Political News:
Feb:16: ಸದನ ಕಲಾಪದಲ್ಲಿ ಇಂದು ಪ್ರಸ್ತಾಪವಾದ ಅಶ್ವತ್ಥ ನಾರಾಯಣ ಅವರ ಹೇಳಿಕೆ ವಿಚಾರವಾಗಿ ಕಲಾಪ ನಡೆಯುತ್ತಿದ್ದ ವೇಳೆ ಸ್ಪೀಕರ್ ಹೇಳಿಕೆಗೆ ಎಲ್ಲೆಡೆ ವಿರೋಧ ವ್ಯಕ್ತವಾಗಿದೆ. ಕಾಗೇರಿ ರಾಜಿನಾಮೆಗೆ ಅನೇಕರು ಮನವಿ ಮಾಡುತ್ತಿದ್ದಾರೆ. ಇಂದು ಮಧ್ಯಾಹ್ನ ವಿಧಾನಸಭೆಯ ಕಲಾಪ ನಡೆಯುತ್ತಿದ್ದಾಗ, ಮಾನ್ಯ ಶಾಸಕರಾದ ಯು.ಟಿ. ಖಾದರ್ ಅವರು ನಿನ್ನೆ ಮಂಡ್ಯದ ಬಹಿರಂಗ ಸಭೆಯೊಂದರಲ್ಲಿ ಸಚಿವರಾದ ಡಾ. ಅಶ್ವತ್ಥ ನಾರಾಯಣ ಅವರು, ಟಿಪ್ಪೂ ಸುಲ್ತಾನರನ್ನು ಉರಿಗೌಡ ಮತ್ತು ನಂಜೆಗೌಡರು ಹೊಡೆದು ಹಾಕಿದ ರೀತಿಯಲ್ಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೊಡೆದುಹಾಕಬೇಕು ಎಂದು ಹೇಳಿಕೆ ನೀಡಿರುವುದನ್ನು ಖಂಡಿಸುತ್ತಿದ್ದಾಗ, ಶ್ರೀ ಖಾದರ್ ಅವರ ಮಾತಿಗೆ ಬೆಂಬಲ ನೀಡಿ ಮಾತನಾಡಲು ಶ್ರೀ ಈಶ್ವರ ಖಂಡ್ರೆ ಅವರು ಎದ್ದು ನಿಂತಾಗ, ಸ್ಪೀಕರ್ ಅವರು, ತಮ್ಮ ಪಕ್ಷದ ಸಚಿವರ ಪರ ವಹಿಸಿ, ಪ್ರತಿಪಕ್ಷದ ಸದಸ್ಯರನ್ನು ಹತ್ತಿಕ್ಕುವ ಪ್ರಯತ್ನ ಮಾಡಿದ್ದಲ್ಲದೆ, ಶ್ರೀ ಈಶ್ವರ ಖಂಡ್ರೆ ಅವರಿಗೆ ನೀವು ಹೀಗೆ ಎದ್ದು ನಿಲ್ಲುವುದು ಸರಿಯಲ್ಲ, ನಿಮ್ಮಂತವರು ಶಾಸಕರಾಗಿರುವುದೇ ಸದನಕ್ಕೆ ಅಗೌರವ, ಸದನ ಎಂದರೆ ಏನೆಂದುಕೊಂಡಿದ್ದೀರಿ. ಈ ರೀತಿ ವರ್ತನೆ ತೋರಿದರೆ ಅಧಿಕಾರ ಬಳಸಬೇಕಾಗುತ್ತದೆ, ಸದನದಿಂದ ಹೊರ ಹಾಕಬೇಕಾಗುತ್ತದೆ. ಮಾತನಾಡಬೇಡಿ. ನಿಮ್ಮಂತರವನ್ನು ಕ್ಷೇತ್ರದ ಜನತೆ ಆಯ್ಕೆ ಮಾಡಿ ಕಳುಹಿಸಿರುವುದೇ ಅಗೌರವ ಎಂದು ಹೇಳುವ ಮೂಲಕ ಇಡೀ ಭಾಲ್ಕಿಯ ಮತದಾರರಿಗೆ ಮತ್ತು ಶಾಸಕರಿಗೆ ಅವಮಾನ ಮಾಡಿರುತ್ತಾರೆ. ಈ ಹೇಳಿಕೆಯನ್ನು ಖಂಡಿಸಿ, ಸಮಸ್ತ ಭಾಲ್ಕಿ ಜನತೆ ಇಂದು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದು, ಘನೆತೆವೆತ್ತ ರಾಜ್ಯಪಾಲರಾದ ತಮಗೆ ಮಾನ್ಯ ತಹಶೀಲ್ದಾರರ ಮೂಲಕ ಈ ಮನವಿ ಪತ್ರ ಕಳುಹಿಸುತ್ತಿದ್ದೇವೆ. ತಾವು ಈ ಮನವಿಯನ್ನು ಪರಿಗಣಿಸಿ, ಪಕ್ಷಪಾತದಿಂದ ವರ್ತಿಸಿದ ಮತ್ತು ಭಾಲ್ಕಿ ಕ್ಷೇತ್ರದ ಸಮಸ್ತ ಜನತೆಗೆ ಅವಮಾನ ಮಾಡಿದ್ದಲ್ಲದೆ, ಅವರನ್ನು ಆಯ್ಕೆ ಮಾಡಿದ ಮತದಾರರಿಗೂ ಅವಮಾನ ಮಾಡಿದ ಸ್ಪೀಕರ್ ವಿರುದ್ಧ ಕ್ರಮ ಕೈಗೊಂಡು ಅವರನ್ನು ಸ್ಪೀಕರ್ ಹುದ್ದೆಯಿಂದ ವಜಾ ಮಾಡುವಂತೆ ಈ ಮೂಲಕ ಕೋರುತ್ತಿದ್ದೇವೆ.
