ಕರ್ನಾಟಕ ಟಿವಿ ಬೆಂಗಳೂರು : ಬೆಂಗಳೂರಿನ ಶಾಂತಿನಗರದ ಕಾಂಗ್ರೆಸ್ ಶಾಸಕ ಹ್ಯಾರೀಸ್ ತಮಿಳು ಭಾಷೆಯಲ್ಲಿ ಭಾಷಣ ಮಾಡಿದ್ರು.. ಈ ಸಂಬಂಧ ಸಂತೋಷ್ ಗೌಡ ಎಂಬ ಕನ್ನಡ ಹೋರಾಟಗಾರ ಶಾಸಕ ಹ್ಯಾರೀಸ್ ಗೆ ಕರೆ ಮಾಡಿ ಯಾಕೆ ತಮಿಳಿನಲ್ಲಿ ಮಾತಾಡ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಪ್ರತಿಯಾಗಿ ಮಾತನಾಡಿದ ಶಾಸಕ ಹ್ಯಾರೀಸ್ ಮುಂದಕ್ಕೆ ಮಾತಡಲ್ಲ. ಏನ್ ಸಾರ್, ಮಲಯಾಳಂ ನಲ್ಲಿ ಮಾತಾಡ್ತೀರಾ..? ಯಾಕೆ ಸಾರ್ ಹೀಂಗೆ ಮಾತನಾಡ್ತೀರಾ ಅಂತಾರೆ ಸಂತೋಷ್.. ಈ ವೇಳೆ ಏಯ್ ಭಾರತ ದೇಶದಲ್ಲಿ ಇರೋದು ನಾವು ಉರ್ದು ಹಾಕೋತಿನಿ, ತಮಿಳು ಹಾಕೋತಿನಿ, ಮಲಯಾಳಂ ಹಾಕೋತಿನಿ ಇಡಲೈ ಅಂತ ಶಾಸಕ ಹ್ಯಾರೀಶ್ ಫೋನ್ ಕಟ್ ಮಾಡ್ತಾರೆ.. ಇದಾದ ನಂತರ ಅಶೋಕ ನಗರ ಪೊಲೀಸರು ಸಂತೋಷ್ ಗೌಡಗೆ ಕರೆ ಮಾಡಿ ಶಾಸಕರ ಜೊತೆ ಅಸಭ್ಯವಾಗಿ ಮಾತನಾಡಿದ್ದೀಯಾ ಅಂತ ಫೋನ್ ಮಾಡಿ ಹೇಳಿದ್ದಾರೆ ಎಂದು ಪೊಲೀಸರು ಸಂತೋಷ್ ಗೌಡ ಗೆ ತಿಳಿಸ್ತಾರೆ.. ನಂತರ ಸಂತೋಷ್ ಗೌಡಗೆ ಸಂತೋಷ್ ಗೌಡಗೆ ಕರೆ ಮಾಡಿ ಅಶೋಕ್ ನಗರ ಠಾಣೆಗೆ ಬರುವಂತೆ ಪೊಲೀಸರು ತಿಳಿಸಿದ್ದಾರೆ..
9ನೇ ತಾರೀಖು ಸಂತೋಷ್ ಗೌಡ ಅಶೋಕ್ ನಗರ ಠಾಣೆಗೆ ಹಾಜರಾಗುಗವಂತೆ ಪೊಲೀಸರು ಸೂಚನೆ ನೀಡಿದ್ದಾರೆ.
ಬೆಂಗಳೂರಿನ ರಸ್ತೆಗೆ ಸಾರ್ವಕರ್ ಹೆಸರು ಬೇಡ ಇಟ್ಟರೆ ರಾಜ್ಯದವರೇ ಆಗಲಿ ಎನ್ನುವ ಕಾಂಗ್ರೆಸ್ ಪಕ್ಷದ ನಾಯಕರು, ಅವರ ಪಕ್ಷದ ಶಾಸಕ ಹ್ಯಾರೀಸ್ ತಮಿಳು, ಮಲೆಯಾಳಂ ಭಾಷಣವನ್ನ ಸಮರ್ಥನೆ ಮಾಡಿಕೊಳ್ಳೋದನ್ನ ಹೇಗೆ ಸಮರ್ಥಿಸಿಕೊಳ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.
ಕರ್ನಾಟಕ ಟಿವಿ, ಬೆಂಗಳೂರು




