ಅನೇಕ ಜನರು ಬಾಯಿಯ ದುರ್ವಾಸನೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯಿಂದಾಗಿ ನಮಲ್ಲಿ ನಾವೇ ದುಕ್ಕಕ್ಕೆ ಒಳಗಾಗುತ್ತಿರುತ್ತೇವೆ, ಒಟ್ಟಿನಲ್ಲಿ ಬಾಯಿಯ ದುರ್ವಾಸನೆ ಯಿಂದ ನಮ್ಮ ಪಕ್ಕದವರು ತೊಂದರೆಗೆ ಒಳಗಾಗುತ್ತಿರುತ್ತಾರೆ.. . ಒಟ್ಟಿನಲ್ಲಿ ನೈರ್ಮಲ್ಯದ ಕೊರತೆಯಿಂದ ಸರಿಯಾದ ಕಾಳಜಿ ತೆಗೆದುಕೊಳ್ಳದೇ ಇರುವುದರಿಂದ ಬಾಯಿ ದುರ್ವಾಸನೆ ಬರುತ್ತದೆ. ಕೆಲವರಲ್ಲಿ ದೀರ್ಘಕಾಲದ ಬಾಯಿಯ ಕಾಯಿಲೆಗಳಿಂದ ಕೂಡ ಕೆಟ್ಟ ವಾಸನೆ ಬರುತ್ತದೆ. ಬೆಳ್ಳುಳ್ಳಿ ಮತ್ತು ಈರುಳ್ಳಿಯಂತಹ ಆಹಾರಗಳಲ್ಲಿನ ಕೆಟ್ಟ ವಾಸನೆಯ ತೈಲಗಳು ಶ್ವಾಸಕೋಶವನ್ನು ತಲುಪಿದಾಗ ಬಾಯಿಯ ದುರ್ವಾಸನೆ ಉಂಟುಮಾಡಬಹುದು. ಅದೇ ಸಮಯದಲ್ಲಿ ಕೆಟ್ಟ ವಾಸನೆ ಉಂಟುಮಾಡದ ಆಹಾರಗಳಿವೆ. ಈ ಆಹಾರಗಳು ಕೆಟ್ಟ ವಾಸನೆಯ ವಿರುದ್ಧ ಹೋರಾಡುತ್ತವೆ. ಹಾಗಾದರೆ ಇದರ ಬಗ್ಗೆ ತಿಳಿದುಕೊಳ್ಳೋಣ .
ಗ್ರೀನ್ ಟೀ
ಗ್ರೀನ್ ಟೀಯು ಕ್ಯಾಟೆಚಿನ್ ಎಂಬ ಶಕ್ತಿಯುತ ಉತ್ಕರ್ಷಣ ನಿರೋಧಕವನ್ನು ಹೊಂದಿರುತ್ತದೆ. ಇದು ಬಾಯಿ ದುರ್ವಾಸನೆ ಉಂಟುಮಾಡುವ ಸಲ್ಫರ್ ಸಂಯುಕ್ತಗಳನ್ನು ಕಡಿಮೆ ಮಾಡುವ ಮೂಲಕ ಬ್ಯಾಕ್ಟೀರಿಯಾವನ್ನು ನಿರೋದಿಸುತ್ತದೆ .
ಹಣ್ಣುಗಳು
ನಿಂಬೆ, ದಾಳಿಂಬೆ, ಸೇಬು, ಕಿತ್ತಳೆ ಮುಂತಾದ ಹಣ್ಣುಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಬ್ಯಾಕ್ಟೀರಿಯಾವನ್ನು ನಿಯಂತ್ರಿಸುವುದು ಮಾತ್ರವಲ್ಲದೆ ವಸಡು ಕಾಯಿಲೆ ಮತ್ತು ಜಿಂಗೈವಿಟಿಸ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಮೊಸರು
ಮೊಸರು ಪ್ರೋಬಯಾಟಿಕ್‌ಗಳನ್ನು ಹೊಂದಿರುತ್ತದೆ. ಇವು ಕೆಟ್ಟ ವಾಸನೆಯನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ನಿವಾರಿಸುತ್ತದೆ. ಇದರಲ್ಲಿ ವಿಟಮಿನ್ ಡಿ ಕೂಡ ಸಮೃದ್ಧವಾಗಿದೆ, ಇದು ದೇಹದಲ್ಲಿ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ.
ತುಳಸಿ
ತುಳಸಿಯಲ್ಲಿರುವ ಪಾಲಿಫಿನಾಲ್ಸ್ ಎಂಬ ನೈಸರ್ಗಿಕ ಅಣುಗಳು ಕೆಟ್ಟ ಬಾಯಿಯ ದುರ್ವಾಸನೆಯ ಚಿಕಿತ್ಸೆಯಲ್ಲಿ ಬಹಳ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ .ತುಳಸಿಯನ್ನು ಹೇಗೆ ಸೇವಿಸಿದರೂ ಬಾಯಿಯ ದುರ್ವಾಸನೆ ಕಡಿಮೆಯಾಗುತ್ತದೆ.
ಶುಂಠಿ
ಶುಂಠಿಯಲ್ಲಿರುವ 6ಜಿಂಜರಾಲ್ ಒಂದು ಲಾಲಾರಸದ ಕಿಣ್ವವನ್ನು ನೀಡುತ್ತದೆ ಅದು ಬಾಯಿಯಲ್ಲಿ ಸಲ್ಫರ್ ಸಂಯುಕ್ತಗಳನ್ನು ಒಡೆಯಲು ಸಹಾಯ ಮಾಡುತ್ತದೆ. ಶುಂಠಿ ಅಥವಾ ಶುಂಠಿಯಿಂದ ತಯಾರಿಸಿದ ಪದಾರ್ಥಗಳನ್ನು ತೆಗೆದುಕೊಳ್ಳುವುದರಿಂದ ಬಾಯಿಯ ದುರ್ವಾಸನೆ ನಿಯಂತ್ರಿಸಬಹುದು.
ಪೈನ್ ಕಿಲ್ಲರ್ಸ್ ನಲ್ಲಿ ಪ್ರಯೋಜನಗಳಿಗಿಂತ ಹೆಚ್ಚು ಅಡ್ಡ ಪರಿಣಾಮಗಳಿವೆ..!
ನೀವು ಕ್ಯಾಲ್ಸಿಯಂ ಕೊರತೆಯಿಂದ ಬಳಲುತ್ತಿದ್ದೀರಾ.. ಈ ಸಲಹೆಗಳನ್ನು ಪಾಲಿಸಿ..!