Sunday, December 22, 2024

Latest Posts

ಬಿಬಿಎಂಪಿ ಎಲೆಕ್ಷನ್-ಸರ್ಕಾರಕ್ಕೆ ಸಲೀಂ ಅಹ್ಮದ್ ಸವಾಲ್..!

- Advertisement -

ಪ್ರಸ್ತುತ ಸಂದರ್ಭದಲ್ಲಿ ರಾಜ್ಯದಲ್ಲಿ ಕೊರೋನಾ ಹಾವಳಿ ದಿನೇ ದಿನೇ ಹೆಚ್ಚಾಗ್ತಿದೆ.. ಇನ್ನೊಂದೆಡೆ ಪ್ರವಾಹದಿಂದಾಗಿ ರಾಜ್ಯದ ಜನ ಸಂಕಷ್ಟದಲ್ಲಿದ್ದಾರೆ.. ಈ ಸಂದರ್ಭದಲ್ಲಿ ಬಿಬಿಎಂಪಿ ಚುನಾವಣೆ ನಡೆಸುವ ಅವಶ್ಯಕತೆ ಬಹಳ ಇದೆ.. ಈ ವಿಚಾರದ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್ ಅವರು ಕರ್ನಾಟಕ ಟಿವಿ ಜೊತೆಗೆ ಮಾತನಾಡಿದ್ದಾರೆ..  ಬೆಂಗಳೂರು ಅಭಿವೃದ್ಧಿಗಾಗಿ ಚುನಾವಣೆ ನಡೆಯುವ ಅವಶ್ಯಕತೆ ಹೆಚ್ಚಿದೆ.. ಆದ್ರೆ ಈ ನಿಟ್ಟಿನಲ್ಲಿ ಸರ್ಕಾರದ ನಡೆ ಸರಿ ಇಲ್ಲ..ಈಗಾಗ್ಲೇ ಕಳೆದ ಆರು ತಿಂಗಳಲ್ಲಿ ಕೊರೋನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ.. ಬೆಂಗಳೂರಿನ ವಾರ್ಡ್ ಗಳನ್ನ 225ಕ್ಕೆ ಏರಿಕೆ ಮಾಡ್ತೀವಿ ಅಂತ ನೆಪವನ್ನೊಡ್ಡಿ ಸರ್ಕಾರ ಚುನಾವಣೆಯನ್ನ ಮುಂದೂಡೋಕೆ ಪ್ರಯತ್ನಿಸಿದೆ.. ಚುನಾವಣೆಯಲ್ಲಿ ಸೋಲ್ತೀವಿ ಅನ್ನೋ ಭಯದಿಂದ ಹೀಗೆ ಚುನಾವಣೆಯನ್ನ ಮುಂದೂಡ್ತಿದೆ.. ಇದನ್ನ ಕಾಂಗ್ರೆಸ್ ಪಕ್ಷ ಖಂಡಿತವಾಗಿಯೂ ಸಹಿಸೋದಿಲ್ಲ ಅಂತ ಹೇಳುವ ಮೂಲಕ ಸಲೀಂ ಅಹ್ಮದ್ ಅವರು ಸರ್ಕಾರದ ವಿರುದ್ಧ ತಮ್ಮ ಅಸಮಾಧಾನವನ್ನ ಹೊರಹಾಕಿದ್ದಾರೆ..

- Advertisement -

Latest Posts

Don't Miss