Dharwad News: ಧಾರವಾಡ: ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆ ಮಧ್ಯ ಅರಣ್ಯ ಭಾಗದಲ್ಲಿ ಅಪಾರ ಮಳೆ ಹಿನ್ನೆಲೆ, ಧಾರವಾಡದ ಬೇಡ್ತಿ ಹಳ್ಳ ಉಕ್ಕಿ ಹರಿಯುತ್ತಿದೆ.
ಧಾರಾಕಾರ ಮಳೆಗೆ ಸೇತುವೆ ಮುಳುಗಡೆಗೊಂಡಿದ್ದು, ಹಳ್ಳ ಉಕ್ಕಿ ಹರಿಯುತ್ತಿದೆ. ಈ ಕಾರಣಕ್ಕೆ, ಧಾರವಾಡ ತಾಲೂಕಿನ ಅಂಬ್ಲಿಕೊಪ್ಪ-ಡೊಂಬರಿಕೊಪ್ಪ ಗ್ರಾಮದ ಮಧ್ಯದ ಸಂಪರ್ಕ ಕಡಿತಗೊಂಡಿದೆ. ರಾತ್ರಿಯಿಡೀ ಅರಣ್ಯ ಭಾಗದಲ್ಲಿ ಮಳೆ ಸುರಿದಿದ್ದು, ಈ ಹಿನ್ನೆಲೆ ಬೇಡ್ತಿ ಹಳ್ಳಕ್ಕೆ ಅಪಾರ ಪ್ರಮಾಣದ ನೀರು ಸೇರಿದೆ.



