- Advertisement -
Udupi News: ಮಳೆಗಾಲದ ಹಿನ್ನಲೆ ಉಡುಪಿ ಜಿಲ್ಲೆಯ ಬೀಚ್ ಗಳಿಗೆ ಪ್ರವೇಶ ನಿಷೇಧ ಹೇರಲಾಗಿದೆ. ಈಗಾಗಲೇ ಜಿಲ್ಲೆಯ ಮಲ್ಪೆ ಬೀಚ್ಗೆ ಬಲೆ ಅಳವಡಿಕೆ ಮಾಡಲಾಗಿದೆ. ಆದರೆ ಮರವಂತೆ ಬೀಚ್ಗೆ ಯಾವುದೇ ಭದ್ರತೆ ಕೈಗೊಂಡಿಲ್ಲ. ಹೀಗಾಗಿ ಮೂರು ಕಿಲೋಮೀಟರ್ ಉದ್ದದ ಬೀಚ್ಗೆ ನಿತ್ಯ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಬೀಚ್ ಸೆಕ್ಯೂರಿಟಿ ಮಾತಿಗೂ ಬೆಲೆ ಕೊಡದೆ ಸಮುದ್ರಕ್ಕೆ ಇಳಿದು ಹುಚ್ಚಾಟ ಪ್ರದರ್ಶಿಸುತ್ತಿದ್ದಾರೆ. ದಿನವೂ ಸಾವಿರಾರು ಪ್ರವಾಸಿಗರು ಮರವಂತೆ ಬೀಚ್ಗೆ ಭೇಟಿ ನೀಡುತ್ತಿದ್ದು ಬೀಚ್ಗೆ ಫೆನ್ಸಿಂಗ್ ಅಳವಡಿಸುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ. ಮಲ್ಪೆ ಬೀಚಿನಷ್ಟೇ ಪ್ರಾಮುಖ್ಯತೆಯನ್ನು ಮರವಂತೆ ಬೀಚ್ ಗೆ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
- Advertisement -