ಬೆಂಗಳೂರು:ನಗರದ ಮಹದೇವಪುರ ವಲಯ ಹಗದೂರು ವಾರ್ಡ್ ವ್ಯಾಪ್ತಿಯಲ್ಲಿ ಸ್ವಾವಲಂಬಿ ಜೀವನ ಸಾಗಿಸುವ ಸಲುವಾಗಿ ವಲಯ ಜಂಟಿ ಆಯುಕ್ತರಾದ ದಾಕ್ಷಾಯಿಣಿ ರವರು ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ವಿತರಿಸಿದರು.
ಬಿಬಿಎಂಪಿ ವ್ಯಾಪ್ತಿಯ ಎಲ್ಲಾ 8 ವಲಯಗಳಲ್ಲಿಯೂ ಕಲ್ಯಾಣ ವಿಭಾಗದ ವತಿಯಿಂದ ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ನೀಡಲಾಗುತ್ತಿದೆ. ಅದರಂತೆ 2019 ರಿಂದ 22ನೇ ಸಾಲಿನಲ್ಲಿ ಹೊಲಿಗೆ ತರಬೇತಿ ಪಡೆದಿದ್ದ 15 ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.
ಹೊಲಿಗೆ ಯಂತ್ರಗಳನ್ನು ವಿತರಿಸಿದ ಬಳಿಕ ಮಾತನಾಡಿದ ಜಂಟಿ ಆಯುಕ್ತರು, ಪಾಲಿಕೆಯಿಂದ ನೀಡಿರುವಂತಹ ಉಚಿತ ಹೊಲಿಗೆ ಯಂತ್ರಗಳಿಂದ ಸ್ವಾಲಂಬಿ ಬದುಕು ಕಟ್ಟಿಕೊಳ್ಳಲು ಸಲಹೆ ನೀಡಿದರು.
ಇದೇ ವೇಳೆ ತರಬೇತಿ ಪಡೆದಂತಹ ಕುಸುಮ ರವರು ಮಾತನಾಡಿ, ಕಳೆದ 4 ವರ್ಷಗಳ ಹಿಂದೆ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಹೊಲಿಗೆ ತರಬೇತಿ ಪಡೆಯಲಾಗಿದೆ. ಆದರೆ, ಹೊಲಿಗೆ ಯಂತ್ರಗಳನ್ನು ನೀಡುವಲ್ಲಿ ತಡವಾಗಿದ್ದು, ಇದೀಗ ವಲಯ ಜಂಟಿ ಆಯುಕ್ತರು ಕಾಳಜಿ ವಹಿಸಿ ನಮಗೆ ಹೊಲಿಗೆ ಯಂತ್ರಗಳು ವಿತರಿಸಿದ್ದಾರೆ. ಇದರಿಂದ ನಾವು ಬಿಡುವಿನ ಸಮಯದಲ್ಲಿ ಜೀವನಕ್ಕೆ ಸ್ವಲ್ಪ ಹಣ ಸಂಪಾದನೆ ಮಾಡಿಕೊಳ್ಳಬಹುದೆಂದು ಸಂತಸ ವ್ಯಕ್ತಪಡಿಸಿದರು.
Traffic jam: ಸಚಿವ ಸಂತೋಷ್ ಲಾಡ್ ಗೆ ಬೆಂಬಲಿಗರಿಂದ ಸನ್ಮಾನ , ರಸ್ತೆಯಲ್ಲಿ ವಾಹನ ದಟ್ಟಣೆ.