ಪಾಕಿಸ್ತಾನ ಅಂದ್ರೆ ಅದೊಂದು ಬರಗೆಟ್ಟ ದೇಶ.. ತಿನ್ನೋಕೆ ಒಂದೊತ್ತಿನ ಊಟ ಇಲ್ದಿದ್ರೂ ಭಾರತದ ಮೇಲೆ ದ್ವೇಷ ಸಾಧಿಸೋದೇನೂ ಕಮ್ಮಿ ಇಲ್ಲ.. ಇಂಥಾ ಪಾಕಿಸ್ತಾನದಲ್ಲಿ ಚೀಪ್ ರೇಟಲ್ಲಿ ಏನ್ ಕೊಡ್ತೀವಿ ಅಂದ್ರೂ ಅದು ಮಾಯ ಆಗೋಗಿರುತ್ತೆ.. ಅಲ್ಲಿ ಮಾಲ್ ಒಂದು ಹೊಸದಾಗಿ ಉದ್ಘಾಟನೆ ಆಗಿತ್ತು. ಅದಾದ ಕೇವಲ 30 ನಿಮಿಷದಲ್ಲಿ ಇಡೀ ಮಾಲ್ಗೆ ಮಾಲ್ ಅನ್ನೋ ಲೂಟಿ ಮಾಡಲಾಗಿತ್ತು.. ಪಾಕ್ನ ಬರಗೆಟ್ಟ ಜನಗಳ ಬಗ್ಗೆ ಹೇಳ್ತೀವಿ.
ಪಾಕಿಸ್ತಾನದ ಕರಾಚಿಯಲ್ಲಿ ಡ್ರೀಮ್ ಬಜಾರ್ ಹೆಸರಿನ ಮಾಲ್ ಒಂದು ಉದ್ಘಾಟನೆ ಆಗಿತ್ತು.. ಆರ್ಥಿಕ ಸಂಕಷ್ಟದಲ್ಲಿರೋ ಪಾಕಿಸ್ತಾನದ ಜನರಿಗೆ ಕೈಗೆಟಕೋ ದರಲ್ಲಿ ಉಡುಪು ಹಾಗೂ ಗೃಹೋಪಯೋಗಿ ವಸ್ತುಗಳು ಸಿಗ್ಬೇಕು ಅನ್ನೋದು ಮಾಲ್ ಮಾಲೀಕರ ಉದ್ದೇಶ.. ಇಲ್ಲಿ ಮಾಲ್ ಮಾಲೀಕರ ಉದ್ದೇಶವೇನು ಒಳ್ಳೇದು.. ಜನರಿಗೆ ಒಳ್ಳೇದಾಗ್ಲಿ ಅಂತ ಚೀಪ್ ರೇಟಲ್ಲಿ ವಸ್ತುಗಳು ಸಿಗ್ಲಿ ಅಂತ ಮಾಲ್ ಓಪನ್ ಮಾಡಿದ್ರು.. ಆದ್ರೆ ಬರಗೆಟ್ಟ ಪಾಕಿಸ್ತಾನದ ಜನ ಬಿಡ್ಬೇಕಲ್ಲ.. ಮಾಲ್ ಉದ್ಘಾಟನೆ ಆದ ಕೇವಲ ಅರ್ಧ ಗಂಟೆಯಲ್ಲೇ ಲೂಟಿ ಆಗಿದೆ..
ಪಾಕಿಸ್ತಾನ್ ಕರೆನ್ಸಿ ಲೆಕ್ಕದಲ್ಲಿ ಕೇವಲ 50 ರುಪೀಗೆ ಬಟ್ಟೆಗಳನ್ನ ಮಾರೋದಾಗಿ ಡ್ರೀಮ್ ಬಜಾರ್ ಮಾಲ್ ಅನೌನ್ಸ್ ಮಾಡಿತ್ತು.. ಈ ಬೋರ್ಡ್ ನೋಡಿದ್ದೇ ತಡ ಜನ ನುಗ್ಗಿದ್ರು.. ಅಂಥಾ ಜನ ಎಲ್ಲೂ ನೋಡೇ ಇಲ್ಲ.. ಅಲ್ಲಿನ ಜನ ಯಾವತ್ತೂ ಬಟ್ಟೆ, ಆಹಾರ ಪದಾರ್ಥಗಳನ್ನ ನೋಡೇ ಇಲ್ವೇನೋ ನ್ನುವಂತೆ ವರ್ತಿಸಿದ್ರು.. ಹೆಂಗಸ್ರು, ಮಕ್ಕಳು, ಮುದುಕರು ಎಲ್ರೂ ಮಾಲ್ಗೆ ನುಗ್ಗಿ ಕೈಗೆ ಸಿಕ್ಕ ಸಿಕ್ಕ ವಸ್ತುಗಳನ್ನ ದೋಚಿದ್ರು..
50 ರುಪೀ ಅಲ್ಲ 5 ಪೈಸೆ ಹಣವನ್ನೂ ಕೊಡದೆ ಜನ ಎಲ್ಲವನ್ನೂ ಕದ್ದೊಯ್ದ್ರು.. ಜನರ ಗುಂಪು ಕಂಡು ಮಾಲ್ ಸಿಬ್ಬಂದು ಬಾಗಿಲನ್ನು ಮುಚ್ಚೋಕೆ ನೋಡಿದ್ರು, ಆದ್ರೆ ಜನ ದೊಣ್ಣೆ ಹಿಡ್ಕೊಂಡ್ ಬಂದಿದ್ರು. ಗಾಜನ್ನೇ ಒಡೆದು ಒಳನುಗ್ಗಿ ಸಿಕ್ಕಿದ್ದೆಲ್ಲವನ್ನ ದೋಚಿಕೊಂಡು ಹೋದ್ರು, ಪೀಠೋಪಕರಣ, ಸಾಮಗ್ರಿಗಳನ್ನೂ ಧ್ವಂಸಗೊಳಿಸಿದ್ರು.. ಅಲ್ಲಿನ ಜನ ನಿಜಕ್ಕೂ ಹುಚ್ಚು ಹಿಡಿದವರಂತೆ ವರ್ತಿಸಿದ್ರು.. ಇಂಥಾ ಜನರನ್ನ ಕಂಟ್ರೋಲ್ ಮಾಡಲಾಗದೇ ಅಸಹಾಯಕರಾಗಿ ನಿಂತುಬಿಟ್ಟಿದ್ರು. ಮಧ್ಯಾಹ್ನ 3 ಗಂಟೆಗೆ ಮಾಲ್ ಉದ್ಘಾಟನೆ ಆದ್ರೆ, 3. 30 ಅಷ್ಟರಲ್ಲಿ ಮಾಲ್ ಕಂಪ್ಲೀಟ್ ಖಾಲಿ ಖಾಲಿ.. ಇನ್ನು ಕೆಲವ್ರು ಲೂಟಿ ಮಾಡ್ತಾನೇ ವಿಡಿಯೋವನ್ನೂ ಮಾಡಿಕೊಂಡ್ರು..