Saturday, December 21, 2024

Latest Posts

ಬೆಂಗಳೂರು: ಕೆ.ಆರ್.ಪುರಂನಲ್ಲಿ ಬಿಜೆಪಿಯ ಸಾವಿರಾರು ಮಹಿಳೆಯರಿಗೆ ಬಾಗಿನ ವಿತರಣೆ

- Advertisement -

Banglore News:

ಗೌರಿ -ಗಣೇಶ ಹಬ್ಬವೆಂದ್ರೇ ಸಂಭ್ರಮ ಸಡಗರದ ಹಬ್ಬ, ಹಿಂದೂಗಳಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ತವರು ಮನೆಯಿಂದ ಬಾಗಿನ ಸಮರ್ಪಿಸುವ ಹಬ್ಬವೆಂದೇ ಆಚರಿಸುತ್ತಾರೆ, ಇದೀಗ ಹಲವು ರಾಜಕಾರಣಿಗಳು ತಮ್ಮ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳಿಗೆ ಬಾಗಿನ ವಿತರಿಸುತ್ತಾರೆ, ಆ ಸಾಲಿಗೆ ಬೆಂಗಳೂರಿನ‌ ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದಲ್ಲಿ ನಗರಾಭಿವೃದ್ಧಿ ಸಚಿವ, ಬೈರತಿ ಬಸವರಾಜು ತಮ್ಮ ಕ್ಷೇತ್ರಾದ್ಯಂತ ಬಾಗಿನ ವಿತರಿಸುವ ಕಾರ್ಯಕ್ರಮವನ್ನ ಕೆ.ಆರ್.ಪುರಂನಲ್ಲಿ ಅಯೋಜಿಸಿದ್ದರು, ಕಾರ್ಯಕ್ರಮಕ್ಕೆ ದೀಪ ಬೆಳಗುವ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿ, ಬೈರತಿ ಬಸವರಾಜುರವರ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು,

ಕಮೀಷನ್ ಆರೋಪ ವಿಚಾರ, ಕಮೀಷನ್ ಬಗ್ಗೆ ಮೂರ್ಖರು ಮಾತಾಡ್ತಾರೆ ಯಾವನೋ ಒಬ್ಬನಿಗೆ ಹೇಳಿಕೊಟ್ಟು ಸುಳ್ಳು ಆರೋಪ ಮಾಡಿಸ್ತಿದಾರೆ, ಸುಳ್ಳು ಆರೋಪ ಮಾಡಿದರೆ ಅದು ಸತ್ಯ ಆಗಲು ಸಾಧ್ಯವಿಲ್ಲ..ಅವರು ಲೋಕಾಯುಕ್ತಕ್ಕೆ ದೂರು ಕೊಟ್ಟು ತನಿಖೆ ಮಾಡಿಸಲಿ.ಇದಕ್ಕೆ ನಮ್ಮದೇನೂ ಅಭ್ಯಂತರ ಇಲ್ಲ..ಸುಮ್ಮನೆ ಅನಗತ್ಯವಾಗಿ ಆರೋಪ ಮಾಡಲಾಗ್ತಿದೆ. ಸಿದ್ದರಾಮಯ್ಯ ಅವರು ಉದ್ದೇಶಪೂರ್ವಕವಾಗಿ ಆರೋಪ ಮಾಡಿಸ್ತಿದಾರೆ. ಅಧಿವೇಶನದಲ್ಲಿ ಕಾಂಗ್ರೆಸ್ ನವರಿಗೆ ಇದರ ಬಗ್ಗೆ ತಕ್ಕ ಉತ್ತರ ಕೊಡ್ತೇವೆ ಕಮೀಷನ್ ಆರೋಪ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರಲ್ಲ,ಇದು ಸುಳ್ಳು ಆರೋಪ ಅಂತ ಜನರಿಗೂ ಗೊತ್ತಿದೆ ಎಂದು ಯಡಿಯೂರಪ್ಪ ಹೇಳಿದ್ರು

ಕಳೆದೊಂದು ವಾರದಿಂದ ಕ್ಷೇತ್ರಾದ್ಯಂತ ಬಾಗಿನ ವಿತರಿಸಿ ಇಂದು ಬಿಜೆಪಿ ಪ್ರಮುಖ ಮಹಿಳಾ ಕಾರ್ಯಕರ್ತರಿಗರ ಬೃಹತ್ ಸಮಾವೇಶ ನಡೆಸಿ ಯಡಿಯೂರಪ್ಪ ಕೈಯಿಂದ ಅರಿಶಿಣ-ಕುಂಕುಮ, ಸೀರೆ ಮತ್ತು ಬಳೆಗಳನ್ನ ವಿತರಿಸಿದರು, ಈ ಸಂದರ್ಭದಲ್ಲಿ ಮಾತಾನಾಡಿದ ಬೈರತಿ ಬಸವರಾಜ ಕಳೆದ 15 ವರ್ಷದಿಂದ ಬಾಗಿನ ವಿತರಿಸುತ್ತಿದ್ದೇವೆಂದರು, ಬಸವರಾಜು 40₹ ಕಮೀಶನ್ ಆರೋಪದ ಬಗ್ಗೆ ಗುತ್ತಿಗೆದಾರರ ವಿರುದ್ದ ಕೆಂಡಾಮಂಡಲರಾದರು, ಮೊದಲು ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಲಿ ನಂತರ ಮಾತಾನಾಡಲಿ, ಈಗಾಗಲೇ ಸಚಿವ‌ ಮುನಿರತ್ನ ಮಾನನಷ್ಟ ಮೊಕದ್ದಮೆ ಹೂಡಲು ಸಜ್ಜಾರಾಗಿದ್ದಾರೆ ಇದಕ್ಕೆ ನ್ಯಾಯಾಲಯದಲ್ಲಿ ಉತ್ತರಿಸಲಿಯೆಂದು ಸವಾಲು ಎಸೆದರು.

ಮಂಡ್ಯ ಜಿಲ್ಲೆಯು ನಾಯಕತ್ವ ಗುಣ ಬೆಳೆಸುತ್ತದೆ: ವಿ.ಆರ್. ಶೈಲಜ

 

ಮಂಗಳೂರು: ಹೊಂಡ ಅಗೆಯುತ್ತಿದ್ದ ಸಂದರ್ಭದಲ್ಲಿ ಪ್ರಾಚೀನ ಗುಹೆ, ಪರಿಕರಗಳು ಪತ್ತೆ

ಮಂಡ್ಯ: ರಾತ್ರಿ ಸುರಿದ ಧಾರಾಕಾರ ಮಳೆ ಕೊಚ್ಚಿ ಹೋದ ರಸ್ತೆ, ಒಡೆದ ವಿ.ಸಿ ನಾಲೆ

- Advertisement -

Latest Posts

Don't Miss