Sunday, October 27, 2024

Latest Posts

ಪಾಲಿಕೆ ಆಯುಕ್ತ B.H ಅನಿಲ್ ಕುಮಾರ್ ಮತ್ತು B.S.ಪ್ರಹ್ಲಾದ್ ವಿರುದ್ಧ ACB ಯಲ್ಲಿ ದೂರು ದಾಖಲು.

- Advertisement -

www.karnatakatv.net  ಬೆಂಗಳೂರು : ACB, BMTF ಮತ್ತು ಲೋಕಾಯುಕ್ತ ಸೇರಿದಂತೆ ಹಲವು ಸರ್ಕಾರೀ ತನಿಖಾ ಸಂಸ್ಥೆಗಳಲ್ಲಿ ದಾಖಲಾಗಿರುವ ಭ್ರಷ್ಟಾಚಾರದ ಹಗರಣಗಳ ವಿಚಾರಣೆಗಳನ್ನು ಎದುರಿಸುತ್ತಿರುವ B. S. ಪ್ರಹ್ಲಾದ್ ಎಂಬ ಭ್ರಷ್ಟ ಅಧಿಕಾರಿಗೆ ನಿಯಮ ಬಾಹಿರವಾಗಿ ಮುಖ್ಯ ಅಭಿಯಂತರರ ಸ್ಥಾನಕ್ಕೆ ಪದೋನ್ನತಿ ನೀಡಿರುವುದಲ್ಲದೇ, ಪಾಲಿಕೆಯ ಮೂರು ಅತ್ಯಂತ ಪ್ರಮುಖ ಪ್ರಬಲ ಇಲಾಖೆಗಳಾದ ರಸ್ತೆಗಳ ಮೂಲಭೂಲ ಸೌಕರ್ಯಗಳ ಇಲಾಖೆ, ಬೃಹತ್ ಮಳೆನೀರುಗಾಲುವೆ ಇಲಾಖೆ ಮತ್ತು OFC ಇಲಾಖೆಗಳ ಮುಖ್ಯ ಅಭಿಯಂತರರನ್ನಾಗಿ ನಿಯೋಜಿಸಿರುವ ಹಿನ್ನೆಲೆಯಲ್ಲಿ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ ನಡೆದಿರುವುದು ಸ್ಪಷ್ಟವಾಗಿದೆ.

ಈ‌ ಬಗ್ಗೆ ಮುಖ್ಯಮಂತ್ರಿಗಳು, ಮುಖ್ಯ ಕಾರ್ಯದರ್ಶಿಗಳು ಮತ್ತು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ದಾಖಲೆಗಳ ಸಹಿತ ದೂರುಗಳನ್ನು ನೀಡುತ್ತಿದ್ದ ಹಾಗೆ, ಎಚ್ಚೆತ್ತುಕೊಂಡ ಆಯುಕ್ತರು “ರಸ್ತೆಗಳ ಮೂಲಭೂತ ಸೌಕರ್ಯಗಳ ಇಲಾಖೆ” ಯನ್ನು ಹೊರತುಪಡಿಸಿ ಇನ್ನೆರಡು ಇಲಾಖೆಗಳಿಗೆ ಬಸವರಾಜ್ ಕಬಾಡೆ ಮತ್ತು ನರಸ ರಾಮರಾವ್ ರವರನ್ನು ಪ್ರಭಾರಿಗಳಾಗಿ ನಿಯೋಜಿಸಿ ಆದೇಶ ಹೊರಡಿಸಿದ್ದಾರೆ.

ಆದರೆ, 109 ಕೋಟಿ TEC ಹಗರಣಕ್ಕೆ ಸಂಬಂಧಿಸಿದಂತೆ TEC ಅಧಿಕಾರಿಗಳು TVCC ತನಿಖಾ ತಂಡಕ್ಕೆ ಕೇವಲ 79 ಕೋಟಿ ಮೊತ್ತದ ಕಾಮಗಾರಿಗಳ ಕಡತಗಳನ್ನು ಮಾತ್ರ ನೀಡಿದ್ದು, ಇನ್ನುಳಿದ 36 ಕೋಟಿ ಮೊತ್ತದ ಕಾಮಗಾರಿಗಳ ಕಡತಗಳನ್ನು ನೀಡದೇ ಸತಾಯಿಸುತ್ತಿದ್ದಾರೆ ಎಂದು TVCC ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

