www.karnatakatv.net :ತುಮಕೂರು: ರಾಜಕೀಯ ದಿಢೀರ್ ಬೆಳವಣಿಗೆಯಲ್ಲಿ ಬಿಜೆಪಿ ಮಾಜಿ ಶಾಸಕ ಹಾಗೂ ಜಿಲ್ಲಾಧ್ಯಕ್ಷ ಬಿ.ಸುರೇಶ್ ಗೌಡ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ತಮ್ಮ ಅಧಿಕೃತ ಪೇಸ್ ಬುಕ್ ನಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರೆ. ಕಡಿಮೆ ಅವಧಿಯಲ್ಲಿ ಇಂತಹ ನಿರ್ಧಾರ ಯಾಕೆ ಅನ್ನೋದು ಕಮಲ ಪಾಳಯದಲ್ಲಿ ಚರ್ಚೆಯ ವಿಷಯವಾಗಿದೆ.
ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಕಳೆದ ರಾತ್ರಿ ದಿಢೀರ್ ರಾಜೀನಾಮೆ ಘೋಷಣೆ ಮಾಡಿಕೊಂಡಿದ್ದಾರೆ. ಒಂದು ವರ್ಷ ಮೂರು ತಿಂಗಳು ಎರಡನೇ ಬಾರಿ ಅಧಿಕಾರ ನಡೆಸಿದ್ರೆ. ಮೊದಲ ಬಾರಿ ಅವಧಿ ಪೂರ್ಣಗೊಳಿಸಿದ್ದರು. ಜಿಲ್ಲಾ ಅಧ್ಯಕ್ಷರಾದ ಬಳಿಕ ತುಮಕೂರು ಗ್ರಾಮಾಂತರ ಕ್ಷೆತ್ರದ ಜನರನ್ನ ಸರಿಯಾಗಿ ಗಮನಿಸಲು ಅಗ್ತಾ ಇಲ್ಲ ಎಂದಿದ್ದಾರೆ. ಸುರೇಶ್ ಗೌಡ ರಾಜೀನಾಮೆ ಹಲವು ಅಚ್ಚರಿಗೆ ಕಾರಣ ಎದುರಾಗಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಜಿಲ್ಲೆಯ ಜನರ ಸಹಕಾರಕ್ಕೆ ಧನ್ಯವಾದ ಹೇಳಿದ್ದಾರೆ ಮಾಜಿ ಶಾಸಕ. ಜಿಲ್ಲೆಯ ಜನರು ತೋರಿಸಿದ ಪ್ರೀತಿ, ಬೆಂಬಲಕ್ಕೆ ಅಭಾರಿಯಾಗಿದ್ದೇನೆ ಎಂದು ಫೇಸ್‌ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನೂ ಈ ಬಗ್ಗೆ ಪತ್ರಿಕ್ರಿಯೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಜೆಸಿ ಮಾಧುಸ್ವಾಮಿ, ನನಗೆ ಸುರೇಶ್ ಗೌಡ್ರು ರಾಜೀನಾಮೆ ಕೊಟ್ಟಿರೋದು ಗೊತ್ತಿಲ್ಲ. ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು ಪಕ್ಷದಲ್ಲಿ ಏನು ತೀರ್ಮಾನ ತೆಗೆದುಕೊಳ್ತಾರೆ. ಎಲ್ಲರೂ ಪಕ್ಷದ ತೀರ್ಮಾನಕ್ಕೆ ಅನುಯಾಯಿಗಳಾಗಿ ಹೋಗಬೇಕು. ಯಡಿಯೂರಪ್ಪ ಪರ ಮಾತಾಡೋರನ್ನ ಕಟೀಲ್ ಟಾರ್ಗೆಟ್ ವಿಚಾರ ಗಮನ ಸೆಳೆದಿದಕ್ಕೆ ನಾವೆಲ್ಲಾ ಯಡಿಯೂರಪ್ಪ ಸಹಪಾಠಿಗಳು ನಮಗೆಲ್ಲ ಏನು ಅನ್ಸಿಲ್ಲ. ಸುರೇಶ್ ಗೌಡರಿಗೆ ಎಲ್ಲಾ ಸಹಕಾರ ಕೊಟ್ಟಿದ್ದೇವೆ ಅವರು ಕರೆವ ಮೀಟಿಂಗ್ ಎಲ್ಲದರಲ್ಲೂ ಮಾತನಾಡಿದ್ದೇವೆ. ಪಾರ್ಟಿ ವ್ಯವಹಾರಕ್ಕೂ ಉಸ್ತುವಾರಿಗೂ ಸಂಬಂಧ ಇಲ್ಲ . ಪಾರ್ಟಿ ತಗೊಂಡಿರುವ ಹೆಸರಲ್ಲಿ ಸೂಚಿಸಿ ಅಂದ್ರೆ ಕೂತು ಮಾತನಾಡ್ತೀವಿ. ನಾನು ಸುರೇಶ್ ಗೌಡರ ವಿರುದ್ಧ ಯಾವುದೇ ಆರೋಪ ಮಾಡಿಲ್ಲ. ನಮ್ಮ ಕಡೆಯಿಂದ ಆಗುವ ಸಹಕಾರ ಕೊಡ್ತೇನೆ. ಸುರೇಶ್ ಗೌಡ್ರು ಕಾಂಗ್ರೆಸ್ ಹೋಗೋ ತೀರ್ಮಾನ ತಗೋತಾರೆ ಎಂದು ನಂಗೆ ಅನ್ಸಿಲ್ಲ. ಸಣ್ಣಪುಟ್ಟ ಗೊಂದಲಗಳು ಇದ್ರೆ ಸೆಟಲ್ ಮಾಡ್ಕೋತಾರೆ ಎಂದಿದ್ದಾರೆ.
ಮತ್ತೊಂದು ಮೂಲದ ಪ್ರಕಾರ ನೂತನ ಸರ್ಕಾರದಲ್ಲಿ ಯಡಿಯೂರಪ್ಪ ಅವರ ಅಪ್ತರನ್ನ ಟಾರ್ಗೆಟ್ ಮಾಡಲಾಗಿದೆ ಎನ್ನಲಾಗಿದೆ. ಮಾಜಿ ಶಾಸಕ ಸುರೇಶ್ ಗೌಡ ರಾಜೀನಾಮೆ ವಿಚಾರ ಕಾಂಗ್ರೆಸ್ ಸೇರ್ಪಡೆ ಅಗಲಿದ್ದಾರೆ ಅನ್ನೋ ಸುದ್ದಿ ರೆಕ್ಕೆ ಬುಕ್ಕ ಸೇರಿಕೊಂಡಿದೆ. ಈವರೆಗೂ ಮಾಧ್ಯಮಗಳ ಮುಂದೆ ಗೌಡರು ಯಾವುದೇ ಸ್ಪಷ್ಟನೆ ನೀಡಿಲ್ಲ. ದಿಢೀರ್ ಬೆಳವಣಿಗೆ ಜಿಲ್ಲಾ ಬಿಜೆಪಿಯಲ್ಲಿ ಕೊಂಚ ಇರುಸು ಮುರುಸು ಎದುರಾಗಿದೆ. ಪಕ್ಷದ ರಾಜ್ಯ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ನೋಡ್ಬೇಕು.
ದರ್ಶನ್ ಕೆ.ಡಿ.ಆರ್, ಕರ್ನಾಟಕ ಟಿವಿ- ತುಮಕೂರು