Thursday, December 26, 2024

Latest Posts

Cemetary: ಸರ್ಕಾರ ಸ್ಮಶಾನಕ್ಕೆ ಜಾಗ ಕೊಟ್ಟರೂ ಶವ ಸಂಸ್ಕಾರಕ್ಕೆ ಸ್ಥಳೀಯರಿಂದ ತಕರಾರು..!

- Advertisement -

ಬೆಳಗಾವಿ; ರಾಜ್ಯದಲ್ಲಿ ಸಾಕಷ್ಟು ಕಡೆ ಇನ್ನೂ ಕೂಡಾ ಮಹಿಳೆಯರಿಗೆ ಶೌಚಾಲಯ ಮತ್ತು ಮರಣ ಹೊಂದಿದರೆ  ಶವಸಂಸ್ಕಾರ ಮಾಡಲು ಸ್ಮಶಾನದ ಕೊರತೆ ಮಾತ್ರ ಯಾವ ಸರ್ಕಾರ ಬಂದರೂ ನಿವಾರಣೆ ಮಾಡುತ್ತಿಲ್ಲ. ಇದರಿಂದಾಗಿ ಜನ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ ಇದರಿಂದಾಗಿ ಜನರು ಸರ್ಕಾರದ ವಿರುದ್ದ ತಿರುಗಿ ಬೀಳಲು ಮುಂದಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಾವತಿಯ ಜನ ಗ್ರಾಮದಲ್ಲಿ ಯಾರಾದರೂ ತೀರಿ ಹೋದರೆ ಶವಸಂಸ್ಕಾರ ಮಾಡಲು ಹರಸಾಹಸ ಪಡುವಂತಾಗಿದೆ. ಹೂಳಲು ಜಾಗವಿಲ್ಲದೆ ರಸ್ತೆಯ ಬದಿಯಲ್ಲಿ ಶವಗಳನ್ನು ಹೂಳುತ್ತಿದ್ದಾರೆ.

ಸರ್ಕಾರ ಗ್ರಾಮದ ಸರ್ವೆ ನಂ 73 ರಲ್ಲಿ ಸ್ಮಶಾನ ಜಾಗ ಗುರುತಿಸಿ 34 ಲಕ್ಷ ಅನುದಾನ ಬಿಡುಗಡೆ ಮಾಡಿದರೂ ಗ್ರಾಮಸ್ಥರು ಆ ಜಾಗದಲ್ಲಿ ಸ್ಮಶಾನಕ್ಕೆ ಅವಕಾಶ ಕೊಡಬಾರದು ಎಂದು ತಕರಾರು ತೆಗೆಯುತ್ತಿದ್ದಾರೆ. ಗ್ರಾಮದಲ್ಲಿ ಶವ ಸಂಸ್ಕಾರಕ್ಕೆ ಸ್ಥಳಿಯರಿಂದ ತಕರಾರು ತೆಗೆಯುತ್ತಿರುವ ವಿಷಯ ಗೊತ್ತಿದ್ದರೂ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ ಆದಷ್ಟು ಬೇಗ ಇದಕ್ಕೆ ತಾಲೂಕಾಧಿಕಾರಿಗಳು ಪರಿಹಾರ ಒದಗಿಸಬೇಕು ಇಲ್ಲದಿದ್ದರೆ ತಹಶಿಲ್ ಕಛೇರಿ ಮುಂದೆ ಶವವಿಟ್ಟು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

Women Reservation: ನಿಪ್ಪಾಣಿಯಲ್ಲಿ ಬಿಜೆಪಿ ಕಾರ್ಯಕರ್ತೆಯರ ಮಹಿಳಾ ಮೀಸಲಾತಿ ಸಂಭ್ರಮಾಚರಣೆ..!

Cauvery Water: ಕಲಬುರ್ಗಿಯಲ್ಲೂ ಭುಗಿಲೆದ್ದ ಕಾವೇರಿ ಕಾವು..!

Shakthi yojane century; ಶಕ್ತಿ ಯೋಜನೆಯ ಶತದಿನದ ಸಂಭ್ರಮ ಹಂಚಿಕೊಂಡ ಸಿಎಂ..!

- Advertisement -

Latest Posts

Don't Miss