Sunday, September 8, 2024

Latest Posts

ಕಿತ್ತೂರು ಪಟ್ಟಣದ ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ

- Advertisement -

ಬೆಳಗಾವಿ: ಕಿತ್ತೂರಿನ ತಹಶೀಲ್ದಾರ್ ಸೋಮಲಿಂಗ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಿನ್ನೆ 2 ಲಕ್ಷ ಲಂಚ ಸ್ವೀಕರಿಸುವ ಸಂರ್ಭದಲ್ಲಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾನೆ. ಅಧಿಕಾರಿಗಳು ಮನೆಯಲ್ಲಿ ರಾತ್ರಿಯೆಲ್ಲ ಪರಿಶೀಲನೆ ಮಾಡಿ 10 ಲಕ್ಷಕ್ಕೂ ಹೆಚ್ಚು ನಗದನ್ನು ಸೇರಿ ಅನೇಕ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ನೀರು ಕೊಡದಿದ್ದರೆ ಕರ್ನಾಟಕಕ್ಕೆ ಹೋಗುತ್ತೇವೆ : ಮಹಾರಾಷ್ಟ್ರದ ಜತ್ತ ತಾಲೂಕಿನ ಜನರ ಕೂಗು

ಲೋಕಾಯುಕ್ತ ಎಸ್ ಪಿ ಯಶೋಧಾ ವಂಟಗೋಡೆ ನೇತೃತ್ವದ ಅಧಿಕಾರಿಗಳು ತಹಶೀಲ್ದಾರ್ ಮನೆ ಮೇಲೆ ದಾಳಿ ಮಾಡಿದ್ದಾರೆ. 10 ಎಕರೆ ಜಮೀನಿನ ಖಾತೆ ಬದಲಾವಣೆಗಾಗಿ ಖೋದಾನಾಪುರದ ರಾಜೇಂದ್ರ ಇನಾಮದಾರ್ ಅರ್ಜಿ ಸಲ್ಲಿಸಿದ್ದರು. ಈ ಕೆಲಸಕ್ಕೆ ತಹಶೀಲ್ದಾರ್ ಸೋಮಲಿಂಗ ಹಾಲಗಿ 5 ಲಕ್ಷ ಲಂಚ ಬೇಡಿಕೆ ಇಟ್ಟಿದ್ದರು. ಹೀಗಾಗಿ ನಿನ್ನೆ ಲಂಚ ಸ್ವೀಕರಿಸುವಾಗ ತಹಶೀಲ್ದಾರ್ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಗುಮಾಸ್ತ ಜಿ. ಪ್ರಸನ್ನ, ತಹಶೀಲ್ದಾರ್ ಸೋಮಲಿಂಗ ಹಾಲಗಿಯನ್ನು ಸದ್ಯ ಬಂಧಿಸಲಾಗಿದೆ.

26/11 ಮುಂಬೈ ದಾಳಿ ನೆನೆದು ಸಚಿವ ಎಸ್. ಜೈಶಂಕರ್ ಟ್ವೀಟ್

 

 

- Advertisement -

Latest Posts

Don't Miss