Wednesday, July 16, 2025

Latest Posts

ಬಿ. ಸರೋಜಾ ದೇವಿ ಬಗ್ಗೆ ಅಪ್ಪು ಹೇಳಿದ್ದೇನು?

- Advertisement -

ಕನ್ನಡ ಚಿತ್ರರಂಗದ ಕುಡಿಗಳು, ನಯ ವಿನಯಕ್ಕೆ ಹೆರುವಾಸಿ. ಅದ್ರಲ್ಲೂ ಪವರ್ ಸ್ಟಾರ್ ಪುನೀತ್ ರಾಜ್​ ಕುಮಾರ್ ಅಂದ್ರೆ ಕೇಳ್ಬೇಕಾ? ದೊಡ್ಡವರಿಗಂತೂ ತಲೆ ಬಾಗಿಸಿ ಗೌರವ ಕೊಡ್ತಾರೆ. ಶ್ರೀಕೃಷ್ಣನಿಗೆ ಇದ್ದಂತೆ, ಪುನಿತ್ ರಾಜ್ ಕುಮಾರ್‌ಗೂ ಯಶೋಧೆ ಇದ್ರು. ಅವರೇ ಬಿ. ಸರೋಜಾ ದೇವಿ.

ಖ್ಯಾತ ಬಹುಭಾಷಾ ನಟಿ ಸರೋಜಾ ದೇವಿ ಅವ್ರನ್ನ ಪ್ರೀತಿಯಿಂದ ಸರೋಜಮ್ಮ ಅಂತ್ಲೇ ಅಪ್ಪು ಕರೀತಿದ್ರು. ಸರೋಜಾ ದೇವಿ ಅವರ ಜೊತೆ ಹಲವು ಸಿನಿಮಾಗಳಲ್ಲಿ ಪುನಿತ್ ರಾಜ್ ಕುಮಾರ್ ಅಭಿನಯಿಸಿದ್ದಾರೆ.

1984ರಲ್ಲಿ ತೆರೆಕಂಡ ಯಾರಿವನು ಸಿನಿಮಾದಲ್ಲಿ, ಸರೋಜಾ ದೇವಿ ಮಗನಾಗಿ ಕಾಣಿಸಿಕೊಂಡಿದ್ರು. ಆಗ ಪುನಿತ್ ನಟನೆ ನೋಡಿ ಖುಷಿಯಾದ ಸರೋಜಾ ದೇವಿ, ಈ ಮಗು ನನ್ನ ಮಗುವೇ ಆಗಿದ್ದರೆ ಎಷ್ಟು ಚೆನ್ನಾಗಿ ಇರುತ್ತಿತ್ತು ಅಂತಾ ಹೇಳಿದ್ದರಂತೆ.

ಅದಾದ ಬಳಿಕ ಇವರಿಬ್ಬರು ಒಟ್ಟಿಗೆ ಕಾಣಿಸಿಕೊಳ್ಳಲೇ ಇಲ್ಲ. 2009ರಲ್ಲಿ ತಮಿಳು ಸಿನಿಮಾ ಆಧವನ್, ಸರೋಜಾ ದೇವಿ ಅವರ ಕೊನೆ ಚಿತ್ರವಾಗಿತ್ತು. ನಂತರ, 9 ವರ್ಷಗಳ ಬಳಿಕ ಕನ್ನಡ ಸಿನಿಮಾ ಆಫರ್ ಬಂದಿತ್ತು. ಅದೇ ನಟ ಸಾರ್ವಭೌಮ. 2019ರಲ್ಲಿ ರಿಲೀಸ್ ಆದ ಈ ಚಿತ್ರದಲ್ಲಿ ಸರೋಜಾ ದೇವಿ, ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ರು. ಬರೋಬ್ಬರಿ 35 ವರ್ಷಗಳ ಬಳಿಕ ಅಪ್ಪು-ಸರೋಜಾ ದೇವಿ ಜೊತೆಯಾಗಿದ್ರು.

ಮೊದಲು ಈ ಸಿನಿಮಾ ಬೇಡ ಎಂದಿದ್ದರಂತೆ. ತದನಂತರ ಅಪ್ಪುವಿಗಾಗಿ ಈ ಸಿನಿಮಾ ಒಪ್ಪಿಕೊಂಡೆ ಅಂತಾ, ಫಿಲ್ಮ್ ಪ್ರಮೋಷನ್ ವೇಳೆ ಹೇಳಿಕೊಂಡಿದ್ದಾರೆ. ಇನ್ನೊಂದು ಇಂಟ್ರೆಸ್ಟಿಂಗ್ ವಿಷಯ ಅಂದ್ರೆ, ನಟಸಾರ್ವಭೌಮ ಅಂತಾ ಹೆಸರು ಸೆಲೆಕ್ಟ್ ಮಾಡಿದ್ದು ಕೂಡ ಸರೋಜಾ ದೇವಿ ಅವರೇ.

ಅಪ್ಪು ಓವರ್ ಆ್ಯಕ್ಟಿಂಗ್ ಮಾಡಲ್ಲ. ಕ್ಯಾರೆಕ್ಟರ್​ ಗೆ ತಕ್ಕಂತೆ ನಟನೆ ಮಾಡ್ತಾನೆ. ಯಾರಿವನು ಚಿತ್ರದಲ್ಲಿ ಹೇಗಿದ್ದನೋ ಈಗಲೂ ಆಗೆಯೇ ಇದ್ದಾನೆ. ಯಾವುದೇ ಸ್ಟೆಪ್ ಆದ್ರೂ ಕಲಿತು ಮಾಡ್ತಾನೆ. ಹೀಗಂತ ಅಪ್ಪು ಡ್ಯಾನ್ಸ್ ಹಾಡಿಹೊಗಳಿದ್ರು ಸರೋಜಾ ದೇವಿ.

ಸರೋಜಾ ದೇವಿ ಅವರನ್ನು ಪ್ರೀತಿಯಿಂದ ಸರೋಜಮ್ಮ ಅಂತ್ಲೇ ಅಪ್ಪು ಕರೀತಿದ್ರು. ಸರೋಜಮ್ಮ ನಮ್ಮ ಕುಟುಂಬಕ್ಕೆ ಬೇಕಾದವರು. ನಾನು ಬುದ್ಧಿ ಬಂದಾಗಿನಿಂದಲೂ ಅವರನ್ನು ನೋಡುತ್ತಿದ್ದೇನೆ. ಅವರು ನಮ್ಮ ಕುಟುಂಬದವರಂತೆ ಅಂತಾ ಪ್ರೆಸ್ ಮೀಟ್​ವೊಂದ್ರಲ್ಲಿ ಪುನಿತ್ ರಾಜ್‌ಕುಮಾರ್ ಹೇಳಿದ್ದಾರೆ.

- Advertisement -

Latest Posts

Don't Miss