Wednesday, July 2, 2025

Latest Posts

ಸಿಎಂ ಸಿದ್ದರಾಮಯ್ಯಗೆ ಶಾಕ್ ಕೊಟ್ಟ ಬಿ.ಆರ್‌. ಪಾಟೀಲ್!

- Advertisement -

ಕಾಂಗ್ರೆಸ್​ನಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು. ಸ್ವಪಕ್ಷೀಯ ಶಾಸಕರೇ ಸಚಿವರ ಮೇಲೆ ಮುಗಿಬಿದ್ದಿದ್ರು. ಕೊನೆಗೆ ಹೈಕಮಾಂಡ್ ಎಂಟ್ರಿ ಕೊಟ್ಟು ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾಗಿದೆ. ಆದರೆ, ಕಾಂಗ್ರೆಸ್ ನಾಯಕರಲ್ಲಿ ತಾಳ-ಮೇಳ ಸರಿ ಇಲ್ಲ ಅನ್ನೋದು ಮತ್ತೆ ಸಾಬೀತಾಗಿದೆ.

ಸಿಎಂ ಸಿದ್ದರಾಮಯ್ಯ ಅವರಿಗೆ ಆತ್ಮೀಯರಾಗಿದ್ದ ಶಾಸಕ ಬಿ.ಆರ್ ಪಾಟೀಲ್ ಅವರೇ ಶೀತಲ ಸಮರ ಸಾರಿದ್ದಾರೆ. ವಸತಿ ಯೋಜನೆಗಳಲ್ಲಿನ ಲಂಚಾವತಾರದ ಬಗ್ಗೆ ಬಿ.ಆರ್. ಪಾಟೀಲ್ ಆಡಿಯೋ ವೈರಲ್ ಆಗಿತ್ತು. ಅಂದಿನಿಂದ ಆತ್ಯಾಪ್ತರ ನಡುವೆ ಶೀತಲ ಸಮರ ಶುರುವಾದಂತಿದೆ. ನಿನ್ನೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾರನ್ನೂ ಭೇಟಿ ಮಾಡಿದ್ದು, ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಇದಕ್ಕೆ ಪುಷ್ಠಿ ಕೊಡುವಂತೆ, ಬಿ.ಆರ್. ಪಾಟೀಲರ ವೀಡಿಯೋವೊಂದು ವೈರಲ್ ಆಗಿದೆ. ಮಂಡ್ಯದ ಕೆ.ಆರ್.ಪೇಟೆಗೆ ಭೇಟಿ ವೇಳೆ ಫೋನಿನಲ್ಲಿ ಮಾತಾಡಿದ್ರು. ಈ ವೇಳೆ ಸಿದ್ದರಾಮಯ್ಯ ಲಾಟರಿ ಹೊಡೆದುಬಿಟ್ಟ ಸಿಎಂ ಆಗ್ಬಿಟ್ಟ. ಮೊದಲು ಸೋನಿಯಾ ಗಾಂಧಿ ಅವ್ರನ್ನ ಭೇಟಿ ಮಾಡಿಸಿದ್ದೇ ನಾನೇ.
ಅವನ ಗ್​ರಹಚಾರ ಚೆನ್ನಾಗಿತ್ತು. ಅವನು ಸಿಎಂ ಆಗ್ಬಿಟ್ಟ. ನನಗೆ ಗಾಡೂ ಇಲ್ಲ. ಫಾದರೂ ಇಲ್ಲ.
ನನ್ನ ಗ್ರಹಚಾರ, ನಾನೂ ಏನೂ ಆಗಿಲ್ಲ ಅಂತಾ ಬೇಸರ ವ್ಯಕ್ತಪಡಿಸಿದ್ದಾರೆ. ಕೊನೆಗೆ ಇದನ್ನೆಲ್ಲಾ ಹೈಕಮಾಂಡ್ ನವರು ಡಿಸೈಡ್ ಮಾಡ್ತಾರೆ ಅಂತಾ ಫೋನ್ ಕಟ್ ಮಾಡಿದ್ರು.

ಇನ್ನು, ಸುರ್ಜೇವಾಲರನ್ನು ಭೇಟಿ ಮಾಡಿದ್ದ ಬಗ್ಗೆ, ಮಂಡ್ಯದಲ್ಲಿ ಮಾಧ್ಯಮಗಳ ಎದುರು ಪ್ರತಿಕ್ರಿಯಿಸಿದ್ದಾರೆ. ರಾಜ್ಯದಲ್ಲಿ ಅಪಸ್ವರ ಎದ್ದಿದ್ದಕ್ಕೆ ಸುರ್ಜೆವಾಲ ಇಲ್ಲಿಗೆ ಬಂದಿದ್ದರು. ಶಾಸಕರ ನೋವು ಏನೆಂದು ತಿಳಿದುಕೊಳ್ಳಲು ಕರೆಸಿದ್ದರು. ನಾನು 45 ನಿಮಿಷಗಳ ಕಾಲ ಮಾತನಾಡಿದೆ.
ಎಲ್ಲಾ ವಿವರ ನೀಡಿದ್ದೇನೆ. ಎಲ್ಲಾ ನೋಟ್ ಮಾಡಿಕೊಂಡಿದ್ದಾರೆ. ಸುರ್ಜೆವಾಲ ಎಲ್ಲಾ ಗಂಭೀರವಾಗಿ ಪರಿಗಣಿಸಿದ್ದಾರೆ. ಮುಂದೆ ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಅವರಿಗೆ ಬಿಟ್ಟದ್ದು ಎಂದ್ರು.

ಬಿ.ಆರ್. ಪಾಟೀಲ್​ ಹೇಳಿಕೆಗೆ ಇತ್ತ ಪ್ರತಿಕ್ರಿಯಿಸಿರುವ ಸಿಎಂ, ಅದಕ್ಕೆ ನಾನು ಏನ್ ಮಾಡಬೇಕು ಎಂದು ಪ್ರಶ್ನಿಸಿದ್ರು. ಹೌದು ನಾನು ಅದೃಷ್ಟವಂತ ಸಿಎಂ ಆಗಿದ್ದೀನಿ. ನಾನು, ಬಿ.ಆರ್. ಪಾಟೀಲ್ ಒಟ್ಟಿಗೆ ಎಂಎಲ್​ಎ ಆಗಿದ್ದು, ಅದಕ್ಕಾಗಿಯೇ ಈ ರೀತಿ ಹೇಳಿರಬೇಕು ಅಂತಾ ಸಿದ್ದರಾಮಯ್ಯ ಹೇಳಿದ್ರು.

- Advertisement -

Latest Posts

Don't Miss