Banglore News:
ಬೆಂಗಳೂರಿನಲ್ಲಿ ಪ್ರಿಯತಮೆಯೇ ತನ್ನ ಪ್ರಿಯಕರನನ್ನು ಕಿಡ್ನಾಪ್ ಮಾಡಿರೋ ಘಟನೆ ನಡೆದಿದೆ. ಕಿಡ್ನಾಪ್ ಮಾಡಿ ಹಲ್ಲೆ ಮಾಡಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನ ಹನುಂತನಗರದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಯುವತಿಯರು ಸೇರಿ 8 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಮಹದೇವಪ್ರಸಾದ್ ಮತ್ತು ಕ್ಲಾರಾ ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿದ್ದರು. ಈಗಾಗಲೇ ಮದುವೆಯಾಗಿದ್ದು ಕ್ಲಾರಾ ವಿಚ್ಛೇದನ ಪಡೆದುಕೊಳ್ಳಲು ಮುಂದಾಗಿದ್ದಳು. ನಂತರ ಇಬ್ಬರು ಮನೆ ಮಾಡಿಕೊಂಡು ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದರು.
ದಿನ ಕಳೆದಂತೆ ಇಬ್ಬರಿಗೆ ಪರಸ್ಪರ ಅನುಮಾನ ಶುರುವಾಗಿದೆ. ಪ್ರಿಯತಮೆ ಕ್ಲಾರಾಗೆ ಬೇರೆ ಸಂಬಂಧ ಇದೆ ಅನ್ನೋ ಅನುಮಾನ ಪ್ರಿಯಕರನಿಗೆ ಶುರುವಾಗಿದೆ. ಇತ್ತ ಕ್ಲಾರಾಗೆ ಮಹದೇವಪ್ರಸಾದ್‌ಗೆ ಬೇರೆ ಸಂಬಂಧ ಇದೆ ಅನ್ನೋ ಅನುಮಾನ ಶುರುವಾಗಿದೆ. ಈ ಬಳಿಕ ಇಬ್ಬರು ಬೇರೆ ಬೇರೆ ಕಡೆ ವಾಸಿಸೋಕೆ ಶುರು ಮಾಡಿದ್ದರು. ಕಳೆದ 10 ದಿನದ ಹಿಂದೆ ಕೊನೆ ಬಾರಿ ನಿನ್ನ ನೋಡಬೇಕು ಎಂದು ಹೇಳಿ ಕ್ಲಾರಾ ಮಹದೇವಪ್ರಸಾದ್‌ನನ್ನು ಮನೆ ಬಳಿ ಕರೆಸಿಕೊಂಡಿದ್ದಳು. ಮಹದೇವ ಪ್ರಸಾದ್ ಕ್ಲಾರಾ ಮನೆ ಬಳಿ ಹೋಗಿದ್ದ.
ನಂತರ 5 ಜನ ಯುವಕರು ಮತ್ತು ಇಬ್ಬರು ಮಹಿಳೆಯರು ಸೇರಿ ಮಹದೇವಪ್ರಸಾದ್‌ನನ್ನು ಕಾರಿನಲ್ಲಿ ಕಿಡ್ನಾಪ್ ಮಾಡಿಕೊಂಡು ಹೋಗಿದ್ದರು. ನಂತರ ಹಲ್ಲೆ ಮಾಡಿ ವಾಪಸ್ಸು ಮನೆಗೆ ತಂದು ಬಿಟ್ಟಿದ್ದರು. ಘಟನೆ ಸಂಬಂಧ ಹನುಂತನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಘಟನೆ ಸಂಬಂಧ ಹನುಮಂತನಗರ ಠಾಣೆ ಪೊಲೀಸರು ಒಟ್ಟು 8 ಜನರನ್ನು ಬಂಧಿಸಿದ್ದಾರೆ.
ಪ್ರಧಾನಿ ಭೇಟಿಯಾದ ಬಿಎಸ್ ವೈ: ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವಂತೆ ಮೋದಿ ಸಲಹೆ
ಗುಲಾಂ ನಬಿ ಆಜಾದ್ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಿಗ್ಗಾಮುಗ್ಗಾ ವಾಗ್ಧಾಳಿ