ಮೊಹರಮ್ ಹಬ್ಬದ ಪ್ರಯುಕ್ತ ಮದ್ಯ ಮಾರಾಟ ನಿಷೇಧ

Dharwad News: ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಜುಲೈ 16 ರಿಂದ 19ರವೆಗೆ ಮೊಹರಮ್ ಹಬ್ಬದ ಆಚರಣೆಯ ಸಮಯದಲ್ಲಿ ಕಾನೂನು ಮತ್ತು ಸುವ್ಯಸ್ಥೆ ಕಾಪಾಡುವ ಹಿತ ದೃಷ್ಠಿಯಿಂದ ಮದ್ಯಪಾನ, ಮದ್ಯಮಾರಾಟ ಮತ್ತು ಮದ್ಯ ಸಾಗಾಣಿಕೆಯನ್ನು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಜುಲೈ 16ರ ಸಂಜೆ 6 ಗಂಟೆಯಿಂದ ಜುಲೈ 18ರ ಬೆಳಿಗ್ಗೆ 6 ಗಂಟೆಯವರೆಗೆ ಧಾರವಾಡ ಗ್ರಾಮೀಣ, ಹುಬ್ಬಳ್ಳಿ ಗ್ರಾಮೀಣ ತಾಲೂಕು (ಅರಳಿಕಟ್ಟೆ ಗ್ರಾಮ ಹೊರತುಪಡಿಸಿ), ಅಳ್ಳಾವರ, ನವಲಗುಂದ, ಅಣ್ಣಿಗೇರಿ, ಕಲಘಟಗಿ ಮತ್ತು ಕುಂದಗೋಳ (ಯರಗುಪ್ಪಿ, ಯರಿನಾರಾಯಣಪುರ, ಚಿಕ್ಕನರ್ತಿ, ಮುಳ್ಳೂಳ್ಳಿ, ಪಶುಪತಿಹಾಳ ಗ್ರಾಮಗಳನ್ನು ಹೊರತು ಪಡಿಸಿ) ತಾಲೂಕು ಮತ್ತು ಜುಲೈ 17ರ ಸಂಜೆ 6 ಗಂಟೆಯಿಂದ ಜುಲೈ 19ರ ಬೆಳಿಗ್ಗೆ 6 ಗಂಟೆಯವರೆಗೆ ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಅರಳಿಕಟ್ಟಿ ಗ್ರಾಮ ಮತ್ತು ಕುಂದಗೋಳ ತಾಲೂಕಿನ ಯರಗುಪ್ಪಿ, ಯರಿನಾರಾಯಣಪುರ, ಚಿಕ್ಕನರ್ತಿ, ಮುಳ್ಕೊಳ್ಳಿ, ಪಶುಪತಿಹಾಳ ಗ್ರಾಮಗಳಲ್ಲಿ ಮದ್ಯಪಾನ, ಮದ್ಯಮಾರಾಟ ಮತ್ತು ಮದ್ಯ ಸಾಗಾಣಿಕೆಯನ್ನು ನಿಷೇಧಿಸಲಾಗಿದೆ.

ಯಾವತ್ತೂ ಭಾರತಿಯ ತಯಾರಿಕೆ ಮದ್ಯದ ಅಂಗಡಿಗಳು, ಬಿಯರ್ ಬಾರಗಳು, ಕ್ಲಬ್‌ಗಳು, ಮದ್ಯದ ಡಿಪೊಗಳನ್ನು ನಿಷೇಧಾಜ್ಞೆ ಜಾರಿಯಲ್ಲಿರುವ ಅವಧಿಯಲ್ಲಿ ಮುಚ್ಚತಕ್ಕದ್ದು ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಸಾರ್ವಜನಿಕ ಶಾಂತತೆಯನ್ನು ಕಾಯ್ದುಕೊಂಡು ಬರುವ ಹಿತದೃಷ್ಟಿಯಿಂದ ವಲಯ ಅಬಕಾರಿ ಇನ್‌ಸ್ಪೆಕ್ಟರ್, ಉಪ ವಿಭಾಗ ಅಧಿಕ್ಷಕರು ಕರ್ನಾಟಕ ಅಬಕಾರಿ ಕಾಯ್ದೆ ಅನ್ವಯ ಅವಶ್ಯಕತೆ ಕಂಡು ಬಂದಲ್ಲಿ ಶಾಂತಿ ಪಾಲನೆಗಾಗಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ಅಬಕಾರಿ ಉಪ ಆಯುಕ್ತರು ಹಾಗೂ ಆರಕ್ಷಕ ಅಧೀಕ್ಷಕರು, ಹೆಚ್ಚುವರಿ ಆರಕ್ಷಕ ಅಧೀಕ್ಷಕರು ತಮ್ಮ ವ್ಯಾಪ್ತಿಯಲ್ಲಿ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

About The Author