Hubballi News : ಹುಬ್ಬಳ್ಳಿ ಜಿಲ್ಲೆಯ ಶಿಗ್ಗಾಂವಿಯ ಬಂಕಾಪುರದಲ್ಲಿ ಮಾತನಾಡಿದ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು, ಇದು ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ, ಜಾತಿ ಗಣತಿ ಅಲ್ಲ ಎಂದು ಹೇಳಿದ್ದಾರೆ. ಸದ್ಯ ಜಾತಿ ಗಣತಿ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಸುವಂತೆ ಒತ್ತಾಯಿಸಲಾಗಿದೆ.
ಕಾಂಗ್ರೆಸ್ ವಿರುದ್ಧ ಬೊಮ್ಮಾಯಿ ವಾಗ್ದಾಳಿ:
ಬಾರ್ ಲೈಸೆನ್ಸ್ ವಿಚಾರವಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ದ್ವಂದ್ವ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಸಿಎಂ ಇದ್ದಾರೋ, ಸೂಪರ್ ಸಿಎಂ ಇದ್ದಾರೋ ಎಂದು ತಿಳಿಯುತ್ತಿಲ್ಲ. ಒಂದು ನೀತಿ ಬಗ್ಗೆ ಮಾತನಾಡಿದಾಗ ಸರ್ಕಾರ ಅದಕ್ಕೆ ಸ್ಪಷ್ಟನೆ ಕೊಡಲಿ. ಎಲ್ಲಾ ವಿಚಾರದಲ್ಲಿಯೂ ಸಿಎಂ ಒಂದು ದಾರಿ, ಡಿಸಿಎಂ ಒಂದು ದಾರಿ ಆಗಿದೆ. ಕಾವೇರಿ ನೀರು ಬಿಡುವ ವಿಚಾರದಲ್ಲಿ ಡಿಸಿಎಂ ನೀರು ಬಿಡಲ್ಲ ಎಂದರು. ಆದರೆ ಸಿಎಂ ನೀರು ಬಿಟ್ಟಿದ್ದನ್ನು ನಾವು ನೋಡಿದ್ದೇವೆ ಎಂದು ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಬೊಮ್ಮಾಯಿ ವಾಗ್ದಾಳಿ ಮಾಡಿದ್ದಾರೆ.
ಬರಗಾಲ ಸಮರ್ಥವಾಗಿ ನಿಭಾಯಿಸುತ್ತೇವೆ ಎಂದಿರುವ ಸರ್ಕಾರದ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ್ದು, ಬರೀ ಹೇಳಿಕೆಯಿಂದ ಬರಗಾಲ ಸಮರ್ಥವಾಗಿ ಎದುರಿಸುವುದಕ್ಕೆ ಆಗುವುದಿಲ್ಲ. ನಾವು ಇಂತಹ ಹೇಳಿಕೆ ಬಹಳ ನೋಡಿದ್ದೇವೆ. ಒಂದು ಬಿಡಿ ಕಾಸು ಎಲ್ಲೂ ಬಿಡುಗಡೆ ಮಾಡಿಲ್ಲ. ಕೇಂದ್ರಕ್ಕೆ ಪತ್ರ ಬರೆದಿದ್ದು, ತಂಡ ಬರುತ್ತದೆ ಅಂತಾ ಹೇಳುತ್ತಿದ್ದಾರೆ. ಆದರೆ ನಾವು ಯಾವುದಕ್ಕೂ ಕಾಯಲೆ ಇಲ್ಲಾ.
ನಾವು ಕೂಡಲೆ ಹಣ ಕೊಟ್ಟು ಪರಿಹಾರ ನೀಡಿದ್ದೇವೆ. ಸುಮಾರು 2 ಸಾವಿರ ಕೋಟಿಗೂ ಅಧಿಕ ಹಣ ತಕ್ಷಣ ಬಿಡುಗಡೆ ಮಾಡಿದ್ದೆವು. ರಾಜ್ಯದ ಬೊಕ್ಕಸದಿಂದಲೇ ಸಹಾಯ ಮಾಡಬಹುದು. ಇಲ್ಲಾ ಎಂದರೆ ಕುಂಟು ನೆಪ ಹೇಳಿ ಮುಂದಕ್ಕೆ ಹಾಕಬಹುದು ಎಂದು ಸರ್ಕಾರದ ನೀತಿ ವಿರುದ್ಧ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.
ಜಿಲ್ಲೆಯ ಮೂರು ತಾಲೂಕು ಬರಪೀಡಿತ ಪ್ರದೇಶ ಘೋಷಣೆ ವಿಳಂಬ ಕುರಿತಾಗಿ ಪ್ರತಿಕ್ರಿಯಿಸಿ, ರೆವೆನೂ ಮಿನಿಸ್ಟರ್ ಬಳಿ ಮಾತಾಡಿದ್ದೇನೆ. ಮತ್ತೊಮ್ಮೆ ವರದಿ ತರಿಸಿಕೊಂಡು ಪರಿಶೀಲನೆ ಮಾಡುತ್ತೇವೆ. ಸೋಮವಾರದ ಒಳಗೆ ಈ ಮೂರು ತಾಲೂಕು ಬರಗಾಲ ಪೀಡಿತ ಪಟ್ಟಿಯಲ್ಲಿ ಸೇರುತ್ತವೆ ಎಂದು ರೈತರಿಗೆ ಬೊಮ್ಮಾಯಿ ಭರವಸೆ ನೀಡಿದ್ದಾರೆ.
Highway : ಸಾವಿನ ಹೆದ್ದಾರಿಯ ಕಾಮಗಾರಿಗೆ ಬೇಕಿದೆ ಚುರುಕು : ಜನರಲ್ಲಿ ಹುಟ್ಟಿದ ಮತ್ತೊಂದು ಅನುಮಾನ..!
Vande Bharat Express : ಹುಬ್ಬಳ್ಳಿ : ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳ ವೇಳಾಪಟ್ಟಿ ಪರಿಷ್ಕರಣೆ
Television : ಟಿವಿ ದೋಷ ಸರಿಪಡಿಸದ ಝಿಯೋಮಿ ಕಂಪನಿಗೆ ದಂಡ ವಿಧಿಸಿದ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