Sunday, July 6, 2025

Latest Posts

ಅಜ್ಜನಾದ ಖುಷಿಯಲ್ಲಿ ಬಿ.ಸಿ.ಪಾಟೀಲ್

- Advertisement -

www.karnatakatv.net: ರಾಜ್ಯ- ಹಾವೇರಿ: ರಾಜ್ಯ ಕೃಷಿ ಸಚಿವ ಹಾಗೂ ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಸಿ.ಪಾಟೀಲ್ ಅಜ್ಜನಾದ ಖುಷಿಯಲ್ಲಿದ್ದಾರೆ. ಬಿ.ಸಿ.ಪಾಟೀಲ್ ಮಗಳು ಸೃಷ್ಟಿ ಪಾಟೀಲ್ ಹಾಗೂ ಸುಜಯ್ ಬೇಲೂರು ದಂಪತಿಗೆ ಹೆಣ್ಣು ಮಗು ಜನನವಾಗಿದೆ. ಈ ಬಗ್ಗೆ ಸ್ವತಃ ಸೃಷ್ಟಿ ಪಾಟೀಲ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ‘ತಾಯಿಯಾಗುವ ಸೌಭಾಗ್ಯ ತಂದುಕೊಟ್ಟ ನನ್ನ ಮಗಳು. ನಿಮ್ಮೆಲ್ಲರ ಪ್ರೀತಿ ಹಾಗೂ ವಿಶ್ವಾಸದಿಂದ ನನ್ನ ಮಗಳು ಆರೋಗ್ಯವಾಗಿದ್ದಾಳೆ’ ಎಂದು ತಿಳಿಸಿದ್ದಾರೆ. ಇನ್ನು, ಬಿ.ಸಿ.ಪಾಟೀಲ್ ಮನೆಯಲ್ಲಿ ಮೊಮ್ಮಗಳ ಆಗಮನಿಂದ ಸಂಭ್ರಮ ಮನೆಮಾಡಿದೆ.

- Advertisement -

Latest Posts

Don't Miss