- Advertisement -
Banglore news:
ಖರ್ಚಿಗೆ ಕಾಸಿಲ್ಲ ಅಂತ ಆಟೋ ಕದಿಯುತ್ತಿದ್ದ ಆರೋಪಿಯನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ರಘು ಅಲಿಯಾಸ್ ಮಾರಿಗುಡಿ ಬಂಧಿತ ಆರೋಪಿ. ಆರೋಪಿ ರಘು ಅಲಿಯಾಸ್ ಮಾರಿಗುಡಿ ನಕಲಿ ಕೀ ಬಳಸಿ ಮನೆ ಮುಂದೆ ನಿಲ್ಲಿಸಿದ್ದ ಆಟೋಗಳನ್ನ ಕದ್ದು ಪರಾರಿಯಾಗುತ್ತಿದ್ದನು. ಬಂಧಿತನಿಂದ ಪೊಲೀಸರು ಎರಡು ಆಟೋ ಜಪ್ತಿ ಮಾಡಿಕೊಂಡಿದ್ದಾರೆ.
ಆರೋಪಿ ಆಟೋ ಕದಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -