ಬೆಂಗಳೂರಿಗರೇ ಗಮನಿಸಿ: ಆಸ್ತಿ ತೆರಿಗೆ ರಿಯಾಯತಿ ಮೇ ಅಂತ್ಯದವರೆಗೆ ವಿಸ್ತರಣೆ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 2022-23 ನೇ ಸಾಲಿನ‌ ಆಸ್ತಿ ತೆರಿಗೆ ಪಾವತಿಗೆ ನೀಡಲಾಗಿದ್ದ ಶೇ 5ರ ರಿಯಾಯಿತಿಯನ್ನು ಮೇ ತಿಂಗಳ ಅಂತ್ಯದ ವರೆಗೂ ವಿಸ್ತರಿಸಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರು ಆದೇಶ ಹೊರಡಿಸಿದ್ದಾರೆ.

ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಏಪ್ರಿಲ್ ತಿಂಗಳಿನಲ್ಲಿ ಒಂದು ಸಾವಿರ ಕೋಟಿಗೂ ಹೆಚ್ಚು ಆಸ್ತಿ ತೆರಿಗೆ ಪಾವತಿಯಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ಇನ್ನು ಒಂದು ತಿಂಗಳ ಕಾಲ ಈ ರಿಯಾಯಿತಿ ಮುಂದುವರಿಸುವಂತೆ ಸೂಚಿಸಿದ್ದರಿಂದ ಇಂದು ಈ ಆದೇಶ ಹೊರಡಿಸಲಾಗಿದೆ.

About The Author