Wednesday, March 12, 2025

Latest Posts

ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಗಂಡಾಂತರ..!

- Advertisement -

Banglore News:

ಬೆಂಗಳೂರಿನಲ್ಲಿ ನಿರಂತರ ಮಳೆಗೆ ಜನರು ಹೈರಾಣಾಗಿದ್ದಾರೆ. ಇತ್ತ ಇದೀಗ ರಣ ಮಳೆಗೆ ಕುಡಿಯುವ ನೀರಿಗೂ ಸಂಕಷ್ಟ ಎದುರಾಗಿದೆ. ಸಾಮಾನ್ಯ  ಮಳೆ ಬಾರದೆ ಇದ್ದರೆ ಜನರು ಕುಡಿಯುವ  ನೀರಿಗೆ ಪರದಾಡುವುದು  ನೋಡಿದ್ದೇವೆ ಆದರೆ ಇಲ್ಲಿ  ಸಂಪೂರ್ಣ ಉಲ್ಟಾ ಆಗಿದೆ. ಅಧಿಕ ಮಳೆಯಿಂದಾಗಿ ಬೆಂಗಳೂರಿಗರಿಗೆ ಕುಡಿಯುವ ನೀರಿನ ಗಂಡಾಂತರ  ಎದುರಾಗಿದೆ.

ಮಂಡ್ಯದ  ಮಳವಳ್ಳಿ ತಾಲೂಕಿನ ತೊರೆಕಾಡನ  ಹಳ್ಳಿಯಲ್ಲಿ ಜಲಮಂಡಳಿ  ಸಂಪೂರ್ಣ  ಜಲಾವೃತವಾಗಿದೆ . ಬೆಂಗಳೂರಿನ  ಜನತೆ ಇದೇ  ಜಲಮಂಡಳಿಯನ್ನು  ಕುಡಿಯುವ ನೀರಿಗಾಗಿ   ಅವಲಂಬಿಸಿದ್ದರು. ಇದೀಗ  ಈ  ಜಲಮಂಡಳಿ  ಸಂಪೂರ್ಣ ಜಲಾವೃತವಾಗಿರುವುದರಿಂದ  ಜನರು  ತೊಂದರೆ ಅನುಭವಿಸುವಂತಾಗಿದೆ. ನಿನ್ನೆ ರಾತ್ರಿಯ  ಧಾರಾಕಾರ ಮಳೆಗೆ  ಜಲಾಮಂಡಳಿ  ಸಂಪೂರ್ಣವಾಗಿ  ಜಲಾವೃತವಾಗಿದೆ. ಇದರಿಂದ ಯಂತ್ರೋಪಕರಣಗಳು ಸಂಪೂರ್ಣ ಮುಳುಗಡೆಯಾಗಿ ಕುಡಿಯುವ ನೀರು ಸರಬರಾಜಿಗೆ  ತೊಂದರೆಯಾ ಗಿದೆ. ಹಾಗೆಯೇ ನಿರಂತರವಾಗಿ ಇಂದು ಬೆಳಗ್ಗಿನಿಂದಲೇ ನೀರು ಹೊರಗೆ ಹಾಕುವ ಕಾರ್ಯ ನಡೆಯುತ್ತಿದೆ.

ಕರ್ನಾಟಕ -ಮಹಾರಾಷ್ಟ್ರ ಗಡಿವಿವಾದ :ಅನುಭವಿ ಕಾನೂನು ತಜ್ಞರ ನೇಮಕ -ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸೆ.9ರವರೆಗೆ ಕರ್ನಾಟಕದಲ್ಲಿ ಭಾರೀ ಮಳೆ – ಹವಾಮಾನ ಇಲಾಖೆ ಮುನ್ಸೂಚನೆ

BREAKING: ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಮುಂಬೈ ಬಳಿ ರಸ್ತೆ ಅಪಘಾತದಲ್ಲಿ ಸಾವು

- Advertisement -

Latest Posts

Don't Miss