ಬೆಂಗಳೂರು: ರಾಜ್ಯ ಸರ್ಕಾರ ಡಿಸೆಂಬರ್ ಅಂತ್ಯದೊಳಗೆ 1 ಕೋಟಿ ಆಯುಷ್ಮಾನ್ ಭಾರತ್ ಕಾರ್ಡ್ ಗಳನ್ನು ವಿತರಿಸಲಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳೀದ್ದಾರೆ. ಆಯುಷ್ಮಾನ್ ಭಾರತ್ ಕಾರ್ಡ್ ವಿತರಣೆಯಲ್ಲಿ ಕರ್ನಾಟಕ ದೇಶದಲ್ಲಿಯೇ ಮಾದರಿ ರಾಜ್ಯವಾಗಿ ಹೊರಹೊಮ್ಮಿದ್ದು, ಕಡಿಮೆ ಸಮಯದಲ್ಲಿ ಕಾರ್ಡ್ ಗಳನ್ನು ತಯಾರಿಸಲಾಗಿದೆ ಎಂದು ಸುಧಾಕರ್ ಹೇಳಿದರು.
ಮೀಜೋರಾಂ ಕಲ್ಲಿನ ಕ್ವಾರಿ ಕುಸಿತದಲ್ಲಿ 8 ವಲಸೆ ಕಾರ್ಮಿಕರು ಸಾವು, 4 ಜನ ಸಿಕ್ಕಿಬಿದ್ದಿರುವ ಶಂಕೆ
ಸಾರ್ವತ್ರಿಕ ಆರೋಗ್ಯ ರಕ್ಷಣೆಯ ಗುರಿಯೊಂದಿಗೆ, ಬಡತನ ರೇಖೆಗಿಂತ ಕೆಳಗಿರುವ ಎಲ್ಲಾ ರೋಗಿಗಳಿಗೆ ಉಚಿತ ಮತ್ತು ನಗದು ರಹಿತ ಪ್ರಾಥಮಿಕ ಮತ್ತು ಹೆಚ್ಚಿನ ಮಟ್ಟದ ಆರೋಗ್ಯ ಸೇವೆಯನ್ನು ಒದಗಿಸಲು ಕರ್ನಾಟಕವು ಈ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆ ಮೂಲಕ ಬಡತನ ರೇಖೆಗಿಂತ ಕೆಳಗಿರುವ ಎಲ್ಲಾ ಕುಟುಂಬಗಳಿಗೂ ವರ್ಷಕ್ಕೆ 2 ಲಕ್ಷ ರೂಪಾಯಿ ನೀಡಲಾಗುವುದು. ಡಿಸೆಂಬರ್ ಅಂತ್ಯದೊಳಗೆ 1 ಕೋಟಿ ಆಯುಷ್ಮಾನ್ ಭಾರತ್ ಕಾರ್ಡ್ ಗಳನ್ನು ಶೀಘ್ರದಲ್ಲೆ ವಿತರಿಸಲಾಗುವುದು ಎಂದು ಸಚಿವ ಸುಧಾಕರ್ ಹೇಳಿದರು.
ಮೀಜೋರಾಂ ಕಲ್ಲಿನ ಕ್ವಾರಿ ಕುಸಿತದಲ್ಲಿ 8 ವಲಸೆ ಕಾರ್ಮಿಕರು ಸಾವು, 4 ಜನ ಸಿಕ್ಕಿಬಿದ್ದಿರುವ ಶಂಕೆ