ಸ್ಯಾಂಡಲ್‌ವುಡ್‌ನ ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ ‘ಬೈರಾಗಿ’ ರಿಲೀಸಾಗಿ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣ್ತಿದೆ.. ಡಾಲಿ ಧನಂಜಯ್, ಪೃಥ್ವಿ ಅಂಬರ್ ಸಹ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ..ಇದೀಗ ಈ ಚಿತ್ರದ ಮತ್ತೊಂದು ಹೊಸ ಹಾಡು ರಿಲೀಸಾಗಿದೆ.
ಚಿತ್ರದ ಪೋಸ್ಟರ್, ಟೀಸರ್, ಟ್ರೈಲರ್ ನಿಂದ ಗಮನ ಸೆಳೆದಿದ್ದ ಬೈರಾಗಿ ಸಿನಿಮಾ ಬಿಡಿಗಡೆಯಾದ ಬಳಿಕ ಇನ್ನೂ ಹೆಚ್ಚು ಸಂಚಲನ ಸೃಷ್ಟಿಸಿದೆ. ಇನ್ನು ಚಿತ್ರದ ಹಾಡುಗಳೂ ಸಹ ಒಂದಕ್ಕಿಂತ ಒಂದು ಅದ್ಭುತವಾಗಿದ್ದು, ಇದೀಗ ಬಿಡುಗಡೆಯಾಗಿರೋ ಮತ್ತೊಂದು ಹಾಡೂ ಸಹ ಅಭಿಮಾನಿಗಳ ಮನಸ್ಸಿಗೆ ಇಷ್ಟವಾಗಿದೆ. ಅದೇ “ಗ್ರಹಣ” ಹಾಡು..
ತಮ್ಮ ಖಡಕ್ ವಾಯ್ಸ್ ನಿಂದ ಅಭಿಮಾನಿಗಳ ಮನ ಗೆದ್ದಿರೋ ನಟ ವಸಿಷ್ಠ ಸಿಂಹ, ಗಾಯಕ ವ್ಯಾಸರಾಜ್ ಹಾಗೂ ಗಾಯಕಿ ಅನನ್ಯಾ ಭಟ್ ಈ ಹಾಡಿಗೆ ಧನಿಯಾಗಿದ್ದಾರೆ..ಅನೂಪ್ ಸೀಳಿನ್ ಖಡಕ್ ಮ್ಯೂಸಿಕ್ ಈ ಹಾಡಿಗೆ ಮತ್ತಷ್ಟು ಎನರ್ಜಿ ತುಂಬಿದರೆ, ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ. ಈಗಷ್ಟೇ ಬಿಡುಗಡೆಯಾಗಿರೋ ಈ ಗ್ರಹಣ ಹಾಡು ಅದಾಗಲೇ ಸೋಶಿಯಲ್ ಮೀಡಿಯಾದಲ್ಲಿ ಕಮಾಲ್ ಮಾಡ್ತಿದೆ..ಜೆಪಿ ಮ್ಯೂಸಿಕ್ ಯೂಟ್ಯೂಬ್ ಚಾನಲ್‌ನಲ್ಲಿ ಈ ಹಾಡು ಬಿಡುಗಡೆಯಾಗಿದೆ.
ಇನ್ನು ಈ ಹಿಂದೆ ಬೈರಾಗಿಯ ಮೊದಲ ಲಿರಿಕಲ್ ಹಾಡು‘ನಕರನಕ ನುಗ್ಗಿ ಬಂತೋ ನಾಡ ಹುಲಿ’ಹಾಡನ್ನು ದುನಿಯಾ ವಿಜಯ್ ಬಿಡುಗಡೆ ಮಾಡಿದ್ದರು. ಈ ಹಾಡಿಗೆ ಅನೂಪ್ ಸೀಳಿನ್ ಸಂಗೀತ, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯವಿದ್ದು, ಆ್ಯಂಥೋನಿ ದಾಸನ್ ದನಿಗೂಡಿಸಿದ್ದರು. ವಿಜಯ್ ಮಿಲ್ಟನ್ ನಿರ್ದೇಶನ, ಕೃಷ್ಣ ಸಾರ್ಥಕ್ ನಿರ್ಮಾಣದ ಚಿತ್ರವಿದು.