯೆಗೆ ಹಾಲೆ ಮರದ ಕಷಾಯ ವಿಶೇಷ ಏಕೆ..?!

- Advertisement -

Manglore News: ತುಳುನಾಡಿನ ಜನರಿಗೆ ಆಟಿ ಅಮವಾಸ್ಯೆ ಅನ್ನೋದು ಒಂದು ವಿಶೇಷವಾದ ಹಬ್ಬ. ಈ  ದಿನದಂದು ವಿಶೇಷವಾದ ಹಾಲೆ ಮರದ ಕಷಾಯ ಕುಡಿಯೋದು ಸಂಪ್ರದಾಯ.

ಪಾಲೆ ಮರದ ಕಷಾಯ ಅಂದರೆ ಪಾಲೆದ ಕಷಾಯಕ್ಕೆ ವಿಶೇಷ ಬೇಡಿಕೆ ಇದೆ.ಮನೆಯಿಂದ ಹೊರಗೆ ಇಳಿಯಲೂ ಸಾಧ್ಯವಾಗದಂತೆ ಧಾರಾಕಾರ ಮಳೆ ಬರುವ ಆಟಿ ತಿಂಗಳಲ್ಲಿ ಬರುವ ಇದು ಆರೋಗ್ಯ ದೃಷ್ಟಿಯಿಂದ, ಸಾಮಾಜಿಕವಾಗಿ, ಧಾರ್ಮಿಕವಾಗಿ ಪ್ರಾಮುಖ್ಯ.

ರೋಗನಿರೋಧಕ ಗುಣ ಇರುವ ಪಾಲೆ (ಹಾಲೆ) ಮರದ ತೊಗಟೆಯ ಈ ರಸವನ್ನು ಆಟಿ ಅಮಾವಾಸ್ಯೆ ದಿನದಂದು ಮದ್ದಿನ ರೀತಿಯಲ್ಲಿ ಕುಡಿಯುವ ಪದ್ಧತಿ ಕರಾವಳಿಯವರದ್ದು. ಆಟಿ ಅಮಾವಾಸ್ಯೆಯಂದು ಬೆಳಗ್ಗೆ ಬರೀ ಹೊಟ್ಟೆಯಲ್ಲಿ ಹಾಲೆ ಮರದ (ಕೆತ್ತೆ) ಕಷಾಯ ಕುಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚುವುದು ಎಂಬ ನಂಬಿಕೆ ಇದೆ. ಸೂರ್ಯೋದಯಕ್ಕೆ ಮುಂಚೆ ಎದ್ದು ಕಲ್ಲಿನಿಂದ ಪಾಲೆ ಮರದ ಕೆತ್ತೆಯನ್ನು ಕೆತ್ತಿ ತಂದು ಕಷಾಯ ಮಾಡಿ ಕುಡಿಯುವುದು ಕರಾವಳಿಯಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ಆಚರಣೆ.

Prathap Simha : ಮೈಸೂರು ಕುಶಾಲನಗರ NH-275 ಯೋಜನೆಯ ಕುರಿತು ಸಭೆ

MK Stalin : ತಮಿಳುನಾಡು ಸಿಎಂ ನ್ನು ಬರಮಾಡಿಕೊಂಡ ಡಿಕೆಶಿ

Wheeling : ಹೊಸಕೋಟೆಯಲ್ಲಿ ಮತ್ತೆ ವ್ಹೀಲಿಂಗ್ ಹುಚ್ಛಾಟ ..!

- Advertisement -

Latest Posts

Don't Miss