ಬೆಂಗಳೂರು ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕಿಗೆ, ಅತಿಥಿ ಉಪನ್ಯಾಸಕರೇ ಲೈಂಗಿಕ ಕಿರುಕುಳ ನೀಡಿದ್ದಾರಂತೆ. ಆರೋಪ ಹಿನ್ನೆಲೆ ಅತಿಥಿ ಉಪನ್ಯಾಸಕರಾದ ಸ್ವರೂಪ್ ಕುಮಾರ್, ರಾಮಾಂಜನೇಯ, ರಂಗಸ್ವಾಮಿ, ಜಗನ್ನಾಥ ಮತ್ತು ಶಿವರಾಮ್ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ.
ಎಫ್.ಐ.ಆರ್. ದಾಖಲಾದ ನಂತರ ಉಪನ್ಯಾಸಕರಾದ ರಾಮಾಂಜನೇಯರ ಹಲವು ವಿಡಿಯೋಗಳು ವೈರಲ್ ಆಗಿವೆ. ಈ ವಿಡಿಯೋಗಳಲ್ಲಿ, ರಾಮಾಂಜನೇಯ ಮದ್ಯ ಸೇವನೆ ಮಾಡಿ, ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ, ಶರ್ಟ್ ಬಿಚ್ಚಿ ಡ್ಯಾನ್ಸ್ ಮಾಡಿದ್ದಾರೆ. ಅಲ್ಲದೆ, ಅಂಬೇಡ್ಕರ್ ಜಯಂತಿಯಲ್ಲಿ ವಿದ್ಯಾರ್ಥಿಯನ್ನು ಎತ್ತಿಕೊಂಡು, ನೃತ್ಯ ಮಾಡಿದ್ದಾರೆ ಮತ್ತು ಕಾರಿನಲ್ಲಿ ಕುಳಿತು ಮದ್ಯ ಸೇವಿಸಿದ್ದಾರೆಂಬ ವೀಡಿಯೊಗಳು ವೈರಲ್ ಆಗಿವೆ.
ಇಂಟರ್ನಲ್ ಮಾರ್ಕ್ಸ್ ನೀಡಲು ಅಂಧ ವಿದ್ಯಾರ್ಥಿ ನೇತ್ರಾನಂದ ಬಳಿ, ಸೋಶಿಯಾಲಜಿ ವಿಭಾಗದ ಉಪನ್ಯಾಸಕ ರಾಮಾಂಜನೇಯ, ಹಣಕ್ಕಾಗಿ ಬೇಡಿಕೆ ಇಟ್ಟಿರುವ ಆರೋಪವೂ ಕೇಳಿ ಬಂದಿದೆ. ಸುಮಾರು 1000 ರೂಪಾಯಿ ನೀಡುವಂತೆ ಕೇಳಿದ್ದರಂತೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ




