Health tips:
ಕೋಳಿ ಅಂಗಡಿಗಳ ಮುಂದೆ ಕೋಳಿ ಖರೀದಿಸುವ ಪರಿಸ್ಥಿತಿ ಬದಲಾಗಿದೆ, ಚಿಕನ್ ಮಾರುವ ಅಂಗಡಿಗಳು AC ಅಂಗಡಿಗಳಾಗಿ ಮಾರ್ ಪಾಡ್ ಆಗಿದೆ ,ಅಲ್ಲಿ ಮಾರುವ ಚಿಕನ್ನಲ್ಲಿ ಒಂದು ಹನಿ ರಕ್ತ ಕಣಗಳು ಇರುವುದಿಲ್ಲ ಅಷ್ಟು ಸ್ವಚ್ಛವಾಗಿರುತ್ತದೆ. ಆದರೆ ಇದು ಫ್ರೆಶ್ ಚಿಕನ್ ಅಥವಾ ಹಳೆಯ ಚಿಕನ್ ಎಂದು ಕಂಡು ಹಿಡಿಯಲು ಸಾಮಾನ್ಯವಾಗಿ ಹಾಗುವುದಿಲ್ಲ ಈ ಒಂದು ಅನುಮಾನ ಎಲ್ಲರಿಗೂ ಇರುತ್ತದೆ. ಜೊತೆಗೆ ಎಲ್ಲರೂ ಈಗ ಆನ್ಲೈನ್ ಅಲ್ಲಿ ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ, ನಿಮ್ಮ ಅಡುಗೆಗೆ ತಕ್ಕಹಾಗೆ ಅದನ್ನು ಕತ್ತರಿಸಿ ಪ್ಯಾಕ್ ಮಾಡಿ ಇಟ್ಟಿರುತ್ತಾರೆ. ಹಾಗಾದರೆ ಫ್ರೆಶ್ ಚಿಕನ್ ಯಾವುದು ಎಂದು ತಿಳಿದು ಕೊಳ್ಳುವುದು ಹೇಗೆ ಎಂದು ನಾವು ನಿಮಗೆ ಹೇಳುತ್ತೇವೆ .
ಚಿಕನ್ ಚೀಲವನ್ನು ಬೇರ್ಪಡಿಸುವಾಗ ಅದರಲ್ಲಿ ಹೆಚ್ಚು ನೀರು ಇಲ್ಲದ್ದಿದ್ದರೆ ತಾಜಾವಾಗಿರುತ್ತದೆ ,ಅದರಲ್ಲಿ ಹೆಚ್ಚು ನೀರು ಇದ್ದರೆ ತಾಜಾತನವನ್ನು ಕಾಪಾಡಿಕೊಳ್ಳಲು ಅದನ್ನು ಇರಿಸಲಾಗಿದೆ ಎಂದು ಅರ್ಥ, ನೀರನ್ನು ತೆಗೆದ ನಂತರ ಕೋಳಿ ಕುಗ್ಗುತ್ತದೆ .
1. ತಾಜಾ ಕೋಳಿ ಮೃದುವಾದ ಚರ್ಮವನ್ನು ಹೊಂದಿರುತ್ತದೆ .
2. ಕೋಳಿ ಮಾಂಸವು ಬೂದು ಬಣ್ಣದಲ್ಲಿದ್ದರೆ ತಾಜಾವಾಗಿರುವುದಿಲ್ಲ, ಬದಲಿಗೆ ಗುಲಾಬಿ ಬಣ್ಣದಲ್ಲಿದ್ದರೆ ಅದು ತಾಜಾ ಕೋಳಿ ಎಂದು ಅರ್ಥ .
3. ನೀವು ಕೋಳಿಯನ್ನು ತೊಳೆಯುವಾಗ ವಾಸನೆಯನ್ನು ಕಂಡು ಹಿಡಿಯಬಹುದು ,ಕೋಳಿಯ ಗುಣಮಟ್ಟವನ್ನು ಕಂಡುಹಿಡಿಯಲು ಇದು ಸುಲಭವಾದ ಮಾರ್ಗವಾಗಿದೆ, ನೀವು ತೊಳೆಯುವಾಗ ಕೆಟ್ಟ ವಾಸನೆ ಬಂದರೆ ಅದು ಫ್ರೆಶ್ ಚಿಕನ್ ಅಲ್ಲ ಎನ್ನಬಹುದು .
4. ನೀವು ಕೋಳಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮಾಂಸವು ಹಸಿರು ಅಥವಾ ಕಪ್ಪಾಗಿದ್ದರೆ ಕೋಳಿ ಹಳೆಯದು ಅಥವಾ ಸೋಂಕಿತ ಕೋಳಿ ಎಂದು ಅರ್ಥ .