ಸ್ಪೀಕರ್ ಶ್ರೀ ವಿಶ್ವೇಶ್ವರ ಹೆಗಡೆ ಅವರಿಗೆ ನಂತರ ತಮ್ಮ ತಪ್ಪಿನ ಅರಿವಾಗಿ ಸದನದಲ್ಲಿ ಈ ಮಾತುಗಳನ್ನು ಕಡತದಿಂದ ತೆಗೆದುಹಾಕುವುದಾಗಿ ತಿಳಿಸಿ, ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ, ಸದನ ಕಲಾಪ ದೂರದರ್ಶನದ ಮೂಲಕ ನೇರ ಪ್ರಸಾರ ಆಗುತ್ತಿದ್ದ ಹಿನ್ನೆಲೆಯಲ್ಲಿ ರಾಜಕೀಯ ವಿರೋಧಿಗಳು ಸ್ಪೀಕರ್ ಅವರು ಶ್ರೀ ಈಶ್ವರ ಖಂಡ್ರೆ ಅವರ ವಿರುದ್ಧ ಆಡಿದ ಮಾತುಗಳ ವಿಡಿಯೋ ತುಣುಕನ್ನು ಸಾಮಾಜಿಕ ತಾಣಗಳಲ್ಲಿ ವೈರಲ್ ಮಾಡುತ್ತಿದ್ದು, ಇದರಿಂದ ಶ್ರೀ ಈಶ್ವರ ಖಂಡ್ರೆ ಅವರ ವೈಯಕ್ತಿಕ ವರ್ಚಸ್ಸಿಗೆ ಕುಂದುಂಟಾಗಿದೆ. ಚುನಾವಣೆ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ಅವರ ಘನತೆಗೆ ಚ್ಯುತಿ ತರಲೆಂದೇ ಸ್ಪೀಕರ್ ಅವರು ಈ ರೀತಿ ಮಾತುಗಳನ್ನಾಡಿ ನಂತರ ವಿಷಾದ ವ್ಯಕ್ತಪಡಿಸುವ ನಾಟಕ ಆಡಿದ್ದಾರೆ. ಈ ರೀತಿ ಪಕ್ಷಪಾತದಿಂದ ವರ್ತಿಸುವ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ನಾವು ಉಗ್ರವಾದ ಹೋರಾಟ ನಡೆಸಬೇಕಾಗುತ್ತದೆ ಎಂದು ತಿಳಿಸಲು ವಿಷಾದಿಸುತ್ತೇವೆ.
ಎಂಬುವುದಾಗಿ ಬಾಲ್ಕಿಯ ಸಮಸ್ತ ಜನತೆ ಮನವಿ ಮೂಲಕ ಕೋರಿಕೊಂಡಿದ್ದಾರೆ.
ಸಿದ್ದರಾಮಯ್ಯನವರನ್ನು ಹೊಡೆದು ಹಾಕುವುದಿರಲಿ, ತಾಕತ್ತಿದ್ದರೆ ಅವರನ್ನು ಮುಟ್ಟಿ ನೋಡಿ: ಪಿ.ಎಂ.ನರೇಂದ್ರಸ್ವಾಮಿ ಸವಾಲ್
ಕಾಂಪೋಸ್ಟ್ ಸೌಲಭ್ಯವನ್ನು ಉದ್ಘಾಟಿಸಿದ ಬೊಮ್ಮನಹಳ್ಳಿ ಶಾಸಕ ಎಂ.ಸತೀಶ್ ರೆಡ್ಡಿ
ಮಂಜುನಾಥನ ದರ್ಶನಕ್ಕೆ ಪಾದಯಾತ್ರೆ ಕೈಗೊಳ್ಳುವ ಯಾತ್ರಿಗಳಿಗೆ ಅನ್ನದಾಸೋಹ ಏರ್ಪಡಿಸಿದ ಪ್ರಿಯಾ ಕೃಷ್ಣ