ಬೆಂಗಳೂರಿನಲ್ಲಿ ಪುಂಡ ಪೋಕರಿಗಳ ಹಾವಳಿ ದಿನೇ ದಿನೇ ಹೆಚ್ಚಾಗ್ತಿದೆ. ಸದ್ಯ ಮಾರಕಾಸ್ತ್ರ ತೋರಿಸಿ ಮೊಬೈಲ್ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಕಳ್ಳರನ್ನು ಹಿಡಿದುಕೊಡುವಲ್ಲಿ ಮಾಜಿ ಕಾರ್ಪೋರೇಟರ್ ಗಣೇಶ್ ರೆಡ್ಡಿ ಸಾಹಸ ಮೆರೆದಿದ್ದಾರೆ. ಹೌದು ಸಿನಿಮೀಯ ರೀತಿಯಲ್ಲಿ ಮಾರಕಾಸ್ತ್ರಗಳನ್ನ ತೋರಿಸಿ , ಬೆದರಿಸಿ ಮೊಬೈಲ್ ಕಳ್ಳತನ ಮಾಡಿ ಪರಾರಿ ಯಾಗ್ತಿದ್ದ ಕಳ್ಳರನ್ನ ಗಣೇಶ್ ಕಾರು ಗುದ್ದಿಸಿ ಮೊಬೈಲ್ ವಾಪಾಸ್ಸು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಅಂದಹಾಗೆ ಬೆಳಗ್ಗೆ 5 ಗಂಟೆ ಸುಮಾರಿಗೆ ಎಚ್ ಬಿ ಆರ್ ಲೇಔಟ್ ನಲ್ಲಿ ಮಾರಕಾಸ್ತ್ರ ತೋರಿಸಿ ವ್ಯಕ್ತಿಯೊಬ್ರ ಮೊಬೈಲ್ ಕದ್ದು ಪರಾರಿಯಾಗಿದ್ರು. ಅದೇ ಸಮಯಕ್ಕೆ ಸ್ಕಾರ್ಪಿಯೋ ಕಾರಿನಲ್ಲಿ ಬಂದ ಗಣೇಶ್ ರೆಡ್ಡಿ , ಮೊಬೈಲ್ ಕಳೆದುಕೊಂಡ ವ್ಯಕ್ತಿಯನ್ನ ಕಾರಿನಲ್ಲಿ ಕೂರಿಸಿಕೊಂಡು ಆರೋಪಿಗಳ ಬೆನ್ನು ಬಿಡದಂತೆ ಚೇಸ್ ಮಾಡಿದ್ದಾರೆ. ಆಮೇಲೆ ಸಮೀಪದಲ್ಲೇ ಇದ್ದ ಆರೋಪಿಗಳ ಬೈಕ್ ಗೆ ಡಿಕ್ಕಿ ಹೊಡೆದು ಕೆಳಗೆ ಬೀಳಿಸಿದ್ದಾರೆ. ಆದರೆ ಆರೋಪಿಗಳು ಮಾರಕಾಸ್ತ್ರ ತೋರಿಸಿ ಬೆದರಿಸಿದ್ರು ಆದರೂ ಯಾವುದಕ್ಕೂ ಅಂಜದೆ ಗಣೇಶ್ ರೆಡ್ಡಿ ಆರೋಪಿಗಳಿಗೆ ಬೆದರಿಸಿ ಮೊಬೈಲ್ ವಾಪಸ್ಸ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರೋ ಗಣೇಶ್ ರೆಡ್ಡಿ , ನಿನ್ನೆ ಬೆಳಗ್ಗೆ 5.40 ಕ್ಕೆ ನಾನು ಜಿಮ್ ಗೆ ಹೋಗ್ತಿದ್ದಾಗ , ಅದೇ ರಸ್ತೆಯಲ್ಲಿ ಒಬ್ಬ ಹುಡುಗ ಮೊಬೈಲ್ ಕಳ್ಳತನ ಆಗಿದೆಅಂತ ಓಡೋಡಿ ಬಂದ . ಇಬ್ಬರು ಹುಡುಗರು ಬೈಕಿನಲ್ಲಿ ಪಾಸ್ ಆಗೋದನ್ನ ನಾನು ನೋಡಿದೆ.ತಕ್ಷಣ ಹುಡುಗನ್ನ ಕಾರಿನಲ್ಲಿ ಕೂರಿಸಿಕೊಂಡು ಬೈಕ್ ಚೇಸ್ ಮಾಡಿದೆ. ಎಚ್ ಬಿ ಆರ್ ಲೇಔಟ್ 8ನೇ ಕ್ರಾಸ್ ಬಳಿ ನನ್ನ ಕಾರು ಅವ್ರ ಬೈಕ್ ಗೆ ತಗುಲಿತು . ಆಗ ಇಬ್ಬರಲ್ಲಿ ಒಬ್ಬ ಹುಡುಗ ನನಗೆ ಮಾರಕಾಸ್ತ್ರ ತೋರಿಸಿ ಬೆದರಿಸಲು ಯತ್ನಿಸಿದ ಆಗ ನಾನು ಮೊಬೈಲ್ ವಾಪಸ್ ಕೊಡು , ಇಲ್ಲಂದ್ರೆ ನಿಮ್ಮ ಬೈಕ್ ಸ್ಟೇಷನ್ ಗೆ ತೆಗೆದುಕೊಂಡು ಹೋಗ್ತೇನೆ ಅಂದೆ ಬೆದರಿಸಿದೆ. ಹೀಗಾಗಿ ಇಬ್ರು ಕೂಡ ಮೊಬೈಲ್ ಎಸೆದು ಪರಾರಿಯಾದ್ರು. ಬಳಿಕ ಆಹುಡುಗನಿಗೆ ಮೊಬೈಲ್ ಕೊಟ್ಟು ವಾಪಸ್ಸಾದೆ ಅನ್ನೋದನ್ನ ಸ್ಪಷ್ಟಪಡಿಸಿದ್ರು.