Dharwad News: ಧಾರವಾಡ: ಧಾರವಾಡದಲ್ಲಿ ಮಾತನಾಡಿದ ಶಾಸಕ ಅರವಿಂದ ಬೆಲ್ಲದ್, ಉಪಚುನಾವಣೆ ಫಲಿತಾಂಶದ ಬಗ್ಗೆ ಹೇಳಿಕೆ ನೀಡಿದ್ದಾರೆ.
3 ಕ್ಷೇತ್ರದಲ್ಲಿ ಪಕ್ಷ ಆಧಾರಿತ. ಚನ್ನಪಟ್ಟಣದಲ್ಲಿ ಯೋಗಿಶ್ವರ್ ಎರಡು ಸಲ ಸೋತಿದ್ದರು. ಹೀಗಾಗಿ ಸಿಂಪಥಿ ಇತ್ತು. ಚನ್ನಪಟ್ಟಣ ಗೆಲುವು ಕಾಂಗ್ರೆಸ್ ಗೆಲುವು ಅಲ್ಲ. ನಮ್ಮ ಪಕ್ಷದವರನ್ನು ಕರೆದುಕೊಂಡು ಹೋಗಿ ಗೆದ್ದಿದ್ದಾರೆ. ಸಂಡೂರನಲ್ಲಿ ಪಕ್ಷದ ಒಂದೊಂದು ವೋಟ್ ಗೆ 2500 ವೋಟ್ ಕೊಟ್ಟಿದ್ದಾರೆ. ಆದರೂ ಅವರ ಲೀಡ್ ಕಡಿಮೆ ಆಗಿದೆ.
ವಾಲ್ಮೀಕಿ ಹಗರಣದಲ್ಲಿ ಹಣ ಹೊಡೆದಿದ್ದು ರಿಪ್ಲೆಕ್ಟ್ ಆಗಿತ್ತು. ಶಿಗ್ಗಾವಿಯಲ್ಲಿ ಭರತ ಬೊಮ್ಮಾಯಿ ಗೆಲ್ಲುತ್ತಾರೆಂಬ ವಿಶ್ವಾಸ ಇತ್ತು. 60 ಜನ ಅಭ್ಯರ್ಥಿಗಳು ತಯಾರ ಆಗಿದ್ದರು. ಅದು ಅಸಮಾಧಾನ ಆಗಿರಬಹುದು. ದೊಡ್ಡ ಪ್ರಮಾಣದ ದುಡ್ಡಿನ ಹಾವಳಿ ಶಿಗ್ಗಾವಿಯಲ್ಲಿ ಆಗಿದೆ. ಎಲ್ಲರೂ ಆತ್ಮವಿಮರ್ಶೆ ಮಾಡಿಕೊಳ್ಳುತ್ತೇವೆ. ರಾಜ್ಯ ಸರ್ಕಾರದ ಪರವೇ ಉಪಚುನಾವಣೆ ಇರುತ್ತವೆ ಎಂದು ಬೆಲ್ಲದ್ ಹೇಳಿದ್ದಾರೆ.