Thursday, November 13, 2025

Latest Posts

AXIS MY INDIA – ಜಿದ್ದಾಜಿದ್ದಿ ಫಲಿತಾಂಶ : ಬಿಹಾರದ ಅಸಲಿ ಲೆಕ್ಕ!

- Advertisement -

ಬಿಹಾರದ ಚುನಾವಣೋತ್ತರ ಸಮೀಕ್ಷೆ ರಣರೋಚಕವಾದ ಫಲಿತಾಂಶವನ್ನ ನೀಡಿದೆ. ನಿನ್ನೆ 2ನೇ ಹಂತದ ಮತದಾನ ಮುಗಿಯುತ್ತಿದ್ದಂತೆ ಹಲವು ಸಂಸ್ಥೆಗಳು ತಮ್ಮ ಚುನಾವಣೋತ್ತರ ಸಮೀಕ್ಷೆಗಳನ್ನು ಬಿಡುಗಡೆ ಮಾಡಿದ್ದವು. ನಿನ್ನೆ ಬಹುತೇಕ ಎಲ್ಲ ಸಮೀಕ್ಷೆಗಳಲ್ಲೂ ಎನ್‌ಡಿಎ ಮೈತ್ರಿಕೂಟವೇ ಬಿಹಾರದಲ್ಲಿ ಸರ್ಕಾರ ರಚಿಸುವ ಸಾಧ್ಯತೆ ಇದೆ ಎನ್ನಲಾಗಿತ್ತು.

ಇಂದು ಪ್ರಕಟಗೊಂಡಿರುವ ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಪ್ರಕಾರ, ಬಿಹಾರದಲ್ಲಿ ಎನ್‌ಡಿಎಗೆ 121 ರಿಂದ 141 ಸ್ಥಾನಗಳವರೆಗೆ ಗೆಲ್ಲುವ ಸಾಧ್ಯತೆ ಇದೆ. ಮಹಾಘಟಬಂಧನಗೆ 98 ರಿಂದ 118 ಸ್ಥಾನಗಳು ಸಿಗಬಹುದೆಂದು ಅಂದಾಜು ಮಾಡಲಾಗಿದೆ. ಜೆಎಸ್‌ಪಿಗೆ 0 ರಿಂದ 2 ಸ್ಥಾನಗಳು ಸಿಗಬಹುದು ಎಂದು ಹೇಳಲಾಗಿದೆ.

ಪಕ್ಷವಾರು ಸಂಖ್ಯೆಗಳು ಹೀಗಿವೆ — ಎನ್‌ಡಿಎ ಪಾಳಯದಲ್ಲಿ ಬಿಜೆಪಿ 50 ರಿಂದ 56, ಜೆಡಿಯು 56 ರಿಂದ 62, ಎಲ್‌ಜೆಪಿ 11 ರಿಂದ 16, ಮತ್ತು ಇತರರು 4 ರಿಂದ 7 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ. ಮಹಾಘಟಬಂಧನ ಪಾಳಯದಲ್ಲಿ ಆರ್‌ಜೆಡಿ 67 ರಿಂದ 76, ಕಾಂಗ್ರೆಸ್ 17 ರಿಂದ 21, ವಿಐಪಿ 3 ರಿಂದ 5, ಮತ್ತು ಇತರರು 10 ರಿಂದ 16 ಸ್ಥಾನಗಳನ್ನು ಪಡೆಯಬಹುದು ಎಂದು ಸಮೀಕ್ಷೆ ಹೇಳುತ್ತಿದೆ.

ಒಟ್ಟಾರೆಯಾಗಿ, ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಪ್ರಕಾರ ಬಿಹಾರದಲ್ಲಿ ಎನ್‌ಡಿಎಗೆ ಸರ್ಕಾರ ರಚಿಸುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ. ನವೆಂಬರ್ 14ರಂದು ಜನರ ಅಂತಿಮ ತೀರ್ಪು ಪ್ರಕಟವಾಗಲಿದ್ದು ಅಂತಿಮವಾಗಿ ಯಾರಿಗೆ ಬಿಹಾರದ ಗದ್ದುಗೆ ಸಿಗಲಿದೆ ಅನ್ನೋದು ನಿರ್ಧಾರವಾಗಲಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss