ಆರೋಪಿ ಕರೆದೊಯ್ಯುವ ವೇಳೆ ಪೊಲೀಸರ ಮೇಲೆಯೇ ಅಟ್ಯಾಕ್

Gadag News: ಗದಗ: ಆರೋಪಿಯನ್ನು ಕರೆದೊಯ್ಯುವ ವೇಳೆ ದುಷ್ಕರ್ಮಿಗಳು ಪೊಲೀಸರ ಮೇಲೆಯೇ ಸಿನಿಮೀಯ ರೀತಿಯಲ್ಲಿ ಅಟ್ಯಾಕ್ ಮಾಡಿದ ಘಟನೆ ಗದಗದಲ್ಲಿ ನಡೆದಿದೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ಪೊಲೀಸರ ಮೇಲೆ ಹಲ್ಲೆ ನಡೆದಿದೆ. ಅಮ್ಜಾದ್ ಅಲಿ ಇರಾನಿ ಎಂಬ ಆರೋಪಿಯನ್ನು ಕರೆದೊಯ್ಯುವ ವೇಳೆ ದುಷ್ಕರ್ಮಿಗಳು ಗದಗ ರೈಲ್ವೆ ಬ್ರಿಡ್ಜ್ ಬಳಿ ಪೊಲೀಸ್ ವಾಹನ ಅಡ್ಡಗಟ್ಟಿದ್ದಾರೆ. ಬಳಿಕ ಪೊಲೀಸರ ಮೇಲೆ ಹಲ್ಲೆ ನಡೆಸಿ ಆರೋಪಿಯನ್ನು ಕರೆದುಕೊಂಡು ಹೋಗಿದ್ದಾರೆ. 392 ಕೇಸ್‌ನಲ್ಲಿ ಆರೋಪಿ ಅಮ್ಜದ್ ಅಲಿ ಗಂಗಾವತಿ ಶಹರ ಪೊಲೀಸರಿಗೆ ಬೇಕಿದ್ದ. ಈ ವೇಳೆ ಬಂದ ದುಷ್ಕರ್ಮಿಗಳು ಪೊಲೀಸರ ಮೇಲೆ ಅಟ್ಯಾಕ್ ಮಾಡಿ ಆರೋಪಿಯನ್ನು ಬಿಡಿಸಿಕೊಂಡು ಹೋಗಿದ್ದಾರೆ.

ದುಷ್ಕರ್ಮಿಗಳು ನಾಲ್ವರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು, ಗಾಯಾಳು ಪೊಲೀಸರನ್ನು ಬೆಟಗೇರಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗದಗದ ಬೆಟಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆಸ್ಪತ್ರೆಗೆ ಎಸ್.ಪಿ, ಬಿ.ಎಸ್ ನೇಮಗೌಡ, ಡಿವೈಎಸ್ಪಿ ಭೇಟಿ ನೀಡಿ ಗಾಯಾಳು ಪೊಲೀಸರ ಆರೋಗ್ಯ ವಿಚಾರಿಸಿದ್ದಾರೆ.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್ಪಿ ಬಿಎಸ್ ನೇಮಗೌಡ, ಗಂಗಾವತಿ ಶಹರ ಪೊಲೀಸರಿಗೆ ಬೇಕಾದ ಅಪರಾಧಿಯನ್ನು ಪೊಲೀಸರು ವಶಕ್ಕೆ ಪಡೆಯಲು ಬಂದಿದ್ದರು. ವಶಕ್ಕೆ ತೆಗೆದುಕೊಂಡು ಹೋಗುವಾಗ ಆರೋಪಿಯ ಹಿಂಬಾಲಕರು ಬಂದಿದ್ದಾರೆ. ಪೊಲೀಸ್ ವಾಹನದ ಮೇಲೆ ಹಾಗೂ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಆರೋಪಿ ಎಸ್ಕೇಪ್ ಆಗಲು ಅವನ ಹಿಂಬಾಲಕರು ಸಹಾಯ ಮಾಡಿದ್ದಾರೆ. ಗಾಯಾಳು ಪೊಲೀಸರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಗಾವತಿ ಪೊಲೀಸರು ಕೊಟ್ಟ ದೂರಿನ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಎಷ್ಟು ಜನ ಬಂದು ಅಟ್ಯಾಕ್ ಮಾಡಿದ್ದಾರೆ ಎಂಬುದರ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ತನಿಖೆ ವೇಳೆ ಎಲ್ಲಾ ವಿಷಯ ಪ್ರಸ್ತಾಪಿಸಲಾಗುವುದಿಲ್ಲ. ಗಂಗಾವತಿ ಪೊಲೀಸರು ಬಂದಿರುವ ಬಗ್ಗೆ ನಮಗೆ ಮಾಹಿತಿ ಹೇಳಿದ್ದಾರೆ ಎಂದರು.

ಕಾರ್ ಗ್ಲಾಸ್ ಒಡೆದು, ಡೋರ್ ಓಪನ್ ಮಾಡಿ ಆರೋಪಿ ಕರೆದೊಯ್ದಿದ್ದಾರೆ. ಗ್ಯಾಂಗ್ ಯಾರು? ಎಷ್ಟು ಜನ ಇದ್ದರು ಎಂಬ ಸ್ಪಷ್ಟ ಮಾಹಿತಿ ಇಲ್ಲ. ಆರೋಪಿ ಸಿಕ್ಕ ನಂತರ ಕರೆದುಕೊಂಡು ಗ್ರಾಮೀಣ ಪೊಲೀಸ್ ಠಾಣೆಗೆ ಕರೆ ತರುತ್ತಿದ್ದರು. ಪೊಲೀಸ್ ಠಾಣೆಗೆ ಬರುವ ವೇಳೆ ಮಾರ್ಗ ಮಧ್ಯೆ ಈ ಘಟನೆ ನಡೆದಿದೆ. ಪೊಲೀಸರ ಮೇಲೆ ಹಲ್ಲೆ ಮಾಡಿದ್ದು, ಕಾನೂನಿನ ಭಯ ಇಲ್ಲಾ. ಇದು ದಿಢೀರ್ ನಡೆದ ಘಟನೆ. ಕಾನೂನು ಭಯ ಪ್ರಶ್ನೆಯೇ ಇಲ್ಲ. ಈ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಕಾನೂನಿನ ಭಯ ಅವರಿಗೆ ಹೇಗೆ ಮುಟ್ಟಿಸಬೇಕು ಹಾಗೆ ಮುಟ್ಟಿಸುತ್ತೇವೆ. ಕಾನೂನು ಭಯ ಎಷ್ಟು ಇಡಬೇಕು, ಅಷ್ಟು ಇಡುವ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಖಡಕ್ ವಾರ್ನಿಂಗ್ ಕೊಟ್ಟರು.

ಜುಲೈ 3ರಂದು ಸಿಎಂ ಮನೆಗೆ ಮುತ್ತಿಗೆ : ಬಿ. ವೈ. ವಿಜಯೇಂದ್ರ

ಬಾಹ್ಯಾಕಾಶದಲ್ಲಿ ಸಿಲುಕಿದ ಸುನೀತಾ ವಿಲಿಯನ್ಸ್; ಬಾಹ್ಯಾಕಾಶದಲ್ಲಿ ಏನಾಗ್ತಿದೆ ಗೊತ್ತಾ?

2028ಕ್ಕೆ ನಾನೇ ರಾಜ್ಯದ ಸಿಎಂ ಸತೀಶ್‌ ಜಾರಕಿಹೊಳಿ, ಡಿಕೆಗೆ ಸೆಡ್ಡು

About The Author