www.karnatakatv.net : ಬೆಂಗಳೂರು : ಖಾಲಿ ಇರುವ ಸುಪ್ರೀಂ ಕೋರ್ಟ್ ನ ಮುಖ್ಯ ನಾಯ್ಯಾಧೀಶರ ಭರ್ತಿಗೆ ಈಗಾಲೇ ಸುಪ್ರೀಂ ಕೋರ್ಟ್ ಕೊಲಾಜಿಯಂ ಹೆಸರುಗಳನ್ನು ಶಿಫಾರಸು ಮಾಡಿದ್ದು, ಈ ಪೈಕಿ ಕನ್ನಡತಿ ಬಿ.ವಿ.ನಾಗರತ್ನ ನೇಮಕವಾಗುವ ಸಾಧ್ಯತೆಯಿದೆ.
ಹೌದು, ಸುಪ್ರೀಂ ಕೋರ್ಟ್ ನ 34 ಮುಖ್ಯ ನ್ಯಾಯಮೂರ್ತಿ ಹುದ್ದೆಯ ಪೈಕಿ ಇದೀಗ 9 ಸ್ಥಾನ ಖಾಲಿಯಾಗಿದ್ದು, ಇವುಗಳ ಭರ್ತಿಗಾಗಿ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕೊಲಾಜಿಯಂ ಈಗಾಗಲೇ 9 ಮಂದಿಯ ಹೆಸರುಗಳನ್ನು ಶಿಫಾರಸು ಮಾಡಿದೆ. ಈ ಪೈಕಿ ಮೂವರು ಮಹಿಳಾ ನ್ಯಾಯಮೂರ್ತಿಗಳಾದ ಕರ್ನಾಟಕ ಮೂಲದ ನ್ಯಾಯಾಧೀಶರಾದ ಬಿ.ವಿ. ನಾಗರತ್ನ,ನ್ಯಾ.ಹಿಮಾ ಕೊಹ್ಲಿ ಮತ್ತು ನ್ಯಾ.ಬೇಲ ತ್ರಿವೇದಿ ಹೆಸರುಗಳೂ ಇವೆ. ಆದ್ರೆ ಹೈಕೋರ್ಟ್ ನ ಎರಡನೇ ಹಿರಿಯ ನ್ಯಾಯಾಧೀಶರಾಗಿರೋ ಕಾರಣ ನಾಗರತ್ನರನ್ನು ಹಿರಿತನದ ಆಧಾರದ ಮೇಲೆ ಸುಪ್ರೀಂ ಕೋರ್ಟ್ ಸಿಜೆಐ ಆಗಿ ನೇಮಕ ಮಾಡುವ ಸಾಧ್ಯತೆ ದಟ್ಟವಾಗಿದೆ.
ಹಾಗೆಯೇ, ಹಾಲಿ ಸಿಜೆಐ ಬಳಿಕ ಹಿರಿತನದ ಆಧಾರದಲ್ಲಿ ನ್ಯಾ.ಯು.ಯು.ಲಲಿತ್, ನ್ಯಾ.ಚಂದ್ರಚೂಡ್, ನ್ಯಾ.ಸಂಜೀವ್ ಖನ್ನಾ, ನ್ಯಾ.ಸೂರ್ಯಕಾಂತ್ ಅವರು ಮುಂದಿನ ಸಿಜೆಐ ಆಗುವ ಅವಕಾಶ ಹೊಂದಿದ್ದಾರೆ. ಈ ಪೈಕಿ ಕಡೆಯವರಾದ ನ್ಯಾ.ಸೂರ್ಯಕಾಂತ್ ಅವಧಿ 2027ರ ಫೆಬ್ರವರಿಗೆ ಅಂತ್ಯವಾಗಲಿದೆ. ಆಗ ಹಿರಿತನ ಪಡೆಯುವವರ ಪೈಕಿ ನ್ಯಾ.ನಾಗರತ್ನ ಸೀನಿಯಾರಿಟಿ ಆಧಾರದ ಮೇಲೆ ಸಿಜೆಐ ಆಗುವ ಸಾಧ್ಯತೆಯಿದೆ. ಎಲ್ಲಾ ಅಂದುಕೊಂಡಂತೆ ನಡೆದ್ರೆ ನಾಗರತ್ನ, ಸಿಜೆಐ ಸ್ಥಾನ ಅಲಂಕರಿಸಿದ ಮೊದಲ ಮಹಿಳಾ ನ್ಯಾಯಮೂರ್ತಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗ್ತಾರೆ.
ಕರ್ನಾಟಕ ಟಿವಿ- ಬೆಂಗಳೂರು