Manglore News : ರಸ್ತೆಯಲ್ಲಿ ಅಡ್ಡ ಬಂದ ಮುಂಗುಸಿಯ ಪ್ರಾಣ ಉಳಿಸುವ ಸಂದರ್ಭ ಆಟೋ ಪಲ್ಟಿಹೊಡೆದು ಚಾಲಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ ಎಂಬಲ್ಲಿ ನಡೆದಿದೆ. ಮಂಗಲಪದವು ನಿವಾಸಿ ಆಟೋ ಚಾಲಕ ಇಸ್ಮಾಯಿಲ್ (53) ಗಾಯಾಳು ಎಂದು ಹೇಳಲಾಗಿದೆ.
ಸಾಲೆತ್ತೂರು ಕಡೆಗೆ ಪ್ರಯಾಣಿಕರನ್ನು ಬಿಟ್ಟು ಹಿಂತಿರುಗುತ್ತಿದ್ದಾಗ ಕೊಡಂಗಾಯಿ ಸೇತುವೆ ಬದಿಯಲ್ಲಿ ರಸ್ತೆ ದಾಟುತ್ತಿದ್ದ ಮುಂಗುಸಿಯೊಂದು ಅಡ್ಡಬಂದಿದೆ.
ಮುಂಗುಸಿಯ ಪ್ರಾಣ ರಕ್ಷಣೆಗಾಗಿ ಚಾಲಕ ಹಠಾತ್ ಬ್ರೇಕ್ ಹಾಕುತ್ತಿದ್ದಂತೆ ನಿಯಂತ್ರಣ ತಪ್ಪಿದ ಆಟೋ ರಸ್ತೆ ಬದಿಯ ಕಬ್ಬಿಣದ ತಡೆಗೋಡೆಗೆ ಬಲವಾಗಿ ಅಪ್ಪಳಿಸಿ ಜಖಂಗೊಂಡಿದ್ದು ಚಾಲಕ ಇಸ್ಮಾಯಿಲ್ ಗಾಯಗೊಂಡಿದ್ದಾರೆ. ಸ್ಥಳೀಯರು ಗಾಯಾಳುವನ್ನು ವಿಟ್ಲ ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ.
Rules : ಮಣಿಪಾಲದಲ್ಲಿ ವಾರಾಂತ್ಯ ಪಬ್, ಕ್ಲಬ್ ಗಳಿಗೆ ಕಟ್ಟುನಿಟ್ಟಿನ ಕ್ರಮ ಜಾರಿ
Cow : ಕೆಸರಿನಲ್ಲಿ ಹೂತುಹೋಗಿದ್ದ ಹಸುವನ್ನು ರಕ್ಷಿಸಿದ ಬೈಕ್ ಸವಾರರು..!