ಬೆಂಗಳೂರಿನ ಹೇಮಾ ನಿರಂಜನ್ ಪರ್ಸೋನಾ mrs ಇಂಡಿಯಾ 2022 ರ ವಿಜೇತೆ..!

ಪ್ರತಿಷ್ಠಿತ ಪರ್ಸೋನಾ mrs ಇಂಡಿಯಾ ಸ್ಪರ್ಧೆ ಇತ್ತೀಚೆಗೆ ನಡೆಯಿತು. ಬೆಂಗಳೂರಿನವರೆ ಆದ ಹೇಮಾ ನಿರಂಜನ್ ಸ್ಪರ್ಧೆಯಲ್ಲಿ ಜಯಶೀಲರಾಗಿ ಪರ್ಸೋನಾ mrs ಇಂಡಿಯಾ ಪ್ರಶಸ್ತಿಯನ್ನು ತಮ್ನದಾಗಿಸಿಕೊಂಡಿದ್ದಾರೆ. ಈ ಸಂತಸವನ್ನು ಹೇಮಾ ಅವರು ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಂಡರು.

ಹೊಳೆನರಸೀಪುರ ನನ್ನ ಊರು. ತುಂಬಾ ಸಂಪ್ರದಾಯಸ್ಥ ಕುಟುಂಬ ನಮ್ಮದು. ತಂದೆ ಶಿಕ್ಷಕರು. ನಾನು ಸಹ ಟೀಚರ್ಸ್ ಟ್ರೈನಿಂಗ್ ಮಾಡಿದ್ದೀನಿ. ನಿರಂಜನ್ ಅವರು ನನ್ನ ಪತಿ. ಮದುವೆಯಾದ ನಂತರ ಬೆಂಗಳೂರಿನಲ್ಲೇ ಇದ್ದೀನಿ. ಈ ರೀತಿಯ ಸ್ಪರ್ಧೆಗಳಲ್ಲಿ ಭಾಗವಹಿಸುವುದು ನನ್ನ ಬಾಲ್ಯದ ಕನಸು. ಆದರೆ ನಮ್ಮ ತಂದೆ-ತಾಯಿಗೆ ಇದೆಲ್ಲಾ ಇಷ್ಟವಿರಲಿಲ್ಲ. ಆದರೆ ನನ್ನ ಪತಿ ನನ್ನ ಕನಸಿಗೆ ಆಸರೆಯಾದರು. ಅವರ ಸಹಕಾರದಿಂದ ಇದೆಲ್ಲಾ ಸಾಧ್ಯವಾಗಿದ್ದು.

ಈ ಸ್ಪರ್ಧೆಯಲ್ಲಿ ಗೆಲ್ಲಲು ಬರೀ ಬ್ಯೂಟಿ ಒಂದೇ ಮಾನದಂಡವಲ್ಲ. ತುಂಡು ಬಟ್ಟೆಗಳನ್ನು ಧರಿಸುವುದೂ ಅಲ್ಲ. ಸಾಕಷ್ಟು ಪೂರ್ವ ತಯಾರಿ ಬೇಕು. ಅಷ್ಟೇ ಅಲ್ಲದೇ ಕೆಲವು ಸುತ್ತುಗಳ ಪರೀಕ್ಷೆ ಸಹ ಇಲ್ಲಿರುತ್ತದೆ. ತುಂಡು ಉಡುಗೆ ಧರಿಸುವ ಸ್ಪರ್ಧೆಗಳಲ್ಲಿ ಭಾಗವಹಿಸಲು ನಾನು ಇಷ್ಟಪಡುವುದಿಲ್ಲ. ನಾನು ಈ ಸ್ಪರ್ಧೆಯಲ್ಲಿ ಭಾಗವಹಿಸಲು ವ್ಯಾಯಾಮ ಮಾಡಿ ಆರು ಕೆಜಿ ತೂಕ ಇಳಿಸಿಕೊಂಡಿದ್ದೀನಿ. 33 ಜನ ಸ್ಪರ್ಧಿಗಳು ಭಾಗವಹಿಸಿದ್ದ ಪರ್ಸೋನಾ mrs ಇಂಡಿಯಾ‌ 2022 ಸ್ಪರ್ಧೆಯಲ್ಲಿ ನಾನು ವಿಜೇತಳಾಗಿದ್ದು ಸಂತೋಷವಾಗಿದೆ.

ಉದ್ಯಮಿಯಾಗೂ ನಾನು ಕಾರ್ಯ ನಿರ್ವಹಿಸುತ್ತಿದ್ದೇನೆ. ಒಳ್ಳೆಯ ಅವಕಾಶ ಸಿಕ್ಕರೆ ಸಿನಿಮಾದಲ್ಲಿ ನಟಿಸುತ್ತೇನೆ. ನನ್ನ ಇಷ್ಟದ ಹೀರೋ ಕಿಚ್ಚ ಸುದೀಪ್‌. ಅವರೊಡನೆ ಅಭಿನಯಿಸುವ ಆಸೆ ಇದೆ ಎಂದರು ಹೇಮಾ ನಿರಂಜನ್.

About The Author