ರಾಜ್ಯದಲ್ಲಿ ಲಿಂಗಾಯತರ ದೊಡ್ಡ ಶಕ್ತಿ ಇದೆ. ಇದನ್ನು ವ್ಯವಸ್ಥಿತವಾಗಿ ಒಡೆಯಲು ಕಾಂಗ್ರೆಸ್ ಮುಂದಾಗಿದೆ. ಹೀಗಂತ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ ಮುಸಲ್ಮಾನರ ಅಭಿವೃದ್ಧಿ ಬಿಟ್ಟರೆ ಬೇರೆಯವರಿಗೆ ಏನು ಮಾಡಿಲ್ಲ. ಹಾಲು ಮತ ಸಮಾಜದಲ್ಲಿ ಹುಟ್ಟಿ ಅದಕ್ಕೆ ಅಪಮಾನ ಮಾಡ್ತಿದ್ದಾರೆ. ಇದೊಂದು ಮೂರ್ಖ ಸರ್ವೇ. ಲಿಂಗಾಯತ ಕ್ರಿಶ್ಚಿಯನ್ ಮಾಡಿದ ಅಯೋಗ್ಯರ ಕಪಾಳಕ್ಕೆ ಹೊಡಿಯಬೇಕು. ಎಲ್ಲಾ ಸಮಾಜ ಛಿದ್ರ ಮಾಡಿ, ಮುಸ್ಲಿಮರ ಕೈಯಲ್ಲಿ ನೀಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಸೋನಿಯಾ ಗಾಂಧಿ ಅವರು ಚರ್ಚಿನ ಮದರ್ ಮಾಡಲು ಹೊರಟಿದ್ದಾರೆ. ಜಾತಿಗಣತಿಯನ್ನು ಕೈ ಬಿಡಬೇಕೆಂದು ಯತ್ನಾಳ್ ಆಗ್ರಹಿಸಿದ್ದಾರೆ.
ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಬಿಜೆಪಿಗರ ವಿರುದ್ಧವೂ ಯತ್ನಾಳ್ ಗುಡುಗಿದ್ದಾರೆ. ಹಿಂದುತ್ವ ನೋಡಿ ಬಿಜೆಪಿಗೆ ಹಿಂದೂಗಳು ವೋಟು ಹಾಕಿದ್ದಾರೆ. ಯಡಿಯೂರಪ್ಪ ಮುಸುಡಿ ನೋಡಿ ವೋಟು ಹಾಕಿಲ್ಲ. ಶೆಟ್ಟರ್, ವಿಜಯೇಂದ್ರ, ಕೋರೆ ಮೇಲೆ ಕ್ರಮ ಕೈಗೊಳ್ಳಬೇಕು. ಲಿಂಗಾಯತ ಹಿಂದೂ ಸನಾತನ ಧರ್ಮದ ಒಂದು ಭಾಗ. ನಾವು ಹಿಂದೂ ಅನ್ನಲು ನಾಚಿಕೆ ಪಡ್ತಿದ್ದರೆ, ಬಿಜೆಪಿಯಲ್ಲಿರದೇ ಸ್ವಾಮೀಜಿಗಳು ಬೆನ್ನು ಹತ್ತಿ ಹೋಗಲಿ.
ಪಂಚಮಸಾಲಿಗಳಿಗೆ ಮೀಸಲಾತಿ ನೀಡದಂತೆ, ಬೊಮ್ಮಾಯಿ ಮೇಲೆ ಯಡಿಯೂರಪ್ಪ ಒತ್ತಡ ಹೇರಿದ್ರು. ಯಡಿಯೂರಪ್ಪ ಪಂಚಮಸಾಲಿ, ಕುಡು ಒಕ್ಕಲಿಗರ ವಿರೋಧಿ. ಯಡಿಯೂರಪ್ಪ ಗಾಣಿಗರನ್ನು ಮಾತ್ರ 2ಎಗೆ ಸೇರಿಸಿದ್ರು. ಉಳಿದವರನ್ನು ಸೇರಿಸಲಿಲ್ಲ. ನನ್ನನ್ನ ಹೊರಗೆ ಹಾಕಿ ಯಡಿಯೂರಪ್ಪ ಏನು ಸಾಧಿಸಿದ್ದಾನೆ? ಹಿಂದುತ್ವ ಬಿಟ್ಟರೆ ರಾಜ್ಯದಲ್ಲಿ ಬಿಜೆಪಿಗೆ ಅಸ್ತಿತ್ವವೇ ಇಲ್ಲ. ರಾಜ್ಯದ ಸಿಎಂ ಯಾರಗಬೇಕು ಅಂತ ರಾಜ್ಯದ ಜನ ತೀರ್ಮಾನ ಮಾಡ್ತಾರೆ. ಯಡಿಯೂರಪ್ಪ ಮಾಡಲ್ಲ.
ಬಿಜೆಪಿ ಗೆ ಹೋಗಲು ನಾನು ಕೈಕಾಲು ಹಿಡಯಲ್ಲ. ಅವರಾಗಿ ಕರೆದ್ರೆ ಮಾತ್ರ ಹೋಗ್ತೇನೆ. ನನಗೆ ಇಂಗ್ಲಿಷ್ ಬರಲ್ಲ. ಹೀಗಾಗಿ ರಾಷ್ಟ್ರ ರಾಜಕಾರಣಕ್ಕೆ ಹೋಗಲ್ಲ. ವಿಜಯೇಂದ್ರ ರಾಷ್ಟ್ರ ರಾಜಕಾರಣಕ್ಕೆ ಹೋಗಲಿ. ನಮ್ಮ ಸಮಾಜ ತುಳಿದ, ಯಡಿಯೂರಪ್ಪ ವೇದಿಕೆಗೆ ನಮ್ಮವರು ಹೋಗಬಾರದು.
ವಿಜಯೇಂದ್ರ ಧರ್ಮ ಬರೆಸೋ ವಿಚಾರ ಸ್ವಾಮಿಗಳಿಗೆ ಬಿಟ್ಟಿದ್ದೇವೆ ಅಂತ ಹೇಳ್ತಿದ್ದಾರೆ. ಹಿಂದೂ ಅಲ್ಲಾ ಅಂದ್ರೆ ಬಿಜೆಪಿಯಲ್ಲಿ ಯಾಕೆ ಇರ್ತೀರಿ?. ವೀರಶೈವ ಮಹಾಸಭೆಯನ್ನು ಮೂರು ಕುಟುಂಬಗಳು ತಮ್ಮ ಸ್ವತ್ತು ಮಾಡಿಕೊಂಡಿವೆ. ಯಡಿಯೂರಪ್ಪ ಲಿಂಗಾಯತನೇ ಅಲ್ಲಾ, ಅವರು ಬಳಿಗಾರರು. ಹಿಂದೂ ಅಂತ ಬರೆಸೋ ತಾಕತ್ ಇದ್ರೆ ಮಾತ್ರ, ಏಕತಾ ಸಮಾವೇಶಕ್ಕೆ ಹೋಗಿ. ಇಲ್ಲವೇ ರಾಜೀನಾಮೆ ನೀಡಲಿ ಅಂತಾ ಯತ್ನಾಳ್ ಸವಾಲು ಹಾಕಿದ್ದಾರೆ.