Saturday, April 19, 2025

Latest Posts

‘ ದುನಿಯಾ’ ವಿಜಯ್‌ ಮನೆಗೆ ಭೇಟಿ ಕೊಟ್ಟ ಸಂಸದ… ‘ಸಲಗ’ ಟೀಂಗೆ ಶುಭಕೋರಿದ ತೇಜಸ್ವಿ ಸೂರ್ಯ

- Advertisement -

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ , ತಮ್ಮದೇ ಕ್ಷೇತ್ರದಲ್ಲಿರುವ ದುನಿಯಾ ವಿಜಯ್ ಅವರ ಮನೆಗೆ ಇತ್ತೀಚೆಗಷ್ಟೇ ಭೇಟಿ ನೀಡಿದ್ದರು. ನಿರ್ಮಾಪಕ ಕೆ.ಪಿ ಶ್ರೀಕಾಂತ್ ಅವರ ಬಹಳ‌ ಆತ್ಮೀಯರಾಗಿರುವ ತೇಜಸ್ವಿ ಸೂರ್ಯ, ಕ್ಷೇತ್ರದಲ್ಲಿ ರೌಂಡ್ಸ್ ಮಾಡೋ ಸಂದರ್ಭದಲ್ಲಿ ವಿಜಯ್ ಮನೆಗೆ ಶ್ರೀಕಾಂತ್ ಜೊತೆಗೆ ಭೇಟಿ ನೀಡಿದ್ದಾರೆ.

ಸಲಗ ಚಿತ್ರದ ಬಗ್ಗೆ ಸಾಕಷ್ಟು ವಿಚಾರಗಳನ್ನ ಕೇಳಿರೋ ಹಾಗೂ ಟೀಸರ್ ಮತ್ತು ಹಾಡುಗಳನ್ನ ನೋಡಿ ಮೆಚ್ಚಿಕೊಂಡಿರುವ ತೇಜಸ್ವಿ, ಚಿತ್ರದ ಬಗ್ಗೆ ಕುತೂಹಲ ವ್ಯಕ್ತಪಡಿಸಿದ್ದಾರೆ.ಜೊತೆಗೆ ವಿಜಯ್ ಚೊಚ್ಚಲ‌ ನಿರ್ದೇಶನಕ್ಕೆ ಜಯವಾಗಲಿ ಶುಭವಾಗಲಿ ಅಂತ ಹಾರೈಸಿದ್ದಾರೆ.

ಅಂದಹಾಗೇ ಸಲಗ ದುನಿಯಾ ವಿಜಯ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿದ್ದು, ಸಲಗ ಚಿತ್ರಕ್ಕೆ ಕೆಪಿ ಶ್ರೀಕಾಂತ್ ಬಂಡವಾಳ ಹೂಡಿದ್ದಾರೆ. ಡಾಲಿ ಧನಂಜಯ್, ಸಂಜನಾ ಆನಂದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು,ಚರಣ್ ರಾಜ್ ಸಂಗೀತ ನಿರ್ದೇಶನವಿದೆ. ಏಪ್ರಿಲ್ 15 ರಂದು ಸಲಗ ಸಿನಿಮಾ ಥಿಯೇಟರ್ ಅಂಗಳಕ್ಕೆ ಲಗ್ಗೆ ಇಡಲಿದೆ.

- Advertisement -

Latest Posts

Don't Miss