Sunday, September 8, 2024

Latest Posts

ಕಚೇರಿಗೆ ಲೇಟಾಗಿ ಬಂದ್ರೆ ದಂಡ ಫಿಕ್ಸ್!

- Advertisement -

ಖಾಸಗಿ ಕಂಪನಿಗಳಲ್ಲಿ ಮೊದಲೆಲ್ಲ ಉದ್ಯೋಗಿಗಳು ಟ್ರಾಫಿಕ್ ಸಮಸ್ಯೆಯಿಂದಲೂ ಅಥವಾ ಇನ್ನಾವುದೋ ವೈಯುಕ್ತಿಕ ಸಮಸ್ಯೆಗಳಿಂದ ಸ್ವಲ್ಪ ತಡವಾಗಿ ಬಂದರೂ ಇರಲಿ ಬಿಡಿ, ಪರವಾಗಿಲ್ಲ ಅಂತ ಬಾಸ್​ಗಳು ಸಹಿಸಿಕೊಳ್ಳುತ್ತಿದ್ರು. ಆದರೆ ಈಗೆಲ್ಲಾ ತುಂಬಾನೇ ಕಟ್ಟುನಿಟ್ಟಾದ ನಿಯಮಗಳನ್ನು ಖಾಸಗಿ ಕಂಪನಿಗಳು ಜಾರಿಗೆ ತಂದಿವೆ.

ಮುಂಬೈನ ಬ್ಯೂಟಿ ಬ್ರ್ಯಾಂಡ್ ಎವರ್ ಕಂಪನಿ ಸಂಸ್ಥಾಪಕ ಕೌಶಾಲ್ ಶಾ, ಕಚೇರಿಗೆ ತಡವಾಗಿ ಬಂದರೆ 200 ರೂಪಾಯಿ ದಂಡ ನಿಯಮ ಜಾರಿಗೊಳಿಸಿದ್ದಾರೆ. ಕುತೂಹಲದ ವಿಚಾರ ಅಂದ್ರೆ, ಕೌಶಾಲ್ ಅವರೇ 5 ಬಾರಿ ತಡವಾಗಿ ಕಚೇರಿಗೆ ಆಗಮಿಸಿ ,1000 ರೂಪಾಯಿ ದಂಡ ಪಾವತಿಸಿದ್ದಾರೆ.

ಕಂಪನಿಯಲ್ಲಿ ತಾವೇ ನಿಯಮ ಜಾರಿಗೊಳಿಸಿ ತಾವೇ 5 ಬಾರಿ ದಂಡ ಪಾವತಿ ಮಾಡಿರುವ ಕುರಿತು ಸಂಸ್ಥಾಪಕ ಕೌಶಾಲ್ ಅವರು, ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕಚೇರಿ ಸಮಯ ಬೆಳಗ್ಗೆ 9.30ಕ್ಕೆ ಉದ್ಯೋಗಿಗಳು ಕಚೇರಿ ಬರಬೇಕಿತ್ತು. ಆದರೆ, ಕೆಲವರು 10.30 ಹಾಗೂ 11 ಗಂಟೆ ಆದ್ರೂ ಕಚೇರಿಗೆ ಆಗಮಿಸುತ್ತಿರಲಿಲ್ಲ. ಹೀಗಾಗಿ, ಎಲ್ಲರೂ ಬೆಳಗ್ಗೆ 9.30ಕ್ಕೆ ಕಡ್ಡಾಯವಾಗಿ ಬರಬೇಕೆಂಬ ನಿಮಯಗೊಳಿಸಿದ್ದಾರೆ.

- Advertisement -

Latest Posts

Don't Miss