ಸಿನಿಮಾ ಸುದ್ದಿ: ತೆಲುಗು ನಟ ವಿಜಯ್ ದೇವರಕೊಂಡ ಅವರ ಸಹೋದರ ಆನಂದ್ ದೇವರಕೊಂಡ ಬೇಬಿ ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸಿದ್ದು ಇಷ್ಟು ದಿನ ಅವರನ್ನು ವಿಜಯ್ ದೇವರಕೊಂದ ಅವರ ತಮ್ಮ ಅಂತಿದ್ದರು ಆದರೆ ಈ ಸಿನಿಮಾದ ಗೆಲುವಿನೊಂದಿಗೆ ಅವರನ್ನು ಸ್ವತಃ ಅವರ ಹೆಸರಿನಿಂದಲೆ ಗುರುತಿಸುವಂತಾಗಿದೆ ಅವರು ಈ ಸಿನಿಮಾ ದಿಂದ ಸ್ವಂತ ಐಡೆಂಟಿಟಿ ಪಡೆದುಕೊಂಡಿದ್ದಾರೆ. ಎಂದು ಅಣ್ಣ ವಿಜಯ್ ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನನು ಈ ಸಿನಿಮಾ ಜುಲಯ 14 ರಂದು ರಾಜ್ಯಾದ್ಯಂತ ಬಿಡುಗಡೆಯಾತ್ತು ಇಲ್ಲಿಯವರೆಗೂ ಸುಮಾರು 70 ಕೋಟಿ ಗಳಿಸುವ ಮೂಲಕ ಗೆಲುವನ್ನು ಕಂಡಿದೆ. ಸಾಯಿ ರಾಜೇಶ್ ಅವರು ‘ಬೇಬಿ’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಆನಂದ್ ದೇವರಕೊಂಡ ಜೊತೆ ವೈಷ್ಣವಿ ಚೈತನ್ಯ ನಟಿಸಿದ್ದು, ಅವರ ಅಭಿನಯಕ್ಕೆ ಮೆಚ್ಚುಗೆ ಸಿಕ್ಕಿದೆ. ನಟ ವಿರಾಜ್ ಅಶ್ವಿನ್ ಕೂಡ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಶ್ರೀನಿವಾಸ್ ಕುಮಾರ್ ನಾಯ್ಡು (ಎಸ್ಕೆಎನ್) ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಹೊಸ ಸಿನಿಮಾಗಳ ರಿಲೀಸ್ ನಡುವೆಯೂ ‘ಬೇಬಿ’ ಚಿತ್ರ ಉತ್ತಮವಾಗಿ ಕಲೆಕ್ಷನ್ ಮಾಡುತ್ತಿದೆ.