ಇದೇ ಹಗರಣವನ್ನು ACB ತನಿಖೆಗೆ ವಹಿಸುವಂತೆ ಇದೇ ಆಯುಕ್ತರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಮತ್ತು 109 ಕೋಟಿ ಮೊತ್ತದ Traffic Engineering Cell ಹಗರಣವನ್ನು ACB ತನಿಖೆಗೆ ವಹಿಸಿ “ಸರ್ಕಾರಿ ಆದೇಶ” ಹೊರಡಿಸಿದ ನಂತರ, ACB ಅಧಿಕಾರಿಗಳು TEC ಯ ಎಲ್ಲ 17 ಅಧಿಕಾರಿಗಳ ವಿರುದ್ಧ FIR ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.

ಇಂತಹ ಸಂದರ್ಭದಲ್ಲಿ, ಅದೇ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿರುವ B.S.ಪ್ರಹ್ಲಾದ್ ಅವರನ್ನು TEC ಕೋಶದ ‌ಮಾತೃ ಇಲಾಖೆಯಾದ “ರಸ್ತೆಗಳ ಮೂಲಭೂತ ಸೌಕರ್ಯಗಳ ಇಲಾಖೆ” ಯ CE ಆಗಿ ನಿಯೋಜಿಸಿರುವುದು ಕಾನೂನು ಬಾಹಿರ ನಡೆಯಾಗಿದೆ.

ಈ‌ ಬಗ್ಗೆ ಈಗಾಗಲೇ ಸರ್ಕಾರದ CS ಮತ್ತು ನಗರಾಭಿವೃದ್ಧಿ ಇಲಾಖೆಯ ACS ಅವರು ಆಕ್ಷೇಪಣೆಗಳನ್ನು ತಿಳಿಸಿದ್ದಾರೆ.

ಈ ಕಾನೂನು ಬಾಹಿರ ಕಾರ್ಯದಲ್ಲಿ ಆಯುಕ್ತರು ಮತ್ತು ಪ್ರಹ್ಲಾದ್ ನಡುವೆ ಕೋಟ್ಯಾಂತರ ರೂಪಾಯಿಗಳ ಕೊಡು – ಕೊಳ್ಳುವಿಕೆ ಕಾರ್ಯ ನಡೆದಿರುವುದು ಅತ್ಯಂತ ಸ್ಪಷ್ಟವಾಗಿದೆ.

ಪಾಲಿಕೆಯ ಆಯುಕ್ತರಾದ B. H. ಅನಿಲ್ ಕುಮಾರ್ ಮತ್ತು B. S. ಪ್ರಹ್ಲಾದ್ ನಡುವೆ ನಡೆದಿರುವ ಈ ಬೃಹತ್ ಭ್ರಷ್ಟಾಚಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತು ಪ್ರಹ್ಲಾದ್ ಎಂಬ ಭ್ರಷ್ಟ ಅಧಿಕಾರಿಗೆ ಸರ್ಕಾರದ ಆದೇಶವನ್ನೂ ಮೀರಿ ಪದೋನ್ನತಿ ನೀಡಿರುವುದಲ್ಲದೇ, 109 ಕೋಟಿ ಮೊತ್ತದ TEC ಹಗರಣದ ಪ್ರಮುಖ ಆರೋಪಿಯನ್ನು ಅದೇ ಇಲಾಖೆಯ  ಮುಖ್ಯ ಅಭಿಯಂತರರನ್ನಾಗಿ ಮಾಡಿರುವ ಸಂಬಂಧ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಗಣೇಶ್ ಸಿಂಗ್ ಎಂಬ ಸಾಮಾಜಿಕ ಹೋರಾಟಗಾರರು ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿದ್ದಾರೆ.

ಶಿವಕುಮಾರ್ ಬೆಸಗರಹಳ್ಳಿ, ಕರ್ನಾಟಕ ಟಿವಿ, ಬೆಂಗಳೂರು

- Advertisement -

Latest Posts

Don't Miss