ಬೀದರ್ : ಇಂದು ಬೀದರ್ ಜಿಲ್ಲೆಯ ಹಲಸೂರು ತಾಲೂಕಿನ ಬೇಲೂರು ಗ್ರಾಮದಲ್ಲಿ ಜೈ ಭವಾನಿ ತಾಯಿಯ 76 ನೇ ಜಾತ್ರಾ ಮಹೋತ್ಸವದ ಅಂಗವಾಗಿ ರಾಜ್ಯ ಅರಣ್ಯ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಆಗಮಿಸಿದ್ದರು .
ಜಾತ್ರಾ ಮಹೋತ್ಸವಕ್ಕೆ ಆಗಮಿಸಿ ತಾಯಿಯ ಆಶಿರ್ವಾದ ಪಡೆದ ಸಚಿವರು ನಂತರ ಕಾರ್ಯಕರ್ತರ ಕುಶಲೋಪರಿ ವಿಚಾರಿಸಿದರು.ಬೇಲೂರು ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಸಚಿವರ ಪರ ಜೈಘೋಷಗಳನ್ನು ಕೂಗಿದರು. ಹಾಗೂ ಮುಂದಿನ ಮುಖ್ಯಮಂತ್ರಿ ಈಶ್ವರ್ ಖಂಡ್ರೆಯವರಿಗೆ ಜಯವಾಗಲಿ ಎಂದು ಘೋಷಣೆ ಕೂಗಿದರು.
ಈಗಾಗಲೆ ಮುಂದಿನ ಸಿಎಂ ಡಿಕೆ ಶಿವಕುಮಾರ್ ಆಗುತ್ತಾರೆ ಎನ್ನುವ ಕೂಗು ಕೆಳಿಬರುತ್ತಿರುವ ಹಿನ್ನೆಲೆಯಲ್ಲೆ ಇದಿಗ ಈಶ್ವರ ಖಂಡ್ರೆ ಮುಂದಿನ ಸಿಎಂ ಆಗಲಿದ್ದಾರೆ ಎಂದು ಕಾರ್ಯಕರ್ತರು ಹುಮ್ಮಸ್ಸಿನಲ್ಲಿದ್ಧಾರೆ.
ಹು-ಧಾ ಪಾಲಿಕೆಯ ಧೀಮಂತ ಪ್ರಶಸ್ತಿಗೂ ಲಾಬಿ: ಸಾಧಕರಿಗೆ ಸಿಗಲಿ ಸೂಕ್ತ ಗೌರವ..!
ಬರಕ್ಕೆ ಈರುಳ್ಳಿ ಬೆಳೆ ಕುಂಠಿತ; ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆ, ರೈತನ ಪಾಲಿಗೂ ಕಣ್ಣೀರುಳ್ಳಿ