ಹುಬ್ಬಳ್ಳಿ :ಹುಬ್ಬಳ್ಳಿಯಲ್ಲಿ ಯುವಕನನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿದ ಪ್ರಕರಣಕ್ಕೆ ಪುಷ್ಟಿ ನೀಡುವಂತೆ ಮತ್ತೊಂದು ವಿಡಿಯೋ ವ್ಯೆರಲ್ ಆಗಿದೆ.ಬೆಂಡಿಗೇರಿ ಪೋಲೀಸ ಠಾಣೆಯಲ್ಲಿ ನಡೆಯುತ್ತಿರುವುದಾದರೂ ಏನು? ಹಲ್ಲೆ ಪ್ರಕರಣದ ಮತ್ತೊಂದು ವಿಡಿಯೋ ವ್ಯೆರಲ್ ಆಗಿದೆ.
ಈ ವಿಡಿಯೋದಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಜನರು ಯುವಕನನ್ನು ಕೂಡಿ ಹಾಕಿ ಹಲ್ಲೆ ಮಾಡಿದ್ದಾರೆ.ಅಲ್ಲದೇ ಮೌಲಾನ ಕರೆಸಿ ಕೋಳಿಗೆ ಚಾಕು ಹಾಕಿದಂತೆ ಚಾಕು ಹಾಕಿ ಬಿಡೋಣ ಎಂದು ರೌಡಿಸಂ ಮೆರೆದಿದ್ದಾರೆ.ಇಂತಹ ವಿಡಿಯೋ ಪೋಲೀಸರಿಗೆ ಯಾಕೆ ಸಿಗತಾ ಇಲ್ಲಾ. ರೌಡಿಸಂಗೆ ಬ್ರೇಕ್ ಹಾಕಬೇಕಾದ ಪೋಲೀಸರೇ ರೌಡಿಸಂ ಮಾಡುವವರ ಬೆನ್ನಿಗೆ ನಿಂತರೇ ಎಂಬ ಅನುಮಾನ ಮೂಡುತ್ತಿದೆ.
ಮೊನ್ನೆಯ ಪ್ರಕರಣದಲ್ಲಿ ಇನ್ನೂ ಕೆಲವರನ್ನು ಆರೆಸ್ಟ ಮಾಡಬೇಕಾದ ಪೋಲೀಸರು ಸುಮ್ಮನೇ ಬಿಟ್ಟಿದ್ದು ಯಾಕೆ? ಈಗಲಾದರೂ ಈ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿರುವ ಜನರನ್ನು ಆರೆಸ್ಟ ಮಾಡಿ ಪೋಲೀಸರ ಮೇಲೆ ಜನರು ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳತಾರಾ ಕಾದು ನೋಡಬೇಕಾಗಿದೆ.
Arun Putthila : ಮನೆ ಮೇಲೆ ಬಿದ್ದ ಪಿಕಪ್ ವಾಹನ: ಪುತ್ತಿಲರಿಂದ ಪರಿಹಾರದ ಭರವಸೆ
Kaivalya Mata : ಕೈವಲ್ಯಮಠ ಸಂಸ್ಕತ ವೇದ ಪಾಠಶಾಲೆಗೆ ಕೈವಲ್ಯ ಶ್ರೀಗಳಿಂದ ಚಾಲನೆ