Wednesday, September 24, 2025

Latest Posts

ಮೈಸೂರಿಗರೇ ಹುಷಾರ್!‌ ರಾತ್ರೋರಾತ್ರಿ ಕಾರ್ಯಾಚರಣೆ ಶುರು!

- Advertisement -

ಮೈಸೂರಿನಲ್ಲಿ ಹೆಚ್ಚಾಗುತ್ತಿರುವ ಡ್ರಗ್‌ ಪ್ರಕರಣಗಳಿಗೆ ಕಡಿವಾಣ ಹಾಕಲು ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್‌ ಅವರು ವಶೇಷ ಕಾರ್ಯಚರಣೆಗಳನ್ನು ಕೈಗೊಂಡಿದ್ದಾರೆ. ಈ ಹಿಂದೆಯೂ ನಗರದ ಬಹಳಷ್ಟು ಕಡೆ ದಾಳಿ ಮಾಡಿ ಡ್ರಗ್‌ ಪೆಡ್ಲರ್ಸ್‌ಗಳನ್ನು ಅರೆಸ್ಟ್‌ ಕೂಡ ಮಾಡಿದ್ರು. ದೊಡ್ಡ ಮೊತ್ತದ ಡ್ರಗ್‌ ಗಳನ್ನು ವಶಪಡಿಸಿಕೊಂಡಿದ್ದರು.

ಇದೀಗ ನಗರದಲ್ಲಿ ಮಾದಕವಸ್ತು ತಯಾರಿಕಾ ಘಟಕ ಪತ್ತೆ ಬಳಿಕ ಎಚ್ಚೆತ್ತ ನಗರ ಪೊಲೀಸರು ಭಾನುವಾರ ರಾತ್ರಿ ವಿವಿಧೆಡೆ ದಿಢೀರ್ ಕಾರ್ಯಾಚರಣೆ ನಡೆಸಿದ್ದಾರೆ. ನಗರ ಪೊಲೀಸ್‌ ಆಯುಕ್ತ ಸೀಮಾ ಲಾಟ್ಕರ್ ನೇತೃತ್ವದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಗಾಂಜಾ ಸೇವಿಸಿದ 26 ಜನ ಪತ್ತೆಯಾಗಿದ್ದು ಒಬ್ಬ ಮಾರಾಟಗಾರನನ್ನು ಪತ್ತೆಹಚ್ಚಲಾಗಿದೆ.
ಮಂಡಿ ಮೊಹಲ್ಲಾ, ಉದಯಗಿರಿ, ಎನ್ ಆರ್ ಮೊಹಲ್ಲಾ, ನಜರ್ ಬಾದ್, ಕೆ. ಆರ್ ಮೊಹಲ್ಲಾ ಸೇರಿ ಹಲವು ಕಡೆ ಏಕ ಕಾಲಕ್ಕೆ ಕಾರ್ಯಾಚರಣ ನಡೆಸಿ 59 ಗೋದಾಮು ಪರಿಶೀಲಿಸಲಾಗಿದೆ. ಗಾಂಜಾ ಮಾರಾಟ ಪ್ರಕರಣದ ಹಿನ್ನೆಲೆಯುಳ್ಳ 35 ಜನರನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss