Thursday, December 4, 2025

Latest Posts

ಬೆಂಗಳೂರು-ಮುಂಬೈ ಸೂಪರ್‌ ಫಾಸ್ಟ್ ರೈಲು : ಗುಡ್​​ ನ್ಯೂಸ್​​ ಕೊಟ್ಟ ತೇಜಸ್ವಿ ಸೂರ್ಯ

- Advertisement -

ಬೆಂಗಳೂರು–ಮುಂಬೈ ನಡುವಿನ ದೀರ್ಘಕಾಲದ ಕನಸು ಶೀಘ್ರದಲ್ಲೇ ನಿಜವಾಗಲಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸೂಪರ್‌ಫಾಸ್ಟ್ ರೈಲು ಘೋಷಣೆ ಮಾಡಿ, 30 ವರ್ಷಗಳಿಂದ ಜನರ ಬೇಡಿಕೆಗೆ ಕೊನೆಗೂ ಸ್ಪಂದಿಸಿದ್ದಾರೆ. ಈ ಘೋಷಣೆಯೊಂದಿಗೆ ಕರ್ನಾಟಕದ ಜನತೆಗೆ ಸಂಸದ ತೇಜಸ್ವಿ ಸೂರ್ಯ ಗುಡ್ ನ್ಯೂಸ್ ನೀಡಿದ್ದಾರೆ.

ಇದುವರೆಗೂ ಈ ಮಾರ್ಗದಲ್ಲಿ ಉದ್ಯಾನ್ ಎಕ್ಸ್‌ಪ್ರೆಸ್ ಮಾತ್ರ ಸಂಚರಿಸುತ್ತಿದ್ದು, ಪ್ರಯಾಣಕ್ಕೆ 24 ಗಂಟೆಗಳಿಗಿಂತ ಹೆಚ್ಚು ಸಮಯ ಬೇಕಾಗುತ್ತಿತ್ತು. ಆದರೆ ಹೊಸ ಸೂಪರ್‌ಫಾಸ್ಟ್ ರೈಲು ಸಂಚಾರ ಆರಂಭವಾದರೆ ಪ್ರಯಾಣ ಸಮಯ ಕಡಿಮೆಯಾಗುವುದಲ್ಲದೇ, ವಿಮಾನ ಪ್ರಯಾಣಕ್ಕೆ ಪರ್ಯಾಯವಾಗಿ ಕೈಗೆಟುಕುವ ದರದಲ್ಲಿ ಜನರಿಗೆ ದೊಡ್ಡ ಅನುಕೂಲವಾಗಲಿದೆ. ಕಳೆದ ವರ್ಷವೇ 26 ಲಕ್ಷಕ್ಕೂ ಹೆಚ್ಚು ಜನರು ಈ ಮಾರ್ಗದಲ್ಲಿ ವಿಮಾನ ಪ್ರಯಾಣ ಮಾಡಿದ್ದರು ಎಂಬುದು ಗಮನಾರ್ಹ.

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ತೇಜಸ್ವಿ ಸೂರ್ಯ ಅವರ ನಿರಂತರ ಪ್ರಯತ್ನವನ್ನು ಶ್ಲಾಘಿಸಿ, ನೀವು ಯಾವಾಗಲೂ ಬೆಂಗಳೂರಿನ ಜನರ ಪರ ಕೆಲಸ ಮಾಡುತ್ತಿದ್ದೀರಿ ಎಂದು ಕೊಂಡಾಡಿದ್ದಾರೆ. ತೇಜಸ್ವಿ ಸೂರ್ಯ ಅವರು ಕೂಡ ಈ ಯೋಜನೆ ನಮ್ಮ ರಾಜ್ಯಕ್ಕೆ ದೊಡ್ಡ ಜಯ. ಜನರ ದೀರ್ಘಕಾಲದ ಕನಸು ನನಸಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss