Wednesday, October 22, 2025

Latest Posts

ಮನೆ, ಬ್ಯೂಟಿ ಪಾರ್ಲರ್‌ ಆಸೆ ತೋರಿಸಿ ರೇಪ್?‌

- Advertisement -

ಬೆಂಗಳೂರು ಡಿ.ಜೆ ಹಳ್ಳಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸುನೀಲ್ ಕುಮಾರ್‌​ ವಿರುದ್ಧ, ಅತ್ಯಾಚಾರ ಹಾಗೂ ಬ್ಲಾಕ್‌ಮೇಲ್‌ ಆರೋಪ ಕೇಳಿ ಬಂದಿದೆ. ರಿಜಿಸ್ಟರ್ ಮದುವೆಯಾಗುವುದಾಗಿ ನಂಬಿಸಿ 1 ವರ್ಷದಲ್ಲಿ 3 ಬಾರಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಮನೆ ಮತ್ತು ಬ್ಯೂಟಿ ಪಾರ್ಲರ್‌ ಕೊಡಿಸುತ್ತೇನೆಂದು ನಂಬಿಸಿದ್ದಾರೆ ಎಂದು ಸಂತ್ರಸ್ತೆ ದೂರಿದ್ದಾರೆ.

ತಮ್ಮ ಮನೆ ಮತ್ತು ಹೋಟೆಲ್‌ಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾರೆ. ಪ್ರತಿ ಬಾರಿ ವಿಡಿಯೋ ಕಾಲ್ ಮಾಡು ಎಂದು ಪೀಡಿಸುತ್ತಾರೆ. ಖಾಸಗಿ ಫೋಟೋ, ವಿಡಿಯೋ ಇಟ್ಟುಕೊಂಡಿದ್ದಾನೆ. ನಮ್ಮ ವಿಚಾರ ಯಾರಿಗಾದರೂ ಹೇಳಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಇನ್ಸ್‌ಪೆಕ್ಟರ್‌ ಸುನಿಲ್ ಕುಮಾರ್‌ ಹಾಗೂ ಸಂತ್ರಸ್ತೆಯ ನಡುವಿನ ವಾಟ್ಸಪ್ ಚಾಟಿಂಗ್ ಬಯಲಿಗೆ ಬಂದಿದ್ದು, ಇದರಲ್ಲಿ ಇಬ್ಬರು ಅನ್ಯೋನ್ಯವಾಗಿ ಚಿನ್ನು, ಮುದ್ದು ಎಂದು ಮೆಸೇಜ್ ಮಾಡಿದ್ದಾರೆ. ಅಲ್ಲದೇ ವಿಡಿಯೋ ಹಾಗೂ ವಾಯ್ಸ್ ಕಾಲ್ ಮಾಡಿದ್ದಾರೆ.

ಸದ್ಯ ಸಂತ್ರಸ್ತೆ ಮಹಿಳೆ, ಪೊಲೀಸ್ ಮಹಾನಿರ್ದೇಶಕರ ಕಚೇರಿ ಮೆಟ್ಟಿಲೇರಿದ್ದು, ಮುಂದೆ ಈ ಪ್ರಕರಣ ಯಾವ ಹಂತಕ್ಕೆ ತಲುಪಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

- Advertisement -

Latest Posts

Don't Miss