- Advertisement -
ಬೆಂಗಳೂರು : ಕೊರೊನಾ ಹಿನ್ನೆಲೆ ಲಾಕ್ ಡೌನ್ ದೇಶಾದ್ಯಂತ ಜಾರಿಯಲ್ಲಿದೆ.. ಸಂಕಷ್ಟದಲ್ಲಿರುವ ಜನರಿಗೆ ಸರ್ಕಾರ ಉಚಿತ ಪಡಿತರ ನೀಡ್ತಿದೆ. ಆದ್ರೆ, ಕೆಲ ನ್ಯಾಯಬೆಲೆ ಅಂಗಡಿಗಳು ಗೋಲ್ಮಾನ್ ಮಾಡ್ತಿರುವ ಆರೋಪ ಕೇಳಿ ಬರ್ತಿದೆ. ಈ ಹಿನ್ನೆಲೆ ದಾಸರಹಳ್ಳಿ ಕ್ಷೇತ್ರದ ಶಾಸಕ ಮಂಜುನಾಥ್ ಇಂದು ತನ್ನ ಕ್ಷೇತ್ರ ವ್ಯಾಪ್ತಿಯ ಮಲ್ಲಸಂದ್ರ ಹಾಗೂ ದಾಸರಹಳ್ಳಿ ವಾರ್ಡ್ ನ ನ್ಯಾಯಬೆಲೆ ಅಂಗಡಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.. ಇದೇ ವೇಳೆ ಪಡಿತರ ಕ್ಕೆ ಕಾದು ನಿಂತರ ಜನರ ಬಳಿ ಸರಿಯಾಗಿ ಪಡಿತರ ಸಿಗ್ತಿದೆಯಾ ಅಂತ ಪ್ರಶ್ನೆ ಮಾಡಿ ಕೊರೊನಾ ಹಿನ್ನೆಲೆ ಸಾಮಾಜಿಕ ಅಂತರ ಕಾಯ್ದಕೊಳ್ಳುವಂತೆ ಹೇಳಿದ್ತು.. ಇದೇ ವೇಳೆ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಯಾವುದೇ ಗೋಲ್ಮಾನ್ ನಡೆಸಿದ್ರೆ ಲೈಸೆನ್ಸ್ ರದ್ಧು ಮಾಡಿಸ್ತೇನೆ ಅಂತ ಎಚ್ಚರಿಕೆ ಸಹ ನೀಡಿದ್ರು..

ಸೂರಜ್ ಕುಮಾರ್, ಕರ್ನಾಟಕ ಟಿವಿ, ಬೆಂಗಳೂರು
- Advertisement -