Friday, December 13, 2024

Latest Posts

ರೌಡಿಗಳಿಗೆ ಹೊಸ ಕಾನೂನು..!

- Advertisement -

www.karnatakatv.net :ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ಕ್ರೈಂ ರೇಟ್ ಜಾಸ್ತಿಯಾಗ್ತಿದ್ದಂತೆ ಇದೀಗ ಪೊಲೀಸರು ರೌಡಿಗಳ ಸದ್ದಡಗಿಸೋಕೆ ದಾರಿ ಕಂಡುಕೊಂಡಿದ್ದಾರೆ. ದಿನೇ ದಿನೇ ರೌಡಿಗಳ ಹಾವಳಿ ಜಾಸ್ತಿಯಾಗ್ತಿದ್ದು, ಜನರ ನೆಮ್ಮದಿ ಹಾಳು ಮಾಡೋದಲ್ಲದೆ, ಇದು ಪೊಲೀಸರಿಗೂ ತಲೆನೋವಾಗಿದೆ. ಹೀಗಾಗಿ ರೌಡಿಗಳಿಗೆ ಹೊಸ ಕಾನೂನು ಮಾಡೋ ಮೂಲಕ, ಮತ್ತೆ  ಕಮಕ್ ಕಿಮಕ್ ಅಂದ್ರೆ ಹುಷಾರ್ ಇನ್ಮೇಲಾದ್ರೂ ನೆಟ್ಟಗಿರಿ ಅಂತ ಸಂದೇಶ ರವಾನಿಸಿದ್ದಾರೆ.

ಕಂಡಕಂಡ ಕಡೆ ಹಾವಳಿ ಇಟ್ಟು ಜನರ ನಮ್ಮದಿಗೆಡಿಸುತ್ತಿರೋ ರೌಡಿಗಳಿಗೆ ಇದೀಗ ಬೆಂಗಳೂರು ಪೊಲೀಸರು ತಕ್ಕ ಪಾಠ ಕಲೀಸೋದಕ್ಕೆ ರೆಡಿಯಾಗಿದ್ದಾರೆ. 110ನೇ ಸೆಕ್ಷನ್ ಜಾರಿಗೆ ತಂದು ಇನ್ಮುಂದೆ ಯಾವುದೇ ಅಪರಾಧ ಚಟುವಟಿಕೆಯಲ್ಲಿ ಭಾಗವಹಿಸಿದ್ರೆ ಜೈಲು ಪಾಲಾಗೋದು ಗ್ಯಾರೆಂಟಿ ಅಂತ ರೌಡಿಗಳಲ್ಲಿ ನಡುಕ ಹುಟ್ಟಿಸಿದ್ದಾರೆ.  ಇನ್ನು ಈ ಸಿಆರ್ ಪಿ ಸಿ ಸೆಕ್ಷನ್ 110ರ ಪ್ರಕಾರ ಪೊಲೀಸರು ರೌಡಿಗಳ ಮೇಲೆ ತೆಗೆದುಕೊಳ್ಳಲಾಗೋ ಕ್ರಮಗಳ ಬಗ್ಗೆ ಹೇಳೋದಾದ್ರೆ, ಮೊದಲಿಗೆ ಈ ಸೆಕ್ಷನ್ ಅಡಿ ರೌಡಿಗಳಿಂದ ಒಂದು ಬಾಂಡ್ ಗೆ ಸೈನ್ ಮಾಡಿಸಿಕೊಳ್ತಾರೆ. ಆ ಬಾಂಡ್ ನಲ್ಲಿ ತಾನು ಯಾವುದೇ ಪ್ರಕಾರದ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗೋದಿಲ್ಲ ಅಂತ ರೌಡಿ ಶೀಟರ್ ಸಹಿ ಹಾಕಬೇಕು. ಹೀಗೆ ಸಹಿ ಹಾಕಿದ ರೌಡಿ ಒಂದು ವೇಳೆ ಅಪ್ಪಿತಪ್ಪಿ ಕೊಲೆ, ಸುಲಿಗೆ ದರೋಡೆಯಂತಹ ಯಾವುದಾದ್ರೂ ಕ್ರೈಂ ನಲ್ಲಿ ಭಾಗಿಯಾದ್ರೆ ನೇರವಾಗಿ ಜೈಲಿಗೆ ಅಟ್ಟಲಾಗುತ್ತೆ. ಇಂಥಹ ರೌಡಿಗಳ ಮೇಲೆ ಠಾಣೆಗಳಲ್ಲಿ ಪ್ರಕರಣ ದಾಖಲಿಸೋದಾಗಲೀ, ಅವರನ್ನ ಜಡ್ಜ್ ಎದುರಿಗೆ ಹಾಜರುಪಡಿಸೋ ಸೀನೇ ಇರಲ್ಲ. ರೌಡಿಗಳಿಗೆ ಡಿಸಿಪಿ ಮುಖಾಂತರ ಡೈರೆಕ್ಟ್ ಆಗಿ ಜೈಲು ದಾರಿ ತೋರಿಸ್ತಾರೆ.

ಬಾಂಡ್ ನಿಯಮಾವಳಿ ಮೀರಿದ ರೌಡಿಗಳಿಗೆ ಅಪರಾಧ ಕೃತ್ಯವನ್ನು ಆಧರಿಸಿ 3 ರಿಂದ 10 ತಿಂಗಳುಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗುತ್ತೆ.

ಅಂದಹಾಗೆ ಸಿಆರ್ಪಿಸಿಯ 110ನೇ ಸೆಕ್ಷನ್ನಲ್ಲಿ ಜೈಲಿಗೆ  ಹೋದ ವ್ಯಕ್ತಿಗೆ ಬೇಲ್ ಸಿಗೋದಿಲ್ಲ. ಹಿಂದೆಲ್ಲಾ ರೌಡಿಗಳು ಏನೇ ಮಾಡಿದ್ರೂ ಮತ್ತೊಂದು ದಾರಿ ಮಾಡಿಕೊಂಡು ಬೇಲ್ ಮೂಲಕ ಹೊರಬಂದು ಮತ್ತದೇ ಚಾಳಿ ಶುರುಮಾಡಿಕೊಳ್ತಿದ್ರು. ಪೊಲೀಸರು ಹಗಲು ರಾತ್ರಿಯೆನ್ನದೆ ಆರೋಪಿಗಳನ್ನ ಹಿಡಿದ್ರೂ ಬೇಲ್ ಪಡೆದು ಹೊರಬಂದು ತಮ್ಮ ಕೆಲಸ ಮುಂದುವರಿಸ್ತಿದ್ರು. ಆದ್ರೆ ಸೆಕ್ಷನ್ 110 ಇದಕ್ಕೆ ಅವಕಾಶವನ್ನೇ ಕೊಡೋದಿಲ್ಲ. ಮಿನಿಮಮ್ 3 ತಿಂಗಳಿಂದ ಮ್ಯಾಕ್ಸಿಮಂ 10 ತಿಂಗಳಾದ್ರೂ ಬಾಂಡ್ ನ ರೂಲ್ಸ್ ಬ್ರೇಕ್ ಮಾಡೋ ರೌಡಿಗಳಿಗೆ ಜೈಲೂಟ ಫಿಕ್ಸ್ .

ಅಂದಹಾಗೆ ಈ ಸಿಆರ್ ಪಿಸಿ ಸೆಕ್ಷನ್ 110 ಈಗ ಮಾಡಿದ ಹೊಸ ಸೆಕ್ಷನ್ ಏನಲ್ಲಾ. ಇದು ಕಾನೂನಿನಲ್ಲಿ ಮೊದಲೇ ಇತ್ತು. ಆದ್ರೆ ಜಾರಿಗೊಳಿಸಲಾಗಿರಲಿಲ್ಲ ಅಷ್ಟೇ. ಆದ್ರೀಗ ಎಷ್ಟೇ ಪ್ರಯತ್ನ ಪಟ್ರೂ ಸೈಲೆಂಟ್ ಆಗದ ರೌಡಿಗಳಿಗೆ ಕೊನೆಯದ್ದಾಗಿ ಈ ಅಸ್ತ್ರ ಪ್ರಯೋಗಿಸೋಕೆ ಖಾಕಿ ಪಡೆ ತುದಿಗಾಲಲ್ಲಿ ಕಾಯುತ್ತಿದೆ.

ಕರ್ನಾಟಕ ಟಿವಿ – ಬೆಂಗಳೂರು

- Advertisement -

Latest Posts

Don't Miss